'ಆಟಗಾರರನ್ನು ತಡೆಯುವುದಿಲ್ಲ'
ಕೊಲಂಬೊ: ಐಪಿಎಲ್ 6ನೇ ಆವೃತ್ತಿಯಲ್ಲಿ ಶ್ರೀಲಂಕಾ ಆಟಗಾರರು ಭಾಗವಹಿಸದಂತೆ ತಡೆಯಬೇಕೆಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕಾರಿಗಳಿಗೆ ಒತ್ತಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಆಟಗಾರರನ್ನು ಐಪಿಎಲ್‌ನಲ್ಲಿ ಭಾಗವಹಿಸದಂತೆ ತಡೆಯುವಲ್ಲಿ ನಾವು ದುರ್ಬಲರಾಗಿದ್ದೇವೆ ಎಂದು ತಿಳಿಸಿದೆ. ಐಪಿಎಲ್‌ನಲ್ಲಿ ಆಟಗಾರರನ್ನು ಭಾಗವಹಿಸದಂತೆ ತಡೆಯಲು ನಮ್ಮಿಂದ ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ನಿಶಾಂತ ರಣತುಂಗಾ ತಿಳಿಸಿದ್ದಾರೆ. ಕಳೆ ದವಾರ ರಾಷ್ಟ್ರೀಯ ಬೌದ್ಧ ಸಮೂಹಗಳು ಶ್ರೀಲಂಕಾ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುವುದನ್ನು ತಡೆಯಬೇಕೆಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಒತ್ತಡ ಹೇರಿದ್ದವು. ಆನಂತರ ಶ್ರೀಲಂಕಾ ಸರ್ಕಾರ, ತಮಿಳುನಾಡಿನಲ್ಲಿ ಆಟಗಾರರು ಆಡದ ಕಾರಣ ಐಪಿಎಲ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು.
ಕ್ರಿಕೆಟ್: ಆರ್‌ಬಿಎಎನ್‌ಎಂಎಸ್‌ಗೆ ಜಯ
ಬೆಂಗಳೂರು: ಕೆಎಲ್‌ಇ ಶಿಕ್ಷಣ ಸಂಸ್ಥೆಯು ಆಯೋಜಿಸಿರುವ ಎಸ್.ನಿಜಲಿಂಗಪ್ಪ ಸುವರ್ಣ ಸಂಭ್ರಮ ಅಂತರ್ ಕಾಲೇಜು ಟಿ20ಪಂದ್ಯಾವಳಿಯ ಶನಿವಾರದ ಪಂದ್ಯದಲ್ಲಿ ಆರ್‌ಬಿಎಎನ್‌ಎಂಎಸ್ ಕಾಲೇಜು ತಂಡವು ಶೇಷಾದ್ರಿಪುರಂ ಕಾಲೇಜು ತಂಡದ ವಿರುದ್ಧ 1 ರನ್‌ಗಳ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಬಿಎಎನ್‌ಎಂಎಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 119 ರನ್‌ಗಳಿಸಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಶೇಷಾದ್ರಿಪುರಂ ಕಾಲೇಜು ತಂಡ 20 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟ್ ಆಗುವ ಮೂಲಕ 1 ರನ್‌ಗಳ ಸೋಲನುಭವಿಸಿತು. ಮಧ್ಯಾಹ್ನ ನಡೆದ ಮತ್ತೊಂದು ಪಂದ್ಯದಲ್ಲಿ ಕೆಎಲ್‌ಇ ಕಾಲೇಜು ತಂಡವು ಆರ್‌ಪಿಎ ಕಾಲೇಜು ತಂಡದ ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಕೆಎಲ್‌ಇ ಕಾಲೇಜು ತಂಡ 20 ಓವರ್‌ಗಳಲ್ಲಿ 137 ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಪಿಎ ಕಾಲೇಜು ತಂಡವು 19.3 ಓವರ್‌ಗಳಲ್ಲಿ 87ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕೆಎಲ್‌ಇ ಕಾಲೇಜು ತಂಡ 50ರನ್‌ಗಳ ಜಯ ಸಾಧಿಸಿತು.
'ಇಂಡೋನೇಶಿಯಾವನ್ನು ಲಘುವಾಗಿ ಪರಿಗಣಿಸಲ್ಲ'
ಬೆಂಗಳೂರು: ಏ.5ರಿಂದ ಆರಂಭವಾಗಲಿರುವ ಏಷ್ಯನ್ ಓಶಿಯಾನ್ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಎದುರಾಳಿ ಇಂಡೋನೇಶಿಯಾ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಭಾರತ ಡೇವಿಸ್ ಕಪ್ ತಂಡದ ತರಬೇತುದಾರ ಜೀಶನ್ ಅಲಿ ತಿಳಿಸಿದ್ದಾರೆ. ನಾವು ಇಂಡೋನೇಶಿಯಾ ತಂಡದ ವಿರುದ್ಧ 5-0 ಅಂತರದಲ್ಲಿ ಗೆದ್ದಿರುವ ದಾಖಲೆ ಹೊಂದಿದ್ದರು, ಅವರನ್ನು ಲಘುವಾಗಿ ಪರಿಗಣಿಸುವುದಿಲ್ಲ. ಫೆಬ್ರುವರಿಯಲ್ಲಿ ದಕ್ಷಿಣ ಕೋರಿಯಾ ವಿರುದ್ಧ ಪರಾಭವಗೊಂಡ ಹಿನ್ನಲೆಯಲ್ಲಿ ಈ ಪಂದ್ಯಾವಳಿ ನಮಗೆ ಗೆಲ್ಲಲೇ ಬೇಕಾದ ಪಂದ್ಯಾವಳಿಯಾಗಿದೆ ಎಂದು ತಿಳಿಸಿದರು. ದಕ್ಷಿಣ ಕೋರಿಯಾ ವಿರುದ್ಧ ನಮ್ಮ ಪ್ರಮುಖ ತಂಡವನ್ನು ಕಣಕ್ಕಿಳಿಸಿದ್ದರೆ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ಈ ಪಂದ್ಯಾವಳಿಯಲ್ಲಿ ಪ್ರಮುಖ ಆಟಗಾರರಿಂದ ಕೂಡಿದ ತಂಡವನ್ನು ಕಣಕ್ಕಿಳಿಸುತ್ತಿರುವುದು ಸಮಾಧಾನದ ಸಂಗತಿ ಎಂದು ಹೇಳಿದರು. ತಂಡದ ಎಲ್ಲಾ ಆಟಗಾರರು ಸೋಮವಾರದಿಂದ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಅಭ್ಯಾಸ ಆರಂಭಿಸಲಿದ್ದು, ಇದು ಆಟಗಾರರು ಹೊನಲು ಬೆಳಕಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಹಾಯವಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

