ಕ್ರೀಡೆ

ಮರ್ರೆ- ಫೆರರ್ ಮುಖಾಮುಖಿ

Published On :

ಫ್ಲೋರಿಡಾ: ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಮತ್ತು ಸ್ಪೇನ್‌ನ ಡೇವಿಡ್ ಫೆರರ್ ಮಿಯಾಮಿ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಪರಸ್ಪರ ಹಣಾಹಣಿ ನಡೆಸಲಿದ್ದಾರೆ. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.
ಮರ್ರೆ ಸೆಮಿಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕ ಪಡೆದಿದ್ದ ರಿಚರ್ಡ್ ಕಾಸ್ಖೆಟ್ ಅವರನ್ನು 6-7 (3), 6-1, 6-2 ಸೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದ ಮೊದಲ ಸೆಟ್‌ನಲ್ಲಿ ಕೈಚೆಲ್ಲಿದ್ದ ಮರ್ರೆ, ಪಂದ್ಯದಲ್ಲಿ ಸೋಲು ಕಾಣಲಿದ್ದಾರೆ ಎಂದೇ ಭಾವಿಸಲಾಗಿತ್ತು. ಅಲ್ಲದೆ ಪಂದ್ಯಾವಳಿಯಲ್ಲಿ ಇದುವರೆಗೂ ಇದೊಂದೇ ಸೆಟ್‌ನಲ್ಲಿ ಮರ್ರೆ ಸೋಲನುಭವಿಸಿದ್ದರು. ಆದರೆ, 2ನೇ ಮತ್ತು 3ನೇ ಸೆಟ್‌ನಲ್ಲಿ ಜಯ ಸಾಧಿಸಿದ ಮರ್ರೆ ಜಯದ ಕೇಕೆ ಹಾಕಿದರು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ.3ನೇ ಆಟಗಾರ ಡೇವಿಡ್ ಫೆರರ್ ವಿಶ್ವದ ನಂ.15ನೇ ಆಟಗಾರ ಟೊಮ್ಮಿ ಅವರನ್ನು 4-6, 6-2, 6-3 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು. ಹೀಗಾಗಿ ಈಗ ಫೈನಲ್ ಪಂದ್ಯದಲ್ಲಿ ಮರ್ರೆ ಮತ್ತು ಫೆರರ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. ಫೈನಲ್ ಪಂದ್ಯದಲ್ಲಿ ಒಂದು ವೇಳೆ ಫೆರರ್ ಗೆದ್ದರೆ 2ನೇ ಸ್ಥಾನಕ್ಕೇರಲಿದ್ದಾರೆ.
2009ರಲ್ಲಿ ಮತ್ತು ಕಳೆದ ವರ್ಷ ಈ ಪಂದ್ಯಾವಳಿಯಲ್ಲಿ ಮರ್ರೆ ರನ್ನರ್ಸ್ ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ವರ್ಷ ಸಹ ಫೈನಲ್ ಪ್ರವೇಶಿಸಿದ್ದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.
ಕಳೆದ ಐದು ಪಂದ್ಯಾವಳಿಗಳಲ್ಲಿ ಫೆರರ್ ಸೆಮಿಫೈನಲ್ ಪಂದ್ಯಗಳಲ್ಲಿ ಜಯ ಕಂಡುಕೊಂಡಿದ್ದಾರೆ. ಒಂದು ವೇಳೆ ಫೆರರ್ ಪ್ರಶಸ್ತಿ ಗೆದ್ದರೆ ಮಿಯಾಮಿ ಪ್ರಶಸ್ತಿ ಗೆದ್ದ ಮೊದಲ ಸ್ಪೇನ್ ಟೆನಿಸ್ ತಾರೆಯಾಗಲಿದ್ದಾರೆ.
'ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನಾನು ನನ್ನ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿರಲಿದೆ' ಎಂದು ಫೆರರ್ ಹೇಳಿದ್ದಾರೆ.
ಪ್ರಮುಖ ಆಟಗಾರರಾದ ರಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಪಂದ್ಯಾವಳಿಯಲ್ಲಿ ಭಾಗವಹಿಸದಿರುವುದು ಮತ್ತು ನೋವಾಕ್ ಜೊಕೊವಿಚ್ ಅವರು ಹಾಸ್ ವಿರುದ್ಧ ಸೋಲನುಭವಿಸಿದ್ದು, ಈ ಇಬ್ಬರು ಆಟಗಾರರು ಫೈನಲ್ ಪ್ರವೇಶಿಸುವ ಹಾದಿಯನ್ನು ಸುಗಮಗೊಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.