ಕ್ರೀಡೆ

ಕೋಮಾದಿಂದ ಹೊರಬಂದ ರೈಡರ್‌ಗೆ ಹಲ್ಲೆ ನಡೆಸಿದವರೇ ಗೊತ್ತಿಲ್ಲವಂತೆ

ಕೋಮಾದಿಂದ ಹೊರಬಂದ ರೈಡರ್‌ಗೆ ಹಲ್ಲೆ ನಡೆಸಿದವರೇ ಗೊತ್ತಿಲ್ಲವಂತೆ
Published On :

ವೆಲ್ಲಿಂಗ್ಟನ್: ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ ಜೆಸ್ಸಿ ರೈಡರ್ ಶನಿವಾರ ಕೋಮಾದಿಂದ ಹೊರಬಂದಿದ್ದಾರೆ. ಆದರೆ, ತಮ್ಮ ಮೇಲೆ ಯಾರು ದಾಳಿ ಮಾಡಿದ್ದಾರೆ ಎಂಬುದು ಮಾತ್ರ ಅವರಿಗೆ ಗೊತ್ತಿಲ್ಲವಂತೆ. ಆರೋಗ್ಯ ಸುಧಾರಿಸುತ್ತಿದೆ ಎಂದು ರೈಡರ್ ಮ್ಯಾನೇಜರ್ ಅರೋನ್ ಲೀ ಹೇಳಿದ್ದಾರೆ.
ಗುರುವಾರ ಬೆಳಗ್ಗೆ ರೈಡರ್ ಅವರನುಢಿ ಆಸ್ಪತ್ರೆಗೆ ದಾಖಲಿಸಿದಾಗ ಚಿಂತಾಜನಕ ಸ್ಥಿತಿಯಲ್ಲಿ ಅವರಿಗೆ ಕೃತಕ ಉಸಿರಾಟದ ನೆರವು ನೀಡಲಾಗಿತ್ತು.
ಹಲ್ಲೆಯ ಸಂದರ್ಭದಲ್ಲಿ ರೈಡರ್ ತಲೆ ಮತ್ತು ಪುಪ್ಪಸದ ಮೇಲೆ ಬಲವಾದ ಏಟು ಬಿದ್ದಿತ್ತು. ಯಾರು ಹಲ್ಲೆ ನಡೆಸಿದ್ದರು ಮತ್ತು ಯಾಕೆ ಎಂಬುದು ನಿಗೂಢವಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
'ರೈಡರ್ ಆರೋಗ್ಯ ಸ್ಥಿತಿ ಸುಧಾರಿಸಿದೆ. ಈಗ ಕೋಮಾದಿಂದ ಹೊರಬಂದಿದ್ದಾರೆ. ಅವಲ್ಲದೆ ಜೆಸ್ಸಿಗೆ ಪ್ರಜ್ಞೆ ಬಂದಿದ್ದು ನಮ್ಮೊಂದಿಗೆ ಮಾತನಾಡುತ್ತಿದ್ದಾರೆ' ಎಂದು ಲೀ ತಿಳಿಸಿದರು.
ರೈಡರ್ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆಂದು ನಂಬಲಾಗಿದೆ. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ಹಲ್ಲೆಯಲ್ಲಿ ನಾಲ್ಕು ಜನರು ಭಾಗವಹಿಸಿದ್ದಾರೆ ಎನ್ನಲಾಗಿದೆ. ಹಲ್ಲೆಯ ಸಂದರ್ಭ ರೈಡರ್ ಹೊಡೆತ ತಾಳಲಾರದೆ ರಕ್ತದ ವಾಂತಿ ಮಾಡಿಕೊಂಡಿದ್ದರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.