ಕ್ರೀಡೆ

ಅಥ್ಲೆಟಿಕ್ಸ್: ಚಿನ್ನ ಗೆದ್ದ ರಂಜಿತ್, ಓಂ ಪ್ರಕಾಶ್

Published On :

ಪಟಿಯಾಲ: ಈ ಋುತುವಿನ ಆರಂಭದಲ್ಲಿ ಇಂಡಿಯನ್ ಗ್ರ್ಯಾನ್ ಪ್ರಿಕ್ಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ರಂಜಿತ್ ಮಹೇಶ್ವರಿ ಪುರುಷರ ವಿಭಾಗದ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ರೈಲ್ವೆಸ್ ತಂಡವನ್ನು ಪ್ರತಿನಿಧಿಸಿದ್ದ ರಂಜಿತ್ 16.67 ಮೀ. ಜಿಗಿಯುವ ಮೂಲಕ ಚಿನ್ನವನ್ನು ಗೆದ್ದಿದ್ದಾರೆ. ಒಎನ್‌ಜಿಸಿ ತಂಡವನ್ನು ಪ್ರತಿನಿಧಿಸಿದ್ದ ಅಪ್ರಿಂಧರ್ ಸಿಂಗ್ 15.92 ಮೀ. ಜಿಗಿಯುವ ಮೂಲಕ ಬೆಳ್ಳಿ ಪದಕ ಗೆದ್ದರೆ ಉತ್ತರಪ್ರದೇಶದ ಸೌರಭ್ 15.76 ಮೀ. ಜಿಗಿಯುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಶಾಟ್‌ಪುಟ್ ವಿಭಾಗದಲ್ಲಿ ಒಎನ್‌ಜಿಸಿ ತಂಡದ ಓಮ್ ಪ್ರಕಾಶ್ ಚಿನ್ನದ ಪದಕ ಗೆದ್ದರೆ, ರೈಲ್ವೆಸ್‌ನ ಬಾಲ ಮುರುಗನ್ ಪುರುಷರ 100ಮೀ.ನಲ್ಲಿ ಜಯಗಳಿಸಿದ್ದಾರೆ.

ವಿಶ್ವಕಪ್ ಶೂಟಿಂಗ್: ಕೊರಿಯಾಕ್ಕೆ ಭಾರತ
ನವದೆಹಲಿ:
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅಭಿನವ್ ಬಿಂದ್ರಾ ಹಾಗೂ ಬೆಳ್ಳಿ ಪದಕ ಗೆದ್ದ ವಿಜಯ್ ಕಮಾರ್ ಸೇರಿದಂತೆ ಒಟ್ಟು 30 ಸದಸ್ಯರ ಭಾರತ ಶೂಟಿಂಗ್ ತಂಡ ದಕ್ಷಿಣ ಕೊರಿಯಾಕ್ಕೆ ತೆರಳಿದೆ. ಅಂತಾರಾಷ್ಟ್ರೀಯ ಶೂಟಿಂಗ್ ಫೆಡರೇಷನ್ ಆಯೋಜಿಸಿರುವ ವಿಶ್ವಕಪ್ ಶೂಟಿಂಗ್ ಏಪ್ರಿಲ್ 2ರಿಂದ 10ರವರೆಗೆ ನಡೆಯಲಿದೆ. ಈ ವಿಶ್ವಕಪ್‌ಗೆ ಅಂತಾರಾಷ್ಟ್ರೀಯ ಶೂಟಿಂಗ್ ಫೆಡರೇಷನ್ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೊಸ ನಿಯಮಗಳ ಪ್ರಕಾರ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಪಂದ್ಯಾವಳಿಯಲ್ಲಿ ಅರ್ಹತಾ ಸುತ್ತಿನಲ್ಲಿ ಗಳಿಸಿದ ಅಂಕಗಳನ್ನು ಅಂತಿಮ ಸುತ್ತಿಗೆ ಪರಿಗಣಿಸಲಾಗುವುದಿಲ್ಲ. ಇಬ್ಬರು ಶ್ರೇಷ್ಠ ಶೂಟರ್‌ಗಳು ಫೈನಲ್ ಪ್ರವೇಶಿಸಲಿದ್ದು, ಗೆದ್ದವರಿಗೆ ಚಿನ್ನ ಮತ್ತು ಸೋತವರಿಗೆ ಬೆಳ್ಳಿ ಪದಕ ನೀಡಲಾಗುತ್ತದೆ. ಇತ್ತೀಚೆಗೆ ನಡೆದ ಎರಡು ಆಯ್ಕೆ ಟ್ರಯಲ್ಸ್‌ನಲ್ಲಿ ಭಾರತದ ಶೂಟರ್‌ಗಳಿಗೆ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ.

'ಭಾರತ ಉತ್ತಮ ಪ್ರದರ್ಶನ ನೀಡಲಿದೆ'
ಬೆಂಗಳೂರು
: ಏ.5ರಿಂದ ಆರಂಭವಾಗಲಿರುವ ಡೇವಿಸ್‌ಕಪ್ ಪಂದ್ಯಾವಳಿಗೆ ಭಾರತ ತಂಡ ಅಭ್ಯಾಸ ನಡೆಸುತ್ತಿದ್ದು, ಇಂಡೋನೇಷ್ಯಾ ವಿರುದ್ಧ ಭಾರತ ತಂಡ ಗೆಲ್ಲುವ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಲಿದೆ ಎಂದುತಂಡದ ಆಟವಾಡದ ನಾಯಕ ಎಸ್.ಪಿ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. 28 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಡೇವಿಸ್‌ಕಪ್ ಅನ್ನು ಆಯೋಜಿಸುತ್ತಿರುವುದು ಉತ್ತಮವಾಗಿದೆ.ನಮಗೆ ಬೇಕಾದ ರೀತಿಯಲ್ಲಿ ನಿಧಾನಗತಿಯ ಕೋರ್ಟ್‌ಗಳನ್ನು ಸಿದ್ಧಪಡಿಸಿರುವುದು ನಮಗೆ ಹೆಚ್ಚು ಸಂತಸವಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.