ದಿವಿಜ್-ರಾಜಾ ಜೋಡಿಗೆ ಸೋಲು
ಸಾನ್ ಲೂಯಿಸ್ ಪೊಟೊಸಿ (ಮೆಕ್ಸಿಕೋ): ಬಲಿಷ್ಠ ಪ್ರದರ್ಶನ ತೋರಿದ ಭಾರತದ ದಿವಿಜ್ ಶರಣ್ ಮತ್ತು ಪುರವ ರಾಜಾ ಜೋಡಿ, ಮೆಕ್ಸಿಕೋ ಎಟಿಪಿ ಚಾಲೆಂಜರ್ಸ್ ಪಂದ್ಯಾವಳಿಯಲ್ಲಿ ಸೋಲನುಭವಿಸಿದೆ. ದಿವಿಜ್ ಶರಣ್ ಮತ್ತು ಪುರವ ರಾಜಾ ಜೋಡಿ ಸೆಮಿಫೈನಲ್ ಪಂದ್ಯದಲ್ಲಿ ಸ್ವೀಜರ್ಲೆಂಡ್ನ ಮಾರ್ಕೋ ಚಿಡಿನೆಲ್ಲಿ ಮತ್ತು ಜರ್ಮನಿಯ ಪೀಟರ್ ಗೋಜೋವಾಜಿಕ್ ಜೋಡಿ ವಿರುದ್ಧ 6-7(3), 7-6(7), 11-13 ಸೆಟ್ಗಳ ಅಂತರದಿಂದ ಸೋಲುವ ಮುನ್ನ ತೀವ್ರ ಪೈಪೋಟಿ ನಡೆಸಿತು.
ತೀವ್ರ ಹಣಾಹಣಿಯಿಂದ ಕೂಡಿದ್ದ ಮೊದಲ ಮತ್ತು ಎರಡನೇ ಸೆಟ್ನಲ್ಲಿ ಎರಡೂ ಜೋಡಿಗಳು ಸಮಬಲದ ಹೋರಾಟ ನಡೆಸಿದವು. ಹೀಗಾಗಿ ಎರಡೂ ಸೆಟ್ಗಳು ಟೈ ಬ್ರೇಕರ್ನಲ್ಲಿ ಅಂತ್ಯಗೊಂಡವು. ಟೈ ಬ್ರೇಕರ್ನಲ್ಲಿ ಅಂತ್ಯಗೊಂಡ ಮೊದಲ ಸೆಟ್ನಲ್ಲಿ ಭಾರತ ಜೋಡಿ ಕೈಚೆಲ್ಲಿತು. ಆದರೆ, ಎರಡನೇ ಸೆಟ್ನಲ್ಲಿ ಸ್ವೀಜರ್ಲೆಂಡ್ ಮತ್ತು ಜರ್ಮನಿ ಜೋಡಿಯನ್ನು ಮಣಿಸುವಲ್ಲಿ ಯಶಸ್ವಿಯಾಯಿತು.
ಆದರೆ, ನಿರ್ಣಾಯಕ ಮೂರನೇ ಸೆಟ್ನಲ್ಲಿ ಭಾರತದ ಜೋಡಿ ಕೊಂಚ ಹಿನ್ನಡೆ ಅನುಭವಿಸಿತು. ಇದರ ಲಾಭ ಪಡೆದ ಸ್ವೀಜರ್ಲೆಂಡ್- ಜರ್ಮನಿ ಜೋಡಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಎರಡನೇ ಸೆಟ್ನ ಒಂದು ಹಂತದಲ್ಲಿ 3-6ರಿಂದ ಹಿನ್ನಡೆ ಅನುಭವಿಸಿದ್ದ ಭಾರತದ ಜೋಡಿ, ನಂತರ 9-7ರಿಂದ ಮುನ್ನಡೆ ಕಂಡುಕೊಳ್ಳುವ ಮೂಲಕ ಟೈ ಬ್ರೇಕರ್ ತಲುಪುವಂತೆ ನೋಡಿಕೊಂಡಿತು. ಆದರೆ, ಭಾರತ ಜೋಡಿಯ ಅದೃಷ್ಟ ಸರಿಯಿರಲಿಲ್ಲ. ಹೀಗಾಗಿ ಅಂತ್ಯದವರೆಗೂ ಸಮಬಲದ ಹೋರಟ ನೀಡಿ ಕೈಚೆಲ್ಲಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

