ಸೆರಾನಾ ಮುಡಿಗೆ ಪ್ರಶಸ್ತಿ
ಮಿಯಾಮಿ: ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಆರನೇ ಬಾರಿಗೆ ಮಾಯಾಮಿ ಮಾಸ್ಟರ್ಸ್ ಚಾಂಪಿಯನ್ಷಿಪ್ ಪಟ್ಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೆರನಾ ಅವರಿಗೆ ಇದು ವೃತ್ತಿಜೀವನದ 48ನೇ ಪ್ರಶಸ್ತಿಯಾಗಿದೆ.
ಸೆರೆನಾ ವಿಲಿಯಮ್ಸ್ ವಿಶ್ವದ ನಂ.2 ಆಟಗಾರ್ತಿ ಮಾರಿಯಾ ಶರಪೋವಾ ಅವರನ್ನು 4-6, 6-3, 6-0 ನೇರಸೆಟ್ಗಳ ಅಂತರದಿಂದ ಪರಾಭವಗೊಳಿಸಿದರು.
ಸೆರೆನಾ ಈ ಮುನ್ನ 2002, 2003, 2004, 2007 ಹಾಗೂ 2008ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಅಲ್ಲದೆ 1999 ಮತ್ತು 2009ರಲ್ಲಿ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದ್ದರು.
'ಆರನೇ ಬಾರಿ ಪ್ರಶಸ್ತಿ ಗೆದ್ದಿರುವುದು ಖುಷಿ ತಂದಿದೆ. ಪಂದ್ಯಾವಳಿಯ ಆರಂಭದಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ನಾನು ಹೊಂದಿರಲಿಲ್ಲ. ಈಗ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ' ಎಂದಿದ್ದಾರೆ ಸೆರೆನಾ.
ಈ ಜಯದೊಂದಿಗೆ ಸೆರೆನಾ ಅವರು ಶರಪೋವಾ ವಿರುದ್ಧ ಸತತ 11ನೇ ಬಾರಿ ಜಯ ಸಾಧಿಸಿದರು.
2008ರ ನಂತರ ಇದೇ ಮೊದಲ ಬಾರಿಗೆ ಶರಪೋವಾ, ವಿಲಿಯಮ್ಸ್ ವಿರುದ್ಧ ಹೋರಾಟ ನಡೆಸಿದರು. ತೀವ್ರ ಪೈಪೋಟಿ ನಡೆಸಿದರಾದರೂ, ಅಮೆರಿಕದ ಬಲಿಷ್ಠ ಆಟಗಾರ್ತಿ ಎದುರು ಶರಪೋವಾ ಆಟ ನಡೆಯಲಿಲ್ಲ.
'ಇತ್ತೀಚೆಗೆ ನಾನು ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದೇನೆ. ಆದರೆ, ಈ ಪಂದ್ಯದಲ್ಲಿ ಯಾಕೆ ಜಯ ಕಾಣಲಿಲ್ಲ ಎಂಬುದಕ್ಕೆ ಕಾರಣಗಳೇ ಇಲ್ಲ. ಆದರೆ, ಪಂದ್ಯ ಗೆಲ್ಲಲು ಬೇಕಾಗವಷ್ಟು ಪ್ರಯತ್ನವನ್ನು ನಾನು ಮಾಡಲಿಲ್ಲ ಎನಿಸುತ್ತಿದೆ. ಭವಿಷ್ಯದಲ್ಲಿ ನಾವಿಬ್ಬರೂ ಇನ್ನೂ ಅನೇಕ ಪಂದ್ಯಗಳನ್ನಾಡಲಿದ್ದು, ಸೆರೆನಾ ಅವರನ್ನು ಸೋಲಿಸುವುದರಲ್ಲಿ ಅನುಮಾನವಿಲ್ಲ' ಎಂದಿದ್ದಾರೆ ಶರಪೋವಾ.
ಆಧುನಿಕ ಯುಗದಲ್ಲಿ ಒಂದು ಪಂದ್ಯಾವಳಿಯಲ್ಲಿ 6 ಬಾರಿ ಪ್ರಶಸ್ತಿ ಗೆದ್ದ 4ನೇ ಮಹಿಳಾ ಆಟಗಾರ್ತಿ ವಿಲಿಯಮ್ಸ್ ಅವರಾಗಿದ್ದಾರೆ. ಇದಕ್ಕೂ ಮುನ್ನ ಗ್ರಾಫ್, ಕ್ರಿಸ್ ಎವರ್ಟ್ ಹಾಗೂ ಮಾರ್ಟಿನ್ ನಾರ್ವೋಟಿಲೋವ್ ಅವರು ಈ ಸಾಧನೆ ಮಾಡಿದ್ದರು. 'ಇದು ನನ್ನ ವೃತ್ತಿ ಜೀವನದ ಶ್ರೇಷ್ಠ ಪಂದ್ಯಾವಳಿ ಅಲ್ಲ. ಆದರೆ, ನಾವು ಯಾವಗ ಶ್ರೇಷ್ಠ ಸಾಧನೆ ಮಾಡುತ್ತೇವೆ ಮತ್ತು ಅಗ್ರ ಸ್ಥಾನದಲ್ಲಿದ್ದುಕೊಂಡು, ಸದಾ ಸುಧಾರಣೆ ಕಂಡುಕೊಳ್ಳಲು ಯತ್ನಿಸುತ್ತೇವೆ' ಎಂಬುದು ಮಹತ್ವದ್ದಾಗಿದೆ' ಎಂದಿದ್ದಾರೆ ಸೆರೆನಾ.
ವಿಲಿಯಮ್ಸ್ 15 ಬಾರಿ ಗ್ರಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಲ್ಲದೆ ಮಿಯಾಮಿ ಚಾಂಪಿಯನ್ಷಿಪ್ನ ಇತಿಹಾಸದಲ್ಲಿ ಅತಿ ಹಳೆಯ ಆಟಗಾರ್ತಿ ಎನಿಸಿದ್ದಾರೆ. ಎವರ್ಟನ್ಗಿಂತ ನಾಲ್ಕು ತಿಂಗಳು ಹಿರಿಯಳಾಗಿದ್ದಾಳೆ.
ಆದರೆ, 25 ವರ್ಷದ ಶರಪೋವಾ ಮಿಯಾಮಿ ಚಾಂಪಿಯನ್ಷಿಪ್ನಲ್ಲಿ 5ನೇ ಬಾರಿಗೆ ಪ್ರಶಸ್ತಿ ಸುತ್ತಿನಲ್ಲಿ ಕೈಚೆಲ್ಲಿದ್ದಾರೆ. ಹೀಗಾಗಿ ಶರಪೋವಾ ಅವರಿಗೆ ಇದು ಬೇಸರವನ್ನುಂಟು ಮಾಡಿದೆ.
ಇನ್ನು ಪುರುಷರ ವಿಭಾಗದಲ್ಲಿ ಇಂಗ್ಲೆಂಡ್ನ ಆ್ಯಂಡಿ ಮರ್ರೆ ಮತ್ತು ಸ್ಪೇನ್ನ ಡೇವಿಡ್ ಫೆರರ್ ಫೈನಲ್ ಪ್ರವೇಶಿಸಿದ್ದು ಪಂದ್ಯ ತೀವ್ರ ಹಣಾಹಣಿಯಿಂದ ನಡೆಯುವ ಸಾಧ್ಯತೆಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

