ಐಒಸಿ ಸಭೆಗೆ ಭಾರತದ ನಿಯೋಗ
ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ)ಯ ಮೇಲೆ ಹೇರಿರುವ ನಿಷೇಧವನ್ನು ಹಿಂಪಡೆಯುವ ಕುರಿತಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಜೊತೆ ನಡೆಸಲುದ್ದೇಶಿಸಿರುವ ಸಂಧಾನ ಸಭೆಗೆ ತೆರಳುವ ಅಧಿಕಾರಿಗಳ ಪಟ್ಟಿಯನ್ನು ಐಒಎ ಶುಕ್ರವಾರ ಅಂತಿಮಗೊಳಿಸಿದೆ.
ಮೇ. 15ರಂದು ಸ್ವಿಡ್ಜರ್ಲೆಂಡ್ನ ಲಾಸೆನ್ನೆಯಲ್ಲಿ ನಡೆಯಲಿರುವ ಈ ಸಭೆಗೆ ಭಾರತದ ನಿಯೋಗದಲ್ಲಿ ನಾಲ್ವರು ಐಒಎ ಸದಸ್ಯರು ಹಾಗೂ ಇಬ್ಬರು ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಯ ಅಧಿಕಾರಿಗಳು ಇದ್ದಾರೆ.
ಮೇ. 2ರಂದು ಐಒಎಗೆ ಪತ್ರ ಬರೆದಿದ್ದ ಐಒಸಿ, ಸಭೆಗೆ ಆಗಮಿಸಲಿರುವ ವ್ಯಕ್ತಿಗಳ ಹೆಸರುಗಳನ್ನು ತನಗೆ ತಿಳಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ, ಕೇಂದ್ರ ಸಚಿವರೊಂದಿಗೆ ತೆರಳಲಿರುವ ನಾಲ್ವರು ಐಒಎ ಅಧಿಕಾರಿಗಳ ಹೆಸರುಗಳನ್ನು ಶುಕ್ರವಾರ ಅಧಿಕೃತವಾಗಿ ಬಹಿರಂಗಗೊಳಿಸಿತು.
'ಸಂಧಾನಕಾರರು' ಯಾರ್ಯಾರು?: ಐಒಎ ಸಿದ್ಧಪಡಿಸಿರುವ ನಾಲ್ವರ ಪಟ್ಟಿಯಲ್ಲಿ, ವಿಜಯ್ ಕುಮಾರ್ ಮಲ್ಹೋತ್ರಾ (ಐಒಎ ಪ್ರಭಾರಿ ಅಧ್ಯಕ್ಷ), ಎನ್. ರಾಮಚಂದ್ರನ್ (ಸ್ಕ್ವಾಷ್ ರ್ಯಾಕೆಟ್ಸ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷ), ಟಾರ್ಲೊಚನ್ ಸಿಂಗ್ (ಭಾರತೀಯ ಆರ್ಚೆರಿ ಸಂಸ್ಥೆಯ ಉಪಾಧ್ಯಕ್ಷ) ಹಾಗೂ ಎಸ್. ರಘುನಾಥನ್ (ಭಾರತೀಯ ಕಯಾಕಿಂಗ್ ಕೆನೋಯಿಂಗ್ ಸಂಸ್ಥೆ ಅಧ್ಯಕ್ಷ) ಇದ್ದಾರೆ.
ಭಾತ್ರಾ ಇಲ್ಲ: ಹಾಕಿ ಇಂಡಿಯಾ ಸಂಸ್ಥೆಯ ಕಾರ್ಯದರ್ಶಿ ನರೇಂದ್ರ ಭಾತ್ರಾ ಅವರಿಗೆ ಪಟ್ಟಿಯಲ್ಲಿ ಸ್ಥಾನ ನೀಡದೇ ಇರುವುದು ಅಚ್ಚರಿ ತಂದಿದೆ. ನರೇಂದ್ರ ಭಾತ್ರಾ ಹಾಗೂ ಜಾರ್ಖಂಡ್ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಆರ್.ಕೆ. ಆನಂದ್ ಅವರಿಬ್ಬರೂ ಐಒಎ ಸಿದ್ಧಪಡಿಸುವ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆಂದು ಕೆಲ ಮಾಧ್ಯಮ ವರದಿಗಳು ಈ ಮೊದಲು ಅಂದಾಜಿಸಿದ್ದವು. ಆದರೆ, ಈ ಇಬ್ಬರನ್ನೂ ಐಒಸಿ, ಪಟ್ಟಿಗೆ ಸೇರ್ಪಡೆಗೊಳಿಸಲಾಗಿಲ್ಲ.
ಏತನ್ಮಧ್ಯೆ, ಅಮಾನತಿನಲ್ಲಿರುವ ಐಒಎನ ಅಭಯ್ ಸಿಂಗ್ ಚೌಟಾಲಾ ಅವರು, ಸಂಧಾನ ಸಭೆಗೆ ತೆರಳಲಿರುವ ನಾಲ್ವರ ಪಟ್ಟಿಯನ್ನು ತಾವೇ ಅಂತಿಮಗೊಳಿಸಿ, ಐಒಸಿಗೆ ಕಳುಹಿಸಿದ್ದರೆಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಆ ಪಟ್ಟಿಯಲ್ಲಿ ನರೇಂದ್ರ ಭಾತ್ರಾ ಹೆಸರಿತ್ತು. ಆದರೆ, ಆ ಪಟ್ಟಿಯನ್ನು ಐಒಸಿ ತಿರಸ್ಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

