ಪಂಜಾಬ್ಗೆ ಬೃಹತ್ಸವಾಲು
ಜೈಪುರ: ಆರಂಭಿಕ ಆಟಗಾರರಾದ ಕ್ರಿಸ್ ಗೇಯ್ಲ್ (61) ಮತ್ತು ಚೇತೇಶ್ವರ ಪೂಜಾರ (51) ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ಗೆ 191 ರನ್ಗಳ ಬೃಹತ್ ಮೊತ್ತದ ಸವಾಲೊಡ್ಡಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಇನಿಂಗ್ಸ್ ಆರಂಭವಾಗಿರಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ ನಿಗದಿತ ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
ಪಂಜಾಬ್ ಬೌಲರ್ಗಳನ್ನು ದಂಡಿಸಿದ ಕ್ರಿಸ್ ಗೇಯ್ಲ್ ಮೊತ್ತದಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದವು. 48 ಎಸೆತಗಳನ್ನು ಎದುರಿಸಿದ ಪೂಜಾರ್ ಅರ್ಧ ಶತಕದಲ್ಲಿ 8 ಬೌಂಡರಿಗಳು ಸೇರಿದ್ದವು.
ಅದ್ಭುತ ಜತೆಯಾಟ ಪ್ರದರ್ಶಿಸಿದ ಈ ಜೋಡಿ ಮೊದಲ ವಿಕೆಟ್ಗೆ 102 ರನ್ ಕಲೆ ಹಾಕು ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿತು. ಹೀಗಾಗಿ ಆರ್ಸಿಬಿ ಭಾರೀ ಮೊತ್ತವನ್ನೇ ದಾಖಲಿಸಲಿದೆ ಎನ್ನಲಾಗಿತ್ತು.
ಆದರೆ, 12 ಓವರ್ನಲ್ಲಿ ಕ್ರಿಸ್ ಗೇಯ್ಲ್ ಮನ್ಪ್ರೀತ್ ಗೋಲಿ ಬೌಲಿಂಗ್ನಲ್ಲಿ ಬೌಲ್ಡ್ ಆಡರೆ, ಚೇತೇಶ್ವರ ಪೂಜಾರ ಸಹ 16ನೇ ಓವರ್ನಲ್ಲಿ ಮನ್ಪ್ರೀತ್ ಗೋನಿ ಬೌಲಿಂಗ್ನಲ್ಲೇ ಬೌಲ್ಡ್ ಆದರು. ಗೇಯ್ಲ್ ನಂತರ ಬಂದ ನಾಯಕ ವಿರಾಟ್ ಕೊಹ್ಲಿ (14) ಪರ್ವಿಂದರ್ ಅವಾನಾ ಬೌಲಿಂಗ್ನಲ್ಲಿ ಶ್ಯಾನ್ ಮಾರ್ಷ್ಗೆ ಕ್ಯಾಚ್ ನೀಡಿ ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟರು.
ಇನಿಂಗ್ಸ್ನ ಅಂತ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಡಿವಿಲಿಯರ್ಸ್ ( ಅಜೇಯ 38) ಮತ್ತು ಮೊಯ್ಸಿಸ್ ಹೆನ್ರೀಕೆಸ್ ( ಅಜೇಯ 16) ಮುರಿಯದ ಜತೆಯಾಟದಲ್ಲಿ 46 ರನ್ ಪೇರಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ತಲುಪುವಂತೆ ನೋಡಿಕೊಂಡರು. 19 ಎಸೆತಗಳನ್ನು ಎದುರಿಸಿ ಡಿವಿಲಿಯರ್ಸ್ ಮೊತ್ತದಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿ ಹಾಗೂ ಹೆನ್ರಿಕೆಸ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿ ಸೇರಿದ್ದವು.
ಬಂಜಾಬ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಮನ್ಪ್ರೀತ್ ಗೋನಿ 2 ವಿಕೆಟ್ ಕಬಳಿಸಿದರೆ, ಪರ್ವಿಂದರ್ ಅವಾನಾ 1 ವಿಕೆಟ್ ಪಡೆದರು.
ಸ್ಕೋರ್ ಬೋರ್ಡ್ (ಅಪೂರ್ಣ)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 190/3 (20 ಓವರ್)
ಚೇತೇಶ್ವರ ಪೂಜಾರ ಬಿ ಮನ್ಪ್ರೀತ್ ಗೋನಿ 51 (48), ಕ್ರಿಸ್ ಗೇಯ್ಲ್ 61 (33), ವಿರಾಟ್ ಕೊಹ್ಲಿ ಸಿ ಮಾರ್ಷ್ ಬಿ ಆವಾನಾ 14 (14), ಡಿ ವಿಲಿಯರ್ಸ್ ಅಜೇಯ 38 (19), ಹೆನ್ರೀಕೆಸ್ ಅಜೇಯ 16 (7). ಇತರೆ 10.
ವಿಕೆಟ್ ಪತನ: 1-102, 2-133, 3-144.
ಬೌಲಿಂಗ್: ಪ್ರವೀಣ್ ಕುಮಾರ್ 4-0-28-0, ಪರ್ವಿಂದರ್ ಆವಾನಾ 4-0-28-1, ಮನ್ಪ್ರೀತ್ ಗೋನಿ4-0-41-2, ನಜೀರ್ 4-0-62-0, ಫಿಯೂಶ್ ಚಾವ್ಲಾ 4-0-26-0.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

