ಅರ್ಜುನ್- ರೋಹನ ಫೈನಲ್ಗೆ
ದಾವಣಗೆರೆ: ಕರ್ನಾಟಕದ ಸಿ.ಎಚ್. ಅರ್ಜುನ್- ರೋಹನ್ ಪ್ರಶಾಂತ್ ಜೋಡಿಯು ಸತತ ಎರಡೂವರೆ ಗಂಟೆ ಕಾಲ ತೀವ್ರ ಸ್ಪರ್ಧೆಯಿಂದ ಕೂಡಿದ್ದ ಪಂದ್ಯದಲ್ಲಿ ಅಂತಿಮವಾಗಿ ಜಯ ದಾಖಲಿಸುವ ಮೂಲಕ,ಟ್ಯಾಲೆಂಟ್ ಸರಣಿಯ 14 ವರ್ಷದ ಒಳಗಿನ ಬಾಲಕ- ಬಾಲಕಿಯರ ಅಖಿಲ ಭಾರತ ಟೆನಿಸ್ ಪಂದ್ಯಾವಳಿಯ ಬಾಲಕರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.
ನಗರದ ಹೈಸ್ಕೂಲ್ ಮೈದಾನದ ಅಂತಾರಾಷ್ಟ್ರೀಯ ಟೆನಿಸ್ ಅಂಕಣದಲ್ಲಿ ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿ.ಎಚ್. ಅರ್ಜುನ್- ರೋಹನ್ ಪ್ರಶಾಂತ್ ಜೋಡಿ, ಎದುರಾಳಿ ತಂಡವಾದ ತಮಿಳುನಾಡಿನ ಕೆ.ಎಸ್. ಧೀರಜ್- ಸಾಯಿಶಂಕರ್ ವಿರುದ್ಧ ನಡೆದ ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ 3- 6, 6- 3, 10- 5 ಸೆಟ್ಗಳಿಂದ ಜಯ ದಾಖಲಿಸಿದರು.
ಬಾಲಕರ ಸೆಮಿಫೈನಲ್ನಲ್ಲಿ ಮೊದಲ ಸೆಟ್ನಲ್ಲಿ ಹಿನ್ನಡೆ ಕಂಡ ಅರ್ಜುನ್- ರೋಹನ್ ಜೋಡಿ 2ನೇ ಸೆಟ್ನಲ್ಲಿ ಮುನ್ನಡೆ ಸಾಧಿಸಿತು. ಅಷ್ಟರಲ್ಲಾಗಲೇ ಎರಡು ಗಂಟೆಗೂ ಅಧಿಕ ಸಮಯ ಕಳೆದಿದ್ದ ಪಂದ್ಯವು 3ನೇ ಸೆಟ್ನಲ್ಲಿ ಎಡಗೈ ಆಟಗಾರ ಸಿ.ಎಚ್. ಅರ್ಜುನ್ನ ಸಮಯೋಚಿತ ಮತ್ತು ಜಾಣ್ಮೆಯ ಆಟದಿಂದಾಗಿ ಎದುರಾಳಿಗಳ ವಿರುದ್ಧ 10- 5 ಅಂತರದ ಗೆಲುವು ದಾಖಲಿಸಿತು.
ಪ್ರತಿಭಾಗೆ ಗೆಲವು: ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಪ್ರತಿಭಾ ಪಿ. ನಾರಾಯಣ ತಮ್ಮ ಎದುರಾಳಿ ಆಂಧ್ರಪ್ರದೇಶದ ಕೃತಿ ಸಿ. ಪಾರಿಕ್ ವಿರುದ್ಧ 7- 5, 7- 6 ಅಂತರದ ಜಯ ಪಡೆದು, ಫೈನಲ್ ಪ್ರವೇಶಿಸಿದರು.
ಮತ್ತೊಂದು ಸೆಮಿಫೈನಲ್ ನಲ್ಲಿ ದೀಕ್ಷಾ ತಮ್ಮ ಎದುರಾಳಿ ಚೈತಾಲಿ ವಿರುದ್ಧ 6- 3, 6- 2 ಅಂತರದ ಜಯ ಪಡೆದರು. ಮೇ 17ರಂದು ಪ್ರತಿಭಾ ಪಿ. ನಾರಾಯಣ ಹಾಗೂ ದೀಕ್ಷಾ ಮಧ್ಯೆ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಕರ್ನಾಟಕದ ಮಾಝ್ಖಾನ್ ತಮ್ಮ ಎದುರಾಳಿ 348ನೇ ಶ್ರೇಯಾಂಕಿತ ತಮಿಳುನಾಡಿನ ಕೆ.ಎಸ್. ಧೀರಜ್ ವಿರುದ್ಧ 6- 4, 6- 3 ಅಂತರದಲ್ಲಿ ಜಯ ದಾಖಲಿಸಿದರು. ಫೈನಲ್ ಪಂದ್ಯವು ಶುಕ್ರವಾರ ಮಾಝ್ಖಾನ್ ಮತ್ತು ಸಿ.ಎಚ್. ಅರ್ಜುನ್ ಮಧ್ಯೆ ನಡೆಯಲಿದೆ.
ಮಾಝ್ಖಾನ್ ವಿವೇಕ್ ಜೋಡಿ ಫೈನಲ್ಗೆ
ಮತ್ತೊಂದು ಸೆಮಿಫೈನಲ್ನಲ್ಲಿ ಕರ್ನಾಟಕದ ಅಗ್ರ ಶ್ರೇಯಾಂಕದ ಮಾಝ್ಖಾನ್- ವಿವೇಕ್ ಜೋಡಿಯು ಅರವಿಂದ ಕಲ್ಯಾಣ- ಜಿ. ಮನೀಷ್ ವಿರುದ್ಧ 6- 2, 6- 0 ಅಂತರದ ಜಯ ದಾಖಲಿಸಿ, ಫೈನಲ್ಗೆ ಅರ್ಹತೆ ಗಳಿಸಿದರು. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಮಾಝ್ಖಾನ್ ಹಾಗೂ ವಿವೇಕ್ ಜೋಡಿಯು ಎದುರಾಳಿಗಳು ಚೇತರಿಸಿಕೊಳ್ಳಲೂ ಆಗದಂತೆ ಸತತ ಎರಡೂ ಸೆಟ್ನಲ್ಲಿ ಮೇಲುಗೈ ಸಾಧಿಸಿ, ಜಯ ತಮ್ಮದಾಗಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

