ಕ್ರೀಡೆ

ಪಂಜಾಬ್‌ಗೆ ರೋಚಕ ಜಯ

Published On :

ಧರ್ಮಶಾಲಾ: ಆರಂಭದಲ್ಲಿ ಗಿಲ್‌ಕ್ರಿಸ್ಟ್ ಹಾಗೂ ಶಾನ್ ಮಾರ್ಷ್ ಅಂತ್ಯದಲ್ಲಿ ಡೇವಿಡ್ ಮಿಲ್ಲರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಸಂದೀಪ್ ಶರ್ಮಾ ಮಾರಕ ಬೌಲಿಂಗ್‌ನಿಂದಾಗಿ ಸಂಘಟಿತ ದಾಳಿ ನಡೆಸಿದ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 7ರನ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಪಂಜಾಬ್ ತಂಡವನ್ನು 20 ಓವರ್‌ಗಳಲ್ಲಿ 171 ರನ್ ನೀಡಿ 4 ವಿಕೆಟ್ ಕಬಳಿಸಿತು.
ಪಂಜಾಬ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಗಿಲ್‌ಕ್ರಿಸ್ಟ್ ಹಾಗೂ ಶಾನ್ ಮಾರ್ಷ್ ತಂಡಕ್ಕೆ ಉತ್ತಮ ಆರಂಭವನ್ನೇ ನೀಡಿದರು. 7.3 ಓವರ್‌ಗಳ ವರೆಗೂ ಆಡಿದ ಈ ಜೋಡಿ ತಂಡಕ್ಕೆ 60ರನ್‌ಗಳ ಕಾಣಿಕೆ ನೀಡಿತು.
ಈ ವೇಳೆ 26 ಎಸೆತಗಳಲ್ಲಿ 42 ರನ್‌ಗಳಿಸಿದ್ದ ಗಿಲ್‌ಕ್ರಿಸ್ಟ್ ಇರ್ಫಾನ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ ಆಗುವ ಮೂಲಕ ನಿರ್ಗಮಿಸಿದರು. ಗಿಲ್ಲಿ ತಮ್ಮ ಮೊತ್ತದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದ್ದರು.
ನಂತರ ಬಂದ ಅಜರ್ ಮಹ್ಮೂದ್ ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ನಿಲ್ಲಲಿಲ್ಲ. 13 ಎಸೆತಗಳನ್ನು ಎದುರಿಸಿದ ಅಜರ್ ಕೇವಲ 9 ರನ್‌ಗಳಿಸಿ ನೆಹ್ರಾ ಎಸೆತದಲ್ಲಿ ಕೌಲ್‌ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.
ಈ ವೇಳೆ ಜತೆಯಾದ ಶಾನ್ ಮಾರ್ಷ್ ಹಾಗೂ ಡೇವಿಡ್ ಮಿಲ್ಲರ್ ಜೋಡಿ 34 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡದ ರನ್‌ಗತಿಯನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಆದರೆ 44 ಎಸೆತಗಳಲ್ಲಿ 45 ರನ್‌ಗಳಿಸಿದ್ದ ಮಾರ್ಷ್ ಮಾರ್ಕೆಲ್ ಎಸೆತದಲ್ಲಿ ಪಠಾಣ್‌ಗೆ ಕ್ಯಾಚ್ ನೀಡಿದರು.
ನಂತರ ಜತೆಯಾದ ಮಿಲ್ಲರ್ ಹಾಗೂ ಸತೀಶ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಈ ಜೋಡಿ 47 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡ 170 ರನ್ ಗಡಿ ದಾಟಲು ನೆರವಾದರು. ಇನಿಂಗ್ಸ್‌ನ ಅಂತ್ಯದಲ್ಲಿ 13 ಎಸೆತಗಳಲ್ಲಿ 22 ರನ್‌ಗಳಿಸಿದ್ದ ಸತೀಶ್ ನೆಹ್ರಾ ಎಸೆತದಲ್ಲಿ ರೊಹ್ರೆರ್‌ಗೆ ಕ್ಯಾಚ್ ನೀಡಿದರು.  ಅಂತಿಮವಾಗಿ ಮಿಲ್ಲರ್ 44 ಹಾಗೂ ಚಾವ್ಲಾ 0 ರನ್‌ಗಳಿಸಿ ಅಜೇಯರಾಗುಳಿದರು.
ಇನ್ನು ಡೆವಿಲ್ಸ್ ತಂಡದ ಪರ ನೆಹ್ರಾ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರೆ, ಮಾರ್ಕೆಲ್ ಹಾಗೂ ಪಠಾಣ್ ತಲಾ 1 ವಿಕೆಟ್ ಪಡೆದರು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್‌ಗಳಿಸಿತು.
ಆರಂಭದಲ್ಲೇ 12ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡ ಡಿಲ್ಲಿ ತಂಡ ಆರಂಭಿಕ ಕುಸಿತ ಕಂಡಿತು. ಈ ವೇಳೆ ಕ್ರೀಸ್‌ಗಿಳಿದ ಸೆಹ್ವಾಗ್ 22 ಎಸೆತಗಳಲ್ಲಿ 30 ರನ್ ಕಲೆಹಾಕಿದರು. ಈ ವೇಳೆ ಅವಾನ ಎಸೆತದಲ್ಲಿ ಗಿಲ್‌ಕ್ರಿಸ್ಟ್‌ಗೆ ಕ್ಯಾಚ್ ನೀಡಿ ಹೊರ ನಡೆದರು.
ನಂತರ ಬಂದ ರೊಹ್ರೆರ್ ಏಕಾಂಗಿ ಹೋರಾಟ ನಡೆಸಿದರು. ಕೇವಲ 29 ಎಸೆತಗಳನ್ನು ಎದುರಿಸಿದ ರೊಹ್ರೆರ್ 3ಸಿಕ್ಸರ್ ಹಾಗೂ 4 ಬೌಂಡರಿಗಳು ಸೇರಿದ 49 ರನ್‌ಗಳಿಸಿದರು.
ಅಂತಿಮ ಓವರ್‌ನಲ್ಲಿ ತಂಡಕ್ಕೆ 22 ರನ್ ಅವಶ್ಯಕತೆ ಇದ್ದಾಗ ಮೊದಲ ಎಸೆತದಲ್ಲಿ ಚಾವ್ಲಾ ಎಸೆತದಲ್ಲಿ ಬೌಲ್ಡ್ ಆದ ರೊಹ್ರೆರ್ ನಿರಾಸೆ ಮೂಡಿಸಿದರು. ನಂತರ ಬಂದ ಮಾರ್ಕೆಲ್ 2 ಸಿಕ್ಸರ್ ಬಾರಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಇನಿಂಗ್ಸ್‌ನ ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾದ ಮಾರ್ಕೆಲ್ ಚೆಂಡನ್ನು ಎಡ್ಜ್ ಮಾಡಿಕೊಂಡ ಹಿನ್ನಲೆಯಲ್ಲಿ ಲಾಗ್ ಆನ್‌ನಲ್ಲಿದ್ದ ಮಿಲ್ಲರ್‌ಗೆ ಕ್ಯಾಚ್ ನೀಡಿದರು.

 ಸ್ಕೋರ್ ಬೋರ್ಡ್
ಕಿಂಗ್ಸ್ ಇಲೆವೆನ್ ಪಂಜಾಬ್ 171/4 (20 ಓವರ್)
ಗಿಲ್‌ಕ್ರಿಸ್ಟ್ ಸಿ ಮತ್ತು ಬಿ ಇರ್ಫಾನ್ 42(26), ಶಾನ್ ಮಾರ್ಷ್ ಸಿ ಇರ್ಫಾನ್ ಬಿ ಮಾರ್ಕೆಲ್ 45(44),  ಅಜರ್ ಮಹ್ಮೂದ್ ಸಿ ಕೌಲ್ ಬಿ ನೆಹ್ರಾ 9(13), ಮಿಲ್ಲರ್  ಅಜೇಯ 44(24), ಸತೀಶ್ ಸಿ ರೊಹ್ರೆರ್ ಬಿ ನೆಹ್ರಾ 22(13), ಪಿಯೂಷ್ ಅಜೇಯ 0(0) ಇತರೆ 9
ವಿಕೆಟ್ ಪತನ: 1-60, 2-86, 3-120, 4-167
ಬೌಲಿಂಗ್: ಇರ್ಫಾನ್ 4-0-28-1, ಸಿದ್ಧಾರ್ಥ್ 4-0-39-0, ಮಾರ್ಕೆಲ್ 4-0-22-1, ನೆಹ್ರಾ 4-0-38-2, ಯಾದವ್ 4-0-38-0
ಡೆಲ್ಲಿಡೇರ್‌ಡೆವಿಲ್ಸ್ 164/7 (20 ಓವರ್)
ಮಹೇಲ ಜಯವರ್ಧನೆ ಸಿ ವೋಹ್ರಾ ಬಿ ಸಂದೀಪ್ 39 (42), ಉನ್ಮುಕ್ತ್ ಚಾಂದ್ ಬೌಲ್ಡ್ ಪ್ರವೀಣ್ 7 (8), ಇರ್ಫಾನ್ ಪಠಾಣ್ ಸಿ ಗಿಲ್‌ಕ್ರಿಸ್ಟ್ ಬಿ ಸಂದೀಪ್ 1 (7), ವಾರ್ನರ್ ಸಿ ಮಾರ್ಷ್ ಬಿ ಸಂದೀಪ್ 0 (1), ಸೆಹ್‌ಗ್ ಸಿ ಗಿಲ್‌ಕ್ರಿಸ್ಟ್ ಬಿ ಅವಾನಾ 30 (22), ರೋಹ್ರರ್ ಬೌಲ್ಡ್ ಚಾವ್ಲಾ 49 (29), ಗೌತಮ್ ಅಜೇಯ 12 (8), ಮಾರ್ನೆ ಮಾರ್ಕೆಲ್ ಸಿ ಮಿಲ್ಲರ್ ಬಿ ಚಾವ್ಲಾ 13 (4), ಇತರೆ 13.
ವಿಕೆಟ್ ಪತನ: 1-11, 2-12, 3-12, 4-61, 5-111, 6-150, 7-164.
ಬೌಲಿಂಗ್: ಪ್ರವೀಣ್ 4-0-19-1, ಮೊಹ್ಮದ್ 4-0-40-0, ಸಂದೀಪ್ 4-1-23-3, ಅವಾನಾ 4-0-28-1, ಚಾವ್ಲಾ 4-0-44-2.

ಪಂದ್ಯಶ್ರೇಷ್ಠ: ಡೇವಿಡ್ ಮಿಲ್ಲರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.