20ರಿಂದ ಕಿರಿಯರ ಎಟಿಎಫ್
ಬೆಂಗಳೂರು: ಕರ್ನಾಟಕ ಟೆನಿಸ್ ತಾರೆ ತನ್ವಿ ಭಟ್ ಏಷ್ಯನ್ ರ್ಯಾಂಕಿಂಗ್ ಜೂನಿಯರ್ ಪಂದ್ಯಾವಳಿಯಲ್ಲಿ ಭಾರತ ಬಾಲಕಿಯರ ತಂಡದ ಮುಂದಾಳತ್ವ ವಹಿಸಲಿದ್ದಾರೆ.
ಇತ್ತೀಚೆಗಷ್ಟೇ ಇಂಡೋನೇಷ್ಯಾ ವಿರುದ್ಧ ಡೇವಿಸ್ ಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿದ್ದ ಗಾರ್ಡನ್ ಸಿಟಿ ಈಗ ಮತ್ತೊಂದು ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗೆ ಸಿದ್ಧವಾಗಿದೆ.
ಇದೇ ಮೇ 20ರಿಂದ 25ರವರೆಗೆ 14 ವರ್ಷದೊಳಗಿನ ಕಾರ್ಲೆ ಇನ್ಫ್ರಾಏಷ್ಯನ್ ರ್ಯಾಂಕಿಂಗ್ ಜೂನಿಯರ್ ಟೆನಿಸ್ ಪಂದ್ಯಾವಳಿಯನ್ನು ಸದಾಶಿವನಗರ ಕ್ಲಬ್ ಆಯೋಜಿಸಿದೆ. ಪಂದ್ಯಾವಳಿಯನ್ನು ನಡೆಸಲು ಏಷ್ಯನ್ ಟೆನಿಸ್ ಫೆಡರೇಷನ್ (ಎಟಿಎಫ್) ಅನುಮತಿ ನೀಡಿದ್ದು, ಅಖಿಲ ಭಾರತ ಟೆನಿಸ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಡಿಯಲ್ಲಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ.
ಪಂದ್ಯಾವಳಿ ಭಾರತದ ಕಿರಿಯ ಟೆನಿಸ್ ಆಟಗಾರರಿಗೆ ತವರಿನಲ್ಲಿ ಎಟಿಎಫ್ ಅಂಕಗಳನ್ನು ಗಳಿಸುವ ಅಭೂತಪೂರ್ವ ಅವಕಾಶ ಒದಗಿಸಿಕೊಟ್ಟಿದೆ.
ಜನವರಿ 1, 1999 ನಂತರ ಜನಿಸಿದವರು ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಡಿಸೆಂಬರ್ 2002ರ ನಂತರ ಜನಿಸಿದವರು ಅರ್ಹರಾಗಿರುವುದಿಲ್ಲ.
ಪಂದ್ಯಾವಳಿಯಲ್ಲಿ ಇತರ ದೇಶಗಳ ಕೆಲ ಆಟಗಾರರು ಭಾಗವಹಿಸುತ್ತಿದ್ದು, ಎಟಿಎಫ್ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನ ಹೊಂದಿರುವ ಅಸ್ಸಾಮ್ನ ಪರೀಕ್ಷಿತ್ ಸೋಮಾನಿ ಭಾರತ ತಂಡದ ಮುಂದಾಳತ್ವ ವಹಿಸಲಿದ್ದಾರೆ.
ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ವಿಭಾಗದ ಪ್ರಧಾನ ಸುತ್ತಿಗೆ ತಲಾ 32 ಆಟಗಾರರು ಈಗಾಗಲೇ ಪ್ರವೇಶ ಪಡೆದಿದ್ದಾರೆ.
ಪಂದ್ಯಾವಳಿಯಲ್ಲಿ ಪ್ರತಿಯೊಬ್ಬರು ಕನಿಷ್ಟ 5 ಪಂದ್ಯಗಳನ್ನು ಆಡಲಿದ್ದು, ಪ್ರದರ್ಶನದ ಆಧಾರದ ಮೇಲೆ ಅಂತಿಮ ಸುತ್ತಿಗೆ ಆಯ್ಕೆಯಾಗಲಿದ್ದಾರೆ. ಪ್ರವೇಶ ಪಡೆಯಲು ಸದಾಶಿವನಗರ ಕ್ಲಬ್ 16 ಕ್ರಾಸ್, ಸದಾಶಿವನಗರ ಬೆಂಗಳೂರು-560080. ದೂ. 08022863636, 08022869797ಗೆ ಆಸಕ್ತರು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

