ಕರ್ನಾಟಕ ಚಾಂಪಿಯನ್

ಬೆಂಗಳೂರು: ಅದ್ಭುತ ಪ್ರದರ್ಶನ ನೀಡಿದ ಕರ್ನಾಟಕ ಹಾಕಿ ತಂಡ ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಪರಾಭವಗೊಳಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಈ ಹಿಂದೆ 1968ರಲ್ಲಿ ಫೈನಲ್ ಪ್ರವೇಶಿಸಿದ್ದ ದಾಖಲೆಯನ್ನು ಮಾತ್ರ ಹೊಂದಿದ್ದ ಕರ್ನಾಟಕ ಈಗ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿತು. ಫೈನಲ್ ಪಂದ್ಯದಲ್ಲಿ ಉತ್ತರಪ್ರದೇಶದ ವಿರುದ್ಧ ಕರ್ನಾಟಕ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿತು.
ಪಂದ್ಯ ಆರಂಭದ 3ನೇ ನಿಮಿಷದಲ್ಲೇ ಕರ್ನಾಟಕದ ಉಮೇಶ್ ಗೋಲು ದಾಖಲಿಸಿದ್ದು ತಂಡ ವಿಶ್ವಾಸದ ಹೋರಾಟ ನೀಡಲು ಅನುಕೂಲವಾಯಿತು.
ಪಂದ್ಯದುದ್ದಕ್ಕೂ ಕರ್ನಾಟಕ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಉತ್ತರಪ್ರದೇಶ ಸಹ ಆತಿಥೇಯ ತಂಡಕ್ಕೆ ಸಮಾನವಾದ ಹೋರಾಟ ನಡೆಸಿ ಪಂದ್ಯದ 10ನೇ ನಿಮಿಷದಲ್ಲಿ ಸಮಬಲ ಸಾಧಿಸಿತು. ಯುಪಿ ಪರ ಇಮ್ರಾನ್ ಖಾನ್ ಮೊದಲ ಗೋಲು ದಾಖಲಿಸಿದರು.
ಆದರೆ, ದೊರಕಿದ ಅವಕಾಶವನ್ನು ಬಿಟ್ಟುಕೊಡಲು ಕರ್ನಾಟಕದ ಆಟಗಾರರು ಸಿದ್ಧವಿರಲಿಲ್ಲ. ಹೀಗಾಗಿ ನಂತರ ಆಕ್ರಮಣಕಾರಿ ಆಟವನ್ನು ಮುಂದುವರಿಸಿತು.
ಇದರ ಫಲವಾಗಿ ತಂಡದ ನಾಯಕ ದೀಪಕ್ ಬೆಜಿವಾಡ್ ಅವರು, ಪಂದ್ಯದ 38 ಮತ್ತು 57ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.
ಇನ್ನು ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಶೂಟೌಟ್ ಸ್ಪರ್ಧೆಯಲ್ಲಿ ಪಂಜಾಬ್ ತಂಡವನ್ನು ಮುಂಬೈ ಪರಾಭವಗೊಳಿಸಿತು.
ಪಂದ್ಯದ ನಿಗದಿತ ಸಮಯದಲ್ಲಿ ಉಭಯ ತಂಡಗಳು ತಲಾ 2 ಗೋಲು ದಾಖಲಿಸಿದ್ದವು. ನಂತರ ಹೆಚ್ಚುವರಿ ಸಮಯದಲ್ಲೂ ಗೋಲು ದಾಖಲಾಗಲಿಲ್ಲ. ನಂತರ ನೀಡಲಾದ ಮೊದಲ ಶೂಟೌಟ್ನಲ್ಲಿ ಉಭಯ ತಂಡಗಳು ನಾಲ್ಕು ಗೋಲುಗಳನ್ನು ದಾಖಲಿಸಿದವು. ನಂತರ ಎರಡನೇ ಶೂಟೌಟ್ನಲ್ಲಿ ಮುಂಬೈ 5-4 ಅಂತರದಿಂದ ಜಯ ಕಂಡುಕೊಂಡಿತು. ಪ್ರಶಸ್ತಿ ಗೆದ್ದ ಕರ್ನಾಟಕ ತಂಡ # 1 ಲಕ್ಷ ರು. ಬಹುಮಾನ ಸ್ವೀಕರಿಸಿತು. ರನ್ನರ್ ಅಪ್ಗೆ ತೃಪ್ತಿಪಟ್ಟ ಉತ್ತರಪ್ರದೇಶ # 50,000 ಸ್ವೀಕರಿಸಿತು.
ವಿಶೇಷ ಬಹುಮಾನಗಳು:
ಶ್ರೇಷ್ಠ ಗೋಲ್ಕೀಪರ್: ಸುಧೀರ್ ದೀಕ್ಷಿತ್ (ಮುಂಬೈ)
ಶ್ರೇಷ್ಠ ಡಿಫೆಂಡರ್: ದೀಪಕ್ ಬೀಜವಾಡ (ಕರ್ನಾಟಕ)
ಶ್ರೇಷ್ಠ ಹಾಫ್ ಬ್ಯಾಕ್: ನಾಗಸ್ರೀನು (ಕರ್ನಾಟಕ)
ಶ್ರೇಷ್ಠ ಫಾರ್ವರ್ಡರ್: ಸತ್ವಿಂದರ್ ಸಿಂಗ್ (ಪಂಜಾಬ್)
ಅತಿ ಹೆಚ್ಚು ಗೋಲು: ವಿಕ್ಟೋ ಸಿಂಗ್ (ಮುಂಬೈ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


