ಫುಟ್ಬಾಲ್: ಸರ್ಕಾರಿ ಮುದ್ರಣಾಲಯಕ್ಕೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಫುಟ್ಬಾಲ್ ಲೀಗ್ ಪಂದ್ಯಾವಳಿಯಶುಕ್ರವಾರದ ಪಂದ್ಯದಲ್ಲಿ ಸರ್ಕಾರಿ ಮುದ್ರಣಾಲಯ ತಂಡವು ಧರ್ಮರಾಜ ಯೂನಿಯನ್ ತಂಡದ ವಿರುದ್ಧ 0-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಸರ್ಕಾರಿ ಮುದ್ರಣಾಲಯದ ಪರ 27ನೇ ನಿಮಿಷದಲ್ಲಿ ಗೋಲು ದಾಖಲಿಸಿದ ರಾಜು, ತಂಡಕ್ಕೆ ಜಯ ತಂದುಕೊಲು ಯಶಸ್ವಿಯಾದರು. ದಿನದ ಮತ್ತೊಂದು ಪಂದ್ಯದಲ್ಲಿ ಸದರ್ನ್ ಬ್ಲ್ಯೂಸ್ ತಂಡವು ಓರಿಯೆಂಟಲ್ ತಂಡದ ವಿರುದ್ಧ 1-3 ಅಂತರದಲ್ಲಿ ಸೋಲನುಭವಿಸಿತು. ಸದರ್ನ್ ಬ್ಲ್ಯೂಸ್ ತಂಡದ ಪರ ಆದಿತ್ಯ ಕೆ.ವಿ 66ನೇ ನಿಮಿಷದಲ್ಲಿ ಗೋಲುಗಳಿಸಿದರೆ, ಓರಿಯೆಂಟಲ್ ತಂಡದ ಪರ ಮೂರ್ತಿ 8, 56ನೇ, ಹುಸೇನ್ 39ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಬಿಸಿಸಿಐಗೆ ಪಿಸಿಬಿ ಬೆಂಬಲ
ಕರಾಚಿ: ಭಾರತದ ಎಲ್.ಶಿವರಾಮಕೃಷ್ಣನ್ ಅವರನ್ನು ಆಟಗಾರರ ಪ್ರತಿನಿಧಿಯಾಗಿ ಐಸಿಸಿಗೆ ವಿವಾದಾದ್ಮಕವಾಗಿ ನೇಮಕ ವಿಚಾರದಲ್ಲಿ ಬಿಸಿಸಿಐಯನ್ನು ಬೆಂಬಲಿಸಿರುವ ಪಿಸಿಬಿ ನಾವು ಆಸ್ಟ್ರೇಲಿಯಾದ ಟಿಮ್ ಮೇ ವಿರುದ್ಧ ಮತದಾನ ಮಾಡಿದ್ದೆವು ಎಂದು ತಿಳಿಸಿದೆ. ಹೌದು, ನಾವು ಟಿಮ್ ಮೇ ವಿರುದ್ಧ ಮತದಾನ ಮಾಡಿದೆವು. ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಫೆಡರೇಷನ್ನ ಮುಖ್ಯ ಕಾರ್ಯನಿರ್ವಹಕನಾಗಿ ಪಾಕಿಸ್ತಾನ ಕ್ರಿಕೆಟ್ ಅನ್ನು ಬೆಂಬಲಸಲು ಯಾವುದೇ ರೀತಿಯ ಕ್ರಮಕೈಗೊಳ್ಳಲಿಲ್ಲ ಹಾಗಾಗಿ ನಾವು ಅವರ ವಿರುದ್ಧ ಮತ ಮಾಡಿದೆವು ಎಂದು ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಸಭೆ ಆತಿಥ್ಯಕ್ಕೆ ಐಸಿಸಿ ಆಹ್ವಾನ
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರತಿ ವರ್ಷ ತಮ್ಮ ವಾರ್ಷಿಕ ಸಭೆಯನ್ನು ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆಸುತ್ತಿದ್ದು, 2014, 2015 ಹಾಗೂ 2016ರ ವಾರ್ಷಿಕ ಸಭೆಗೆ ಆತಿಥ್ಯ ವಹಿಸಿಕೊಳ್ಳಲು ವಿವಿಧ ದೇಶಗಳಿಗೆ ಆಹ್ವಾನ ನೀಡಿದೆ. ಈ ವರ್ಷ ಐಸಿಸಿ ಸಮಿತಿ ಲಂಡನ್ನ ಲಾರ್ಡ್ಸ್ ಕ್ರಿಕೆಟ್ ಮೈದಾನಗಲ್ಲಿ ನಡೆಸಲಿದೆ. ಮುಂದಿನ ಮೂರು ವರ್ಷಗಳ ಈ ದೊಡ್ಡ ಕಾರ್ಯಕ್ರಮ ನಡೆಸಲು ವಿವಿಧ ದೇಶಗಳು ಆತಿಥ್ಯ ವಹಿಸಿಕೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

