ಪಂಜಾಬ್ಗೆ ಮಣಿದ ಮುಂಬೈ
ಧರ್ಮಶಾಲಾ: ಆಲ್ರೌಂಡ್ ಪ್ರದರ್ಶನ ತೋರಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 50 ರನ್ಗಳ ಭಾರೀ ಅಂತರದಿಂದ ಜಯ ಕಂಡುಕೊಂಡಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ತಂಡ, ಅಜರ್ ಮಹ್ಮೂದ್ (80) ಮತ್ತು ಶಾನ್ ಮಾರ್ಷ್ (63) ಅವರ ಆಕರ್ಷಕ ಆರ್ಧ ಶತಕದ ನೆರವಿನೊಂದಿಗೆ ನಾಲ್ಕು ವಿಕೆಟ್ ಕಳೆದುಕೊಂಡು 183 ರನ್ ಕಲೆ ಹಾಕಿತು. ನಂತರ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ 19.1 ಓವರ್ನಲ್ಲಿ ಕೇವಲ 133 ರನ್ಗಳಿಗೆ ಆಲೌಟ್ ಆಯಿತು.
ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಪಂಜಾಬ್ ತಂಡ ಒಟ್ಟು 16 ಪಂದ್ಯಗಳಿಂದ 16 ಅಂಕಗಳನ್ನು ಗಳಿಸುವುದರೊಂದಿಗೆ ಪಂದ್ಯಾವಳಿಯಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತು.
ಆದರೆ, ಈ ಪಂದ್ಯದಲ್ಲಿ ಸೋತರೂ ಮುಂಬೈ ತಂಡ 16 ಪಂದ್ಯಗಳಿಂದ 22 ಅಂಕ ಗಳಿಸುವುದರೊಂದಿಗೆ ಪ್ಲೇ ಆಫ್ ಹಂತದಲ್ಲಿ ತನ್ನ ಹೋರಾಟ ಮುಂದುವರಿಸಲಿದೆ. ಮೇ 21ರಂದು ದೆಹಲಿಯಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವುದರಿಂದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಲಿವೆ.
ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈನ ಬ್ಯಾಟ್ಸ್ಮನ್ಗಳು ಎದುರಾಳಿ ಬೌಲರ್ಗಳನ್ನು ಎದುರಿಸುವಲ್ಲಿ ವೈಫಲ್ಯ ಕಂಡರು. ನಾಯಕ ರೋಹಿತ್ ಶರ್ಮಾ (25) ಮತ್ತು ಕೀರನ್ ಪೊಲಾರ್ಡ್ (22) ಆರನೇ ವಿಕೆಟ್ಗೆ 39 ರನ್ ಕಲೆ ಹಾಕಿದರು. ಅಂಬಾಟಿ ರಾಯುಡು (26) ಮುಂಬೈ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿದರು.
ಆರಂಭಿಕ ಆಟಗಾರ (0) ಮತ್ತು ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ (0) ಹೊರತುಪಡಿಸಿ ಎಲ್ಲ ಬ್ಯಾಟ್ಸ್ಮನ್ಗಳು ಕೊಂಚ ಪ್ರತಿರೋಧ ತೋರಿದರು. ಆದರೆ, ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಸಂಪೂರ್ಣವಾಗಿ ವೈಫಲ್ಯ ಹೊಂದಿರು.
ಪಂಜಾಬ್ ತಂಡದ ಪರ ಪಿಯೂಶ್ ಚಾವ್ಲಾ ಮತ್ತು ಸಂದೀಪ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಪ್ರವೀಣ್ ಕುಮಾರ್ ಮತ್ತು ಪರ್ವಿಂದರ್ ಅವಾನಾ ತಲಾ ಒಂದು ವಿಕೆಟ್ ಪಡೆದರು.
ಕೊನೆ ಪಂದ್ಯ ಆಡಿದ ಗಿಲ್ಲಿ: ಐಪಿಎಲ್ನ ಕೊನೆಯ ಪಂದ್ಯವಾಡಿದ ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಆ್ಯಡಂ ಗಿಲ್ಕ್ರಿಸ್ಟ್ ಬೌಲಿಂಗ್ ಪ್ರದರ್ಶಿಸಿ ಒಂದು ವಿಕೆಟ್ ಪಡೆದದ್ದು ವಿಶೇಷವಾಗಿತ್ತು. ಅಂತಿಮ ಓವರ್ನಲ್ಲಿ ಮುಂಬೈ ಜಯ ಸಾಧಿಸಲು 51 ರನ್ ಬೇಕಾಗಿತ್ತು. ಆಗ ಗಿಲ್ಕ್ರಿಸ್ಟ್ ಬೌಲಿಂಗ್ಗೆ ಇಳಿದದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆ ಓವರ್ನ ಮೊದಲ ಎಸೆತದಲ್ಲೇ ಹರ್ಭಜನ್ ಸಿಂಗ್ ವಿಕೆಟ್ ಪಡೆದ ಗಿಲ್ಲಿ ಅಚ್ಚರಿ ಮೂಡಿಸಿದರಲ್ಲದೆ, ಪಂಜಾಬ್ ತಂಡಕ್ಕೆ ಜಯ ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ನ ಆರಂಭಿಕರಾದ ಮಂದೀಪ್ ಸಿಂಗ್ (1) ಮತ್ತು ಆ್ಯಡಂ ಗಿಲ್ಕ್ರಿಸ್ಟ್ (5) ಬೇಗನೆ ಪೆವಿಲಿಯನ್ ಸೇರುವುದರೊಂದಿಗೆ 3 ಓವರ್ಗಳಲ್ಲಿ 6 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಬಂದ ಅಜರ್ ಮಹ್ಮೂದ್ ಮತ್ತು ಶಾನ್ ಮಾರ್ಷ್ ಆಕರ್ಷಕ ಜತೆಯಾಟ ಪ್ರದರ್ಶಿಸುವ ಮೂಲಕ 3 ವಿಕೆಟ್ಗೆ 148 ರನ್ ಗಳಿಸಿ ತಂಡದ ಮೊತ್ತ 180ರ ಗಡಿ ದಾಟುವಂತೆ ನೋಡಿಕೊಂಡರು. ಮಹ್ಮೂದ್ ಅರ್ಧ ಶತಕದಲ್ಲಿ 4 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದರೆ, ಶಾನ್ ಮಾರ್ಷ್ ಮೊತ್ತದಲ್ಲಿ 11 ಬೌಂಡರಿಗಳು ಸೇರಿದ್ದವು.
ಮುಂಬೈ ಪರ ಲಸಿತ್ ಮಾಲಿಂಗ 3 ವಿಕೆಟ್ ಪಡೆದರೆ, ನಥಾನ್ ಕಟ್ಲರ್ ನೀಲೆ, ರಿಶಿ ಧವನ್, ಹರ್ಭಜನ್ ಸಿಂಗ್ ಹಾಗೂ ಕೀರನ್ ಪೊಲಾರ್ಡ್ ತಲಾ 1 ವಿಕೆಟ್ ಪಡೆದರು. ಪಂಜಾಬ್ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಅಜರ್ ಮಹ್ಮೂದ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ಬೋರ್ಡ್
ಕಿಂಗ್ಸ್ ಇಲೆವೆನ್ ಪಂಜಾಬ್ 183/8 (20 ಓವರ್)
ಗಿಲ್ಕ್ರಿಸ್ಟ್ ಬಿ ಕೌಲ್ಟರ್ ನೈಲ್ 5(7), ಮಂದೀಪ್ ಸಿ ಪೊಲಾರ್ಡ್ ಬಿ ರಿಷಿ 1(5), ಅಜರ್ ಎಲ್ಬಿಡಬ್ಲ್ಯೂ ಬಿ ಮಾಲಿಂಗಾ 80(44), ಮಾರ್ಷ್ ಬಿ ಹರ್ಭಜನ್ 63(47), ಮಿಲ್ಲರ್ ಸಿ ಕೌಲ್ಟರ್ ಬಿ ಪೊಲಾರ್ಡ್ 6(5), ವೊಹ್ರಾ ಅಜೇಯ 20(8), ಗುರುಕೀರ್ತ್ ಎಲ್ಬಿಡಬ್ಲ್ಯೂ ಬಿ ಮಾಲಿಂಗಾ 0(1), ಚಾವ್ಲಾ ರನೌಟ್ (ಮ್ಯಾಕ್ಸ್ವೆಲ್/ಕಾರ್ತಿಕ್) 1(2), ಕುಮಾರ್ ಬಿ ಮಾಲಿಂಗಾ 0(1), ಇತರೆ 7
ವಿಕೆಟ್ ಪತನ: 1-2, 2-6, 3-154, 4-156, 5-174, 6-174, 7-183, 8-183
ಬೌಲಿಂಗ್: ಕೌಲ್ಟರ್ 4-0-29-1, ರಿಷಿ 4-1-26-1, ಕುಲ್ಕರ್ಣಿ 0.4-0-12-0, ರೋಹಿತ್ 0.2-0-1-0, ಹರ್ಭಜನ್ 4-0-33-1, ಮಾಲಿಂಗಾ 4-0-39-3, ಪೊಲಾರ್ಡ್ 2-0-22-1, ಮ್ಯಾಕ್ಸ್ವೆಲ್ 1-0-18-0
ಮುಂಬೈ ಇಂಡಿಯನ್ಸ್ 133 (19.1)
ಮ್ಯಾಕ್ಸ್ವೆಲ್ ಸಿ ವೊಹ್ರಾ ಬಿ ಪ್ರವಿಣ್ 0(3), ತಾರೆ ಬಿ ಸಂದೀಪ್ 22(12), ರಾಯುಡು ಸಿ ಗಿಲ್ಕ್ರಿಸ್ಟ್ ಬಿ ಅವಾನ 26(22), ಶರ್ಮಾ ಬಿ ಚಾವ್ಲಾ 25(25), ಕಾರ್ತಿಕ್ ಸಿ ಮತ್ತು ಬಿ ಚಾವ್ಲಾ 0(3), ಪೊಲಾರ್ಡ್ ಸಿ ಮಿಲ್ಲರ್ ಬಿ ಸಂದೀಪ್ 22(21), ರಿಷಿ ಎಲ್ಬಿಡಬ್ಲ್ಯೂ ಬಿ ಅಜರ್ 14(15), ಹರ್ಭಜನ್ ಸಿ ಗುರುಕೀರ್ತ್ ಬಿ ಗಿಲ್ಕ್ರಿಸ್ಟ್ 5(8), ಕೌಲ್ಟರ್ ಬಿ ಅಜರ್ 9(6), ಮಾಲಿಂಗಾ ಅಜೇಯ 1(1), ಕುಲಕರ್ಣಿ (ಗಾಯಾಳು), ಇತರೆ 9
ವಿಕೆಟ್ ಪತನ: 1-0, 2-27, 3-62, 4-69, 5-78, 6-117, 7-119, 8-131, 9-133
ಬೌಲಿಂಗ್: ಪ್ರವಿಣ್ 3-0-15-1, ಅಜರ್ 4-0-24-2, ಸಂದೀಪ್ 4-0-39-2, ಅವಾನ 4-0-29-1, ಚಾವ್ಲಾ 4-0-20-2, ಗಿಲ್ಕ್ರಿಸ್ಟ್ 0.1-0-0-1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

