ಲಾರ್ಡ್ಸ್ ಟೆಸ್ಟ್ ಆಂಗ್ಲರಿಗೆ 170 ರನ್ಗಳ ಭರ್ಜರಿ ಜಯ
ಲಾರ್ಡ್ಸ್: ಪ್ರಥಮ ಇನಿಂಗ್ಸ್ನಲ್ಲಿ ಜೇಮ್ಸ್ ಆ್ಯಂಡರ್ಸನ್ ಹಾಗೂ ದ್ವಿತಿಯ ಇನಿಂಗ್ಸ್ನಲ್ಲಿ ಸ್ಟುವರ್ಟ್ ಬ್ರಾಡ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪ್ರವಾಸಿ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 170ರನ್ಗಳ ಹೀನಾಯ ಸೋಲನುಭವಿಸಿದೆ. ಪ್ರಥಮ ಇನಿಂಗ್ಸ್ನಲ್ಲಿ 232 ರನ್ಗಳಿಸಿದ ಇಂಗ್ಲೆಂಡ್, ನಂತರ ನ್ಯೂಜಿಲೆಂಡ್ ತಂಡವನ್ನು 207 ರನ್ಗಳಿಗೆ ನಿಯಂತ್ರಿಸಿತು. ಮಾರಕ ಬೌಲಿಂಗ್ ನಡೆಸಿದ ಆ್ಯಂಡರ್ಸನ್ 47 ರನ್ಗಳಿಗೆ 5 ವಿಕೆಟ್ ಪಡೆದರು. ನಂತರ ದ್ವಿತಿಯ ಇನಿಂಗ್ಸ್ನಲ್ಲಿ 213 ರನ್ಗಳಿಸಿದ ಆಂಗ್ಲರು, ಕಿವೀಸ್ ತಂಡಕ್ಕೆ 238 ರನ್ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 68ರನ್ಗಳಿಗೆ ಸರ್ವ ಪತನವಾಗುವ ಮೂಲಕ ಹೀನಾಯ ಸೋಲನುಭವಿಸಿತು. ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 44 ರನ್ ನೀಡಿದ ಸ್ಟುವರ್ಟ್ ಬ್ರಾಡ್ 7 ವಿಕೆಟ್ ಪಡೆಯುವ ಮೂಲಕ ಕಿವೀಸ್ಗೆ ಮಾರಕವಾದರು. ಅಲ್ಲದೆ ಬ್ರಾಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 232
ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್ 207
ಇಂಗ್ಲೆಂಡ್ ದ್ವಿತಿಯ ಇನಿಂಗ್ಸ್ 213
ರೂಟ್ 71
ಟ್ರಾಟ್ 56
ಬೌಲಿಂಗ್: ಸೌಥಿ 50/6
ನ್ಯೂಜಿಲೆಂಡ್ ದ್ವಿತಿಯ ಇನಿಂಗ್ಸ್ 68
ವಾಗ್ನರ್ 17
ವಾಟ್ಲಿಂಗ್ 13
ಬೌಲಿಂಗ್: ಬ್ರಾಡ್ 44/7
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

