ಕ್ರೀಡೆ

ಸುದಿರ್‌ಮನ್ ಕಪ್: ಭಾರತಕ್ಕೆ ಸೋಲು

Published On :

ಕೌಲಾಲಂಪುರ: ಭಾನುವಾರ ಚೀನಾ ವಿರುದ್ಧ 5-0 ಅಂತರದ ಹೀನಾಯ ಸೋಲು ಅನುಭವಿಸಿದ ಭಾರತ ತಂಡ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದು, ಸೋಮವಾರ ಇಂಡೋನೇಶಿಯಾ ವಿರುದ್ಧ 1-4 ಅಂತರದಲ್ಲಿ ಮುಖಭಂಗ ಅನುಭವಿಸಿದೆ. ಈ ಮೂಲಕ ಸುದಿರ್‌ಮನ್ ಮಿಶ್ರ ತಂಡಗಳ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಕನಸು ಭಗ್ನಗೊಂಡಿದೆ.
ಐದು ಪಂದ್ಯಗಳಲ್ಲಿ ಪಿ.ಕಶ್ಯಪ್ ಮಾತ್ರ ತಂಡಕ್ಕೆ ಗೆಲವು ತಂದುಕೊಡಲು ಯಶಸ್ವಿಯಾದರು. ಸೈನಾ ನೆಹ್ವಾಲ್ ಹಾಗೂ ಜ್ವಾಲಾ ಗುಟ್ಟಾ ಅನುಪಸ್ಥಿತಿಯಲ್ಲಿ ಕಶ್ಯಪ್ ಮೇಲೆ ಇರಿಸಲಾಗಿತ್ತು. ಆದರೆ ಚೀನಾ ವಿರುದ್ಧ ಸೋಲು ಅನುಭವಿಸಿದ್ದ ಕಶ್ಯಪ್ ಇಂಡೋನೇಶಿಯಾದ ರುಂಬಕ ಡೈನಿಸಸ್ ವಿರುದ್ಧ 21-18 21-14 ಅಂತರದ ಗೆಲವು ದಾಖಲಿಸಿದರು. ಇದಕ್ಕು ಮೊದಲು ನಡೆದ ಎರಡು ಪಂದ್ಯಗಳಲ್ಲಿ ಭಾರತ ತಂಡ ಪರಾಭವಗೊಂಡಿತ್ತು. ಪುರುಷರ ಡಬಲ್ಸ್ ವಿಭಾಗದಲ್ಲಿ ಅಕ್ಷಯ್ ದೇವಾಲ್ಕರ್ ಹಾಗೂ ಪ್ರಣವ್ ಚೋಪ್ರಾ ತಮ್ಮ ಎದುರಾಳಿ ಅಂಗ್ಗ ಪ್ರತಮ ಮತ್ತು ರಿಯಾನ್ ಅಗುಂಗ್ ಸಪುತ್ರ ಜೋಡಿ ವಿರುದ್ಧ ಕೇವಲ 24 ನಿಮಿಷಗಳ ಪಂದ್ಯದಲ್ಲಿ 13-21, 10-21 ನೇರ ಸೆಟ್‌ಗಳಿಂದ ಸೋಲನುಭವಿಸಿತು.
ಎರಡನೇ ಪಂದ್ಯದಲ್ಲಿ 13ನೇ ರ್ಯಾಂಕಿಂಗ್‌ನ ಪಿ.ವಿ ಸಿಂಧು ತಮ್ಮ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾದರು. 15ನೇ ರ್ಯಾಂಕಿಂಗ್‌ನ ಫನೆಟ್ರಿ ಲಿಂಡ್ವೆನಿ ವಿರುದ್ಧ ಕೇವಲ 24 ನಿಮಿಷಗಳ ಅವಧಿಯಲ್ಲಿ 15-21 10-21 ನೆರ ಸೆಟ್‌ಗಳ ಅಂತರದಲ್ಲಿ ಪರಾಭವಗೊಂಡರು. ಸೈನಾ ಅನುಪಸ್ಥಿತಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧುಗೆ ಹೆಚ್ಚಿನ ಒತ್ತಡವಾಯಿತು. ವಿಶ್ವದ 3ನೇ ರ್ಯಾಂಕಿಂಗ್‌ನ ವಾಂಗ್ ಯಿಹಾನ್ ವಿರುದ್ಧ ತೋರಿದ ಪೈಪೋಟಿಯನ್ನು, ಲಿಂಡ್ವೆನಿ ವಿರುದ್ಧ ಹೋರಾಟ ನೀಡಲು ವಿಫಲರಾದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಪ್ರಾಧ್ನ್ಯಾ ಗಾಂಡ್ರೆ 19-21 20-22 ಅಂತರದಲ್ಲಿ ಗ್ರೆಸಿಯಾ ಪೊಲಿ ಹಾಗೂ ಕ್ರಿಶಿಂದಾ ಮಹೇಶ್ವರಿ ವಿರುದ್ಧ ಕೇವಲ 37 ನಿಮಿಷದಲ್ಲಿ ಸೋಲನುಭವಿಸಿದರು. ವಿಶ್ರ ಡಬಲ್ಸ್ ವಿಭಾಗದಲ್ಲಿ ಅರುಣ್ ವಿಷ್ಣು ಹಾಗೂ ಅಪರ್ಣ ಬಾಲನ್ ಕೇವಲ 29 ನಿಮಿಷದಲ್ಲಿ ತಮ್ಮ ಎದುರಾಳಿ ಟೊಂಟೊವಿ ಅಹ್ಮದ್ ಹಾಗೂ ಲಿಲಿಯಾನ ನಾಟ್ಸಿರ್ ವಿರುದ್ಧ 13-21 14-21 ಸೆಟ್‌ಗಳ ಅಂತರದಲ್ಲಿ ಮುಗ್ಗರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.