ಕ್ರಿಕೆಟ್ ಮಂಡಳಿ ಆಳಿದ ರಾಜಕಾರಣಿಗಳು
ಕ್ರಿಕೆಟ್ಗೂ, ರಾಜಕೀಯಕ್ಕೂ ನಂಟಿರುವುದು ಹೊಸತೇನಲ್ಲ. ಕ್ರಿಕೆಟ್ ಮಂಡಳಿಗಳ ಆಯಕಟ್ಟಿನ ಹುದ್ದೆಗಳಿಗೆ ನಾನಾ ರೀತಿಯ ಪ್ರಯತ್ನ ಮಾಡಿ ಬಂದು ಕೂರುವ ಇವರು ದುಡ್ಡು ಹಾಕಿ ದುಡ್ಡು ಮಾಡುವ ಬ್ಯುಸಿನೆಸ್ ನಡೆಸುತ್ತಿದ್ದಾರೆ.
ಅನುರಾಗ್ ಠಾಕೂರ್
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ. ಹಿಂದೊಮ್ಮೆ ಹಿಮಾಚಲ ರಣಜಿ ತಂಡದ ಡ್ರೆಸ್ಸಿಂಗ್ ರೂಂಗೆ ನುಗ್ಗಿ, 'ನಾನೇ ನಿಮ್ಮ ತಂಡದ ನಾಯಕ' ಎಂದು ಹೇಳಿದ್ದ ಇವರು, ನಂತರ, ಒಂದೇ ಒಂದು ಪ್ರಥಮ ದರ್ಜೆ ಪಂದ್ಯಕ್ಕೆ ನಾಯಕರಾಗಿದ್ದರು. ಆನಂತರ, ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಸಹಕಾರ್ಯದರ್ಶಿಯೂ ಆದರು.
ಜ್ಯೋತಿರಾದಿತ್ಯ ಸಿಂದಿಯಾ
ಮಾಧವರಾವ್ ಸಿಂದಿಯಾ ಹಾಗೂ ಅವರ ಮಗ ಜ್ಯೋತಿರಾದಿತ್ಯ ಸಿಂದಿಯಾ ಸುಮಾರು ವರ್ಷಗಳ ಕಾಲ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯನ್ನು ಆಳಿದವರು. ಮೊದಲು ಮಾಧವರಾವ್ ಸಿಂದಿಯಾ ಅವರು ಆಡಳಿತ ನಡೆಸಿದರೆ, ಅವರ ನಿಧನದ ನಂತರ ಅವರ ಮಗ ಆ ಪಟ್ಟದಲ್ಲಿ ಮುಂದುವರೆದರು. ಪ್ರಸ್ತುತ ಅವರು ಬಿಸಿಸಿಐ ಹಣಕಾಸು ಸಮಿತಿಯ ಅಧ್ಯಕ್ಷರಾಗಿದ್ದಾರೆ.
ನರೇಂದ್ರ ಮೋದಿ
ಗುಜರಾತ್ ಕ್ರಿಕೆಟ್ ಸಂಸ್ಥೆಯ ಹಾಲಿ ಅಧ್ಯಕ್ಷ. 2009ರಲ್ಲಿ ಅಧ್ಯಕ್ಷಗಿರಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ನಿಷ್ಠಾವಂತ ಅಮಿನ್ ಅವರನ್ನು ಸೋಲಿಸಿ, ಅಧಿಕಾರಕ್ಕೇರಿದ ಮೋದಿ, ನಂತರ, ಅಮಿನ್ ಅವರನ್ನೂ ಸೆಳೆದುಕೊಂಡು ಬಿಜೆಪಿಗೆ ಸೇರಿಸಿಕೊಂಡರು. ಪ್ರಸ್ತುತ, ಗುಜರಾತ್ ಕ್ರಿಕೆಟ್ ಸಂಸ್ಥೆಗೆ ಅಧ್ಯಕ್ಷರಾಗಿ ಅವರು ಹಾಗೂ ಉಪಾಧ್ಯಕ್ಷರಾಗಿ ಅವರ ಬಲಗೈ ಬಂಟ ಇದ್ದಾರೆ.
ರಂಜಿಬ್ ಬಿಸ್ವಾಲ್
ಇವರು ಮಾಜಿ ಎಂಪಿ, ಪ್ರಸ್ತುತ ಒರಿಸ್ಸಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ. 2011ರಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆಗಾಗಿ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ಅಧ್ಯಕ್ಷ ಶ್ರೀನಿವಾಸನ್, ಆಗ ಸಂಜಯ್ ಜಗದಾಳೆ ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಿದರು. ಇದರಿಂದ, ಬಿಸಿಸಿಐನಲ್ಲಿ ಎರಡು ಬಣಗಳು ಸೃಷ್ಟಿಯಾದವು.
ಅರುಣ್ ಜೇಟ್ಲಿ
ತಮ್ಮ ಪ್ರಭಾವದ ಮೂಲಕವೇ ಅತಿ ಸುಲಭವಾಗಿ ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ 1999ರಲ್ಲಿ ಅಧ್ಯಕ್ಷರಾಗಿ ಬಂದವರು ಜೇಟ್ಲಿ. ಅಧ್ಯಕ್ಷಗಿರಿಯ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಬಿಷನ್ಸಿಂಗ್ ಬೇಡಿಯವರನ್ನು ಸೋಲಿಸಿದ್ದರು. ಇದೀಗ, ಬಿಸಿಸಿಐ ಚುನಾವಣಾ ನಿಯಮವನ್ನೇ ಬದಲುಗೊಳಿಸಿ, ಜೇಟ್ಲಿಗೆ ಬಿಸಿಸಿಐ ಅಧ್ಯಕ್ಷಗಿರಿಯ ಗದ್ದುಗೆಗೆ ಅನುಕೂಲ ಕಲ್ಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

