ಕ್ರೀಡೆ

ಬೇಯರ್ನ್ ಮ್ಯೂನಿಚ್ಗೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿ

Published On :

ಲಂಡನ್: ಅರ್ಜೆನ್ ರೊಬೆನ್ ಅವರು ರೋಚಕ ಪಂದ್ಯದ ಕೊನೆ ನಿಮಿಷದಲ್ಲಿ ಗಳಿಸಿದ ಗೋಲಿನಿಂದಾಗಿ ಬೇಯರ್ನ್ ಮ್ಯೂನಿಚ್ ತಂಡವು 2-1 ಗೋಲುಗಳ ಅಂತರದಲ್ಲಿ ಬೊರುಸಿಯಾ ಡೊರ್ಟ್ಮುಂಡ್ ತಂಡದ ವಿರುದ್ಧ ಜಯ ದಾಖಲಿಸಿದೆ. ಈ ಮೂಲಕ ಪ್ರಸಕ್ತ ಸಾಲಿನ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯು ಮುನಿಕ್ ಮುಡಿಗೇರಿದೆ. ಇಲ್ಲಿನ ವಿಂಬ್ಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಅಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ನೀಡಿತು. ಈ ಮೂಲಕ ಬೇಯರ್ನ್ ತಂಡವು 2010ರಲ್ಲಿ ಹಾಗೂ 2012ರ ಫೈನಲ್ನಲ್ಲಿ ಬೊರುಸಿಯಾ ತಂಡದ ವಿರುದ್ಧ ಸೋಲನುಭವಿಸಿತ್ತು. ಹಾಗಾಗಿ ಬೇಯರ್ನ್ ತಂಡ ಬಹುದಿನಗಳ ನಂತರ ಜಯ ಸಾಧಿಸಿದಂತಾಗಿದೆ.

ಬಾರ್ಸಿಲೋನಾ ಜತೆಗೆ ನೇಮಾರ್ ಒಪ್ಪಂದ
ಸಾವ್ ಪೌಲೊ:
ಮುಂಬರುವ ಕಾನ್ಫಿಡರೇಷನ್ ಕಪ್ ನಂತರ ಬಾರ್ಸಿಲೋನಾ ತಂಡವನ್ನು ಸೇರ್ಪಡೆಗೊಳ್ಳುವುದಾಗಿ ಬ್ರೆಜಿಲ್ನ ಸ್ಟ್ರೈಕರ್ ನೇಮಾರ್ ತಿಳಿಸಿದ್ದು, ಈ ಮೂಲಕ ಬಾರ್ಸಿಲೋನಾ ತಂಡಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಬಾರ್ಸಿಲೋನಾ ತಂಡದಲ್ಲಿ ಈಗಾಗಲೇ ಲಿಯೋನೆಲ್ ಮೆಸ್ಸಿ, ಕ್ಸಾವಿ ಹರ್ನಾಂಡೆಜ್ ಹಾಗೂ ಆ್ಯಂಡ್ರೆಸ್ ಇನಿಯೆಸ್ಟಾರಂತಹ ಆಟಗಾರರಿದ್ದು, ನೇಮಾರ್ ಹೊಸ ಸೇರ್ಪಡಡೆಯಾಗಲಿದ್ದಾರೆ. ನೇಮಾರ್ನ ಬ್ರೆಸಿಲ್ ಕ್ಲಬ್ ಆದ ಸ್ಯಾಂಟೊಸ್, ತಮಗೆ ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರಿಡ್ ತಂಡದಿಂದ ಅವಕಾಶಗಳು ಬಂದಿದೆ ಎಂದು ತಿಳಿಸಿದ ಒಂದೇ ದಿನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನೇಮಾರ್ ತಮ್ಮ ನಿರ್ಧಾರವನ್ನು ಟ್ವಿಟರ್ ಹಾಗೂ ಇತರೆ ಸಾಮಾಜಿಕ ತಾಣಗಳಲ್ಲಿ ಬಹಿರಂಗ ಪಡಿಸಿದ್ದು, ನಾನು ಸೋಮವಾರ ಬಾರ್ಸಿಲೋನಾ ಜತೆಗಿನ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದು, ಸೋಮವಾರದವರೆಗು ಕಾಯಲು ಸಾಧ್ಯವಾಗುತ್ತಿಲ್ಲ. ನನ್ನ ಕುಟುಂಬಕ್ಕೆ ಈ ನಿರ್ಧಾರ ತಿಳಿದಿದೆ ಎಂದು ಬರೆದಿದ್ದಾರೆ.

'ಇಂಡೋ-ಪಾಕ್ ಕದನ ಕುತೂಹಲ'
ಕರಾಚಿ:
ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಪಂದ್ಯಾವಳಿಯಲ್ಲಿ ಜೂನ್ 15ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ. ಈ ಪಂದ್ಯ ಫೈನಲ್ಗಿಂತ ಮಹತ್ವದ್ದಾಗಿದ್ದು, ಪಂದ್ಯವನ್ನು ಎದುರು ನೋಡುತ್ತಿರುವುದಾಗಿ ಪಾಕಿಸ್ತಾನ ತಂಡದ ಸ್ಪಿನ್ನರ್ ಸೈಯದ್ ಅಜ್ಮಲ್ ತಿಳಿಸಿದ್ದಾರೆ. ನಾವಿಬ್ಬರು ಎಲ್ಲಿಯೇ ಆಡಲಿ ಅಲ್ಲಿನ ವಾತಾವರಣ ರೋಚಕವಾಗಿರುತ್ತದೆ. ಈ ಪಂದ್ಯ ಮಿನಿ ಫೈನಲ್ ಪಂದ್ಯವಾಗಿದ್ದು, ಪಂದ್ಯವನ್ನು ಟಿವಿಗಳಲ್ಲಿ ವೀಕ್ಷಿಸುವ ಅಭಿಮಾನಿಗಳಿಗೆ ನಿರಾಸೆ ಆಗುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.