ಕ್ರೀಡೆ

ಐಪಿಎಲ್ ನೆಮ್ಮದಿ, ಸಂಭ್ರಮ ತರಲಿದೆ

Published On :

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಪಂದ್ಯಾವಳಿಯಿಂದಾಗಿ ಆಟಗಾರರು ಸಾಕಷ್ಟು ದಣಿಯಲಿದ್ದಾರೆ ಎಂಬ ಟೀಕೆಗಳು ಒಂದೆಡೆ ಇದ್ದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಮಾತ್ರ ಇಂದು ಆಟಗಾರರ ಮನಸ್ಸಿಗೆ ನೆಮ್ಮದಿ ಹಾಗೂ ಸಂಭ್ರಮ ತಂದುಕೊಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಟಗಾರರು ಸಾಕಷ್ಟು ಎಂಜಾಯ್ ಮಾಡಲಿದ್ದರೆ ಅದು ಐಪಿಎಲ್‌ನಲ್ಲಿ ಮಾತ್ರ. ಬಿಡುವಿಲ್ಲದ ಅಂತಾರಾಷ್ಟ್ರೀಯ ಕಾರ್ಯಕ್ರಮಪಟ್ಟಿಯಿಂದ ದಣಿವಾಗಿರುವ ಆಟಗಾರರು ಐಪಿಎಲ್‌ನಲ್ಲಿ ನೆಮ್ಮದಿ, ಹೊಸ ಉತ್ಸಾಹವನ್ನು ಕಂಡುಕೊಳ್ಳಬಲ್ಲರು ಎಂದು ಕೊಹ್ಲಿ ಹೇಳಿದ್ದಾರೆ.
ಭಾನುವಾರ ತಂಡದ ಝೆರ್ಸಿ ಬಿಡುಗಡೆಯ ವೇಳೆ ಮಾತನಾಡಿದ 25ರ ಕೊಹ್ಲಿ, ಐಪಿಎಲ್‌ನಲ್ಲಿ ಒಳ್ಳೆಯ ವಾತಾವರಣವಿರಲಿದ್ದು, ಪ್ರತಿಯೊಬ್ಬ ಆಟಗಾರ ಎಂಜಾಯ್ ಮಾಡುತ್ತಾನೆ. ಈ ಸಂದರ್ಭವನ್ನು ನಾನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುತ್ತೇನೆ ಎಂದರು.
ಬಾಂಗ್ಲಾದೇಶದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ-20 ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದ ಅವರು, ಈ ವರ್ಷ ನಡೆಯಲಿರುವ ಏಳನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಪ್ರತಿಬಾರಿಯೂ ತಂಡ ಪ್ರಶಸ್ತಿಗಾಗಿ ಪೈಪೋಟಿ ನಡೆಸಿತ್ತು. ಈ ಬಾರಿಯೂ ಹೆಚ್ಚು ಸಮತೋಲನದಿಂದ ಕೂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಎತ್ತಿಹಿಡಿಯುವ ಅವಕಾಶ ಹೆಚ್ಚಿದೆ ಎಂದರು.
ಕಳೆದ ಆರೂ ಆವೃತ್ತಿಗಳಲ್ಲಿ ಬೆಂಗಳೂರು ತಂಡಕ್ಕೆ ಪ್ರಶಸ್ತಿ ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ಕೆಲವು ಬಾರಿ ಅತ್ಯುತ್ತಮ ಅವಕಾಶ ಹೊಂದಿದ್ದರೂ, ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಲ್ಲಿ ಮುಗ್ಗರಿಸಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಯಿತು.
ಇದೀಗ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಆರಂಭದ ಕೆಲ ಪಂದ್ಯಗಳು ಈ ಬಾರಿ ಯುಎಇನಲ್ಲಿ ಏಪ್ರಿಲ್ 16ರಿಂದ 30ರ ವರೆಗೆ ನಡೆಯಲಿವೆ. ಬಳಿಕ ಎರಡನೇ ಹಂತದಲ್ಲಿ ಪುನಃ ಭಾರತಕ್ಕೆ ಈ ಟೂರ್ನಿ ವಾಪಸಾಗಲಿದೆ. ಮೇ 2ರಿಂದ ಜೂನ್ 1ರ ವರೆಗೆ ಭಾರತದ ಆವೃತ್ತಿ ಜರುಗಲಿದೆ.
ಪತ್ರಕರ್ತರಿಂದ ಹೆಚ್ಚಿನ ಪ್ರಶ್ನೆಗಳು ತೂರಿದಾಗ ಈಗ ಉತ್ತರಿಸಲು ಸಮಯವಿಲ್ಲ. ಕೂಡಲೇ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದು, ಐಪಿಎಲ್‌ನಲ್ಲಿ ನಾನು ಆಡಬೇಕಿದೆ. ಒಂದು ವೇಳೆ ಅಲ್ಲಿ ಆಡದೇ ಇದ್ದರೆ ಅದು ಬೇರೆ ಮಾತು. ಐದು ನಿಮಿಷಗಳಲ್ಲಿಯೇ ನಿಲ್ದಾಣಕ್ಕೆ ತೆರಳಬೇಕಿದ್ದು, ಇಲ್ಲವಾದರೆ, ವಿಮಾನ ತಪ್ಪಿಸಿಕೊಳ್ಳಬೇಕಾಗುತ್ತದೆ ಎಂದು ವಿರಾಟ್ ಕೊಹ್ಲಿ ಹೇಳುತ್ತ ಅಲ್ಲಿಂದ ಕಾಲ್ಕಿತ್ತರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.