ಕ್ರೀಡೆ

ವಿಶ್ವ ಸ್ನೂಕರ್ ಆದಿತ್ಯಾ ಹೊರಕ್ಕೆ

Published On :

ಶೆಫೀಲ್ಡ್: ಭಾರತದ ಭರವಸೆಯ ಸ್ನೂಕರ್ ಆಟಗಾರ ಆದಿತ್ಯ ಮೆಹತಾ ಅವರ ಗೆಲವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ವಿಶ್ವ ಸ್ನೂಕರ್‌ನ ಅರ್ಹತಾ ಸುತ್ತಿನಲ್ಲಿ ಜ್ಯಾಮಿ ಜೊನ್ಸ್ ವಿರುದ್ಧ ಸೋಲನುಭವಿಸಿರುವ ಮೆಹತಾ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಜೋನ್ಸ್ ವಿರುದ್ಧ 5-10 ಅಂತರದ ಹಿನ್ನಡೆ ಅನುಭವಿಸಿದ ಮೆಹತಾ ಪರಾಭವಗೊಂಡಿದ್ದಾರೆ. ಈ ಪಂದ್ಯದಲ್ಲಿ ನಿಯಂತ್ರಣ ಕಳೆದುಕೊಂಡ ಆದಿತ್ಯ ಒಂದೇ ಒಂದು ಬ್ರೆಕ್ ಪಾಯಿಂಟ್ ಪಡೆಯಲು ಸಾಧ್ಯವಾಗಲಿಲ್ಲ.
ಒಂದು ಹಂತದಲ್ಲಿ ಪಂದ್ಯ 3-3 ಅಂತರದ ಸಮಬಲ ಸಾಧಿಸಿದ್ದಾಗ ರೋಚಕತೆ ಸೃಷ್ಟಿಯಾಗಿತ್ತು. ಅಂತಿಮವಾಗಿ ಮೆಹತಾ, 4-108 (108), 62-46, 38-67, 66-27, 25-108(68), 1-40, 55-73, 38-89(50), 27-64, 30-80, 75-24, 92-34, 0-82(65), 47-54, 47-59. ಅಂಕಗಳ ಅಂತರದಲ್ಲಿ ಮಣಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.