ಕ್ರೀಡೆ

ತಂತ್ರಜ್ಞಾನ ಬದಲಾವಣೆ ತಂದಿತು ಲಾಭ: ಉತ್ತಪ್ಪ

Published On :

ದುಬೈ: ಆಟದಲ್ಲಿ ತಂತ್ರಜ್ಞಾನದ ಬದಲಾವಣೆ ಹಾಗೂ ಕೆಲ ನ್ಯೂನತೆಗಳನ್ನು ಸರಿಪಡಿಸಿಕೊಂಡಿದ್ದು ತಮಗೆ ನೆರವಾಗಿದೆ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಸೋಲನುಭವಿಸಿದರೂ ಸಹ ರಾಬಿನ್ ಉತ್ತಪ್ಪ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅವರು 41 ಎಸೆತಗಳಲ್ಲಿ 55 ರನ್‌ಗಳಿಸುವ ಮೂಲಕ ಸಂಕಷ್ಟದಲ್ಲಿದ್ದ ತಮ್ಮ ತಂಡವನ್ನು ಪಾರು ಮಾಡಿದ್ದರು. ಆದರೆ, ಕೋಲ್ಕತಾಗೆ ಗೆಲವು ದಕ್ಕಿಸಿಕೊಳ್ಳಲಾಗಲಿಲ್ಲ.
ಆದರೆ, ತಾವೀಗ ಸರಿಯಾದ ರೀತಿಯಲ್ಲಿ ಕ್ರಿಕೆಟ್ ಆಡುತ್ತಿರುವುದಾಗಿ ಹೇಳಿರುವ ಉತ್ತಪ್ಪ, ಬ್ಯಾಟಿಂಗ್‌ನಲ್ಲಿ ತಂತಜ್ಞಾನದ ಬದಲಾವಣೆ ಮತ್ತು ಕೆಲ ನ್ಯೂನತೆಗಳನ್ನು ಸರಿಪಡಿಸಿಕೊಂಡಿರುವುದು ಇದಕ್ಕೆ ಕಾರಣ ಎಂದು ಐಪಿಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
ಇದರಿಂದ ದೀರ್ಘಾವಧಿಯ ಇನಿಂಗ್ಸ್ ಆಡಲು ಸಾಧ್ಯವಾಗುವುದರ ಜೊತೆಗೆ ಉತ್ತಮ ರೀತಿಯಲ್ಲಿ ರನ್ ಕಲೆಹಾಕಲು ಸಹಕಾರಿಯಾಗುತ್ತದೆ. ವೇಗದ ದಾಳಿಯ ಮುಂದೆ ಚೆಂಡನ್ನು ಸರಾಗವಾಗಿ ಎದುರಿಸಬಲ್ಲೆವು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ತೋರಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ ಎಂದು ಕರ್ನಾಟಕ ಮೂಲದ ಆಟಗಾರ ಉತ್ತಪ್ಪ ಹೇಳಿದ್ದಾರೆ.
ಡೆಲ್ಲಿ ವಿರುದ್ಧ ತಂಡ ಉತ್ತಮ ಪ್ರದರ್ಶವನ್ನೇ ನೀಡಿತು. ಆದರೆ, ಪಂದ್ಯದ 18ನೇ ಓವರಿನಲ್ಲಿ ಎದುರಾಳಿ ಬ್ಯಾಟ್ಸ್‌ಮನ್ ಜೀನ್ ಪಾಲ್ ಡುಮಿನಿ ಫಲಿತಾಂಶ ಬದಲಾವಣೆಗೆ ಕಾರಣರಾದರು. ಪಂದ್ಯ ಸೋತರೂ ಅನೇಕ ಸಾಕಾರಾತ್ಮಕ ಅಂಶಗಳನ್ನು ಕಾಣಬಹುದು ಎಂದಿದ್ದಾರೆ.
ಕೋಲ್ಕತಾ ತಂಡದಲ್ಲಿನ ಆಟಗಾರರು ಉತ್ತಮ ಸಾಮರ್ಥ್ಯ ಹೊಂದಿದ್ದು, ನಿನ್ನೆಯ ಪಂದ್ಯದಲ್ಲಿ ಮನೀಷ್ ಪಾಂಡೆ, ಶಕೀಬ್ ಅಲ್ ಹಸನ್ ಉತ್ತಮ ರೀತಿಯಲ್ಲಿ ಬ್ಯಾಟ್ ಮಾಡಿದರು. ವೈಯಕ್ತಿಕವಾಗಿಯೂ ಉತ್ತಮ ಆಟ ಪ್ರದರ್ಶಿಸಿರುವುದಕ್ಕೆ ತೃಪ್ತಿ ಇದೆ ಎಂದು ರಾಬಿನ್ ಉತ್ತಪ್ಪ ನುಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.