ಕ್ರೀಡೆ

ಫೆಡರೇಷನ್ ಕಪ್ ಅಥ್ಲೆಟಿಕ್‌ಗೆ ರಾಜ್ಯ ತಂಡ ಪ್ರಕಟ

Published On :

ಬೆಂಗಳೂರು: ಚೆನ್ನೈನಲ್ಲಿ ಜೂನ್ 9ರಿಂದ 11ರ ವರೆಗೆ ನಡೆಯಲಿರುವ ಜೂನಿಯರ್ ಫೆಡರೇಷನ್ ಕಪ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗಾಗಿ ಕರ್ನಾಟಕದ 20 ವರ್ಷದೊಳಗಿನವರ ಬಾಲಕರ ತಂಡವನ್ನು ಪ್ರಕಟಿಸಲಾಗಿದೆ.
ತಂಡ ಇಂತಿದೆ: 100ಮೀಟರ್ ಓಟ-ಸಲೀಂ ಶೇಖ್, ರುಷಬ್ ಶಾ, 200ಮೀ.- ಸಲೀಂ ಶೇಖ್, ಪಿ.ಆರ್. ಚಂದ್ರಕಾಂತ್, 400ಮೀ.- ಡಿ.ಆರ್. ರಾಹುಲ್, ಎ.ಕೆ. ರಘು, 800ಮೀ.- ಭಾರಥಲೋಮ್ ಪುಟ್ಟರಾಜು, 10,000ಮೀ.- ಎಚ್. ಲಿಂಗರಾಜ್, 110ಮೀ. ಹರ್ಡಲ್ಸ್- ಶಿವಕುಮಾರ್, ಪಿ.ಎಂ. ಮಂಜುನಾಥ್, ಶಾಟ್‌ಪಟ್- ಜಾಸನ್ ರೂಬೆನ್ ಸಾಲಿನ್ಸ್, ಹ್ಯಾಮರ್ ಎಸೆತ- ಗವಿಸ್ವಾಮಿ.
ಆಯ್ಕೆ ಟ್ರಯಲ್ಸ್: ಕರ್ನಾಟಕ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯು ಬೆಂಗಳೂರಿನಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಮೇ 10 ಮತ್ತು 11ರಂದು ರಾಜ್ಯ ಸೀನಿಯರ್ ಪುರುಷರ ಮತ್ತು ಮಹಿಳೆಯರ ತಂಡಗಳ ಆಯ್ಕೆಗಾಗಿ ಆಯ್ಕೆ ಟ್ರಯಲ್ಸ್ ಕರೆದಿದೆ.
ಈ ಆಯ್ಕೆ ಟ್ರಯಲ್ಸ್ ಮೂಲಕ ಲಖನೌದಲ್ಲಿ ಜೂನ್ 5ರಿಂದ 8ರ ವರೆಗೆ ನಡೆಯಲಿರುವ ರಾಷ್ಟ್ರೀಯ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗಾಗಿ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಎನ್. ಚಂದ್ರಶೇಖರ್ ರೈ ತಿಳಿಸಿದ್ದಾರೆ.
ಆಸಕ್ತ ಕ್ರೀಡಾಪಟುಗಳು ಮೇ 7ರೊಳಗೆ ಪ್ರವೇಶ ಸ್ವೀಕರಿಸಲು ಕೊನೆಯ ದಿನವಾಗಿದ್ದು, ವಿವರಗಳಿಗೆ ಚಂದ್ರಶೇಖರ್ ರೈ, ಕಾರ್ಯದರ್ಶಿ, ರಾಜ್ಯ ಅಥ್ಲೆಟಿಕ್ ಸಂಸ್ಥೆ, ನಂ.2, ಗೇಟ್ ನಂ.3, ಕಂಠೀರವ ಕ್ರೀಡಾಂಗಣ, ಬೆಂಗಳೂರು-560001, ಮೊಬೈಲ್ ಸಂಖ್ಯೆ-9886681134 ಅಥವಾ 9343793911 ಮತ್ತು ಇಮೇಲ್ karathletic@gmail.com ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.