ಕ್ರೀಡೆ

ಇಂದು ಭಾರತ-ಕಿವೀಸ್ ಸೆಮೀಸ್ ಕದನ

Published On :

ಗ್ಲಾಸ್ಗೋ: ಭಾರತ ಹಾಕಿ ತಂಡದ ಆಟಗಾರರು ನ್ಯೂಜಿಲೆಂಡ್ ವಿರುದ್ಧ ಆಡಲಾಗವ 20ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಸೆಮಿಫೈನಲ್ ಪಂದ್ಯದಾರಂಭಕ್ಕೆ ಮುನ್ನವೇ ಭಾರಿ ಆಘಾತಕ್ಕೆ ಒಳಗಾಗಬೇಕಾಗಿದೆ.
ಏಕೆಂದರೆ, ತಂಡದ ನಾಯಕ ಸರ್ದಾರ್ ಸಿಂಗ್, ಸೆಮಿಫೈನಲ್ ಪಂದ್ಯದಿಂದ ಅಮಾನತುಗೊಂಡಿರುವುದು ಭಾರತೀಯರ ಆತ್ಮವಿಶ್ವಾಸದ ಮೇಲೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹಿರಿಯ ಅನುಭವಿ ಆಟಗಾರ ಸರ್ದಾರ್ ಅನುಪಸ್ಥಿತಿ ನಡುವೆಯೇ ಶನಿವಾರ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೋರಾಟ ನಡೆಸಬೇಕಿರುವುದು ನಿಜಕ್ಕೂ ದುರದೃಷ್ಟಕರವೇ ಎನ್ನುವಂತಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎದುರಾಳಿ ಆಟಗಾರ ಎಡೀ ಓಕೆಂಡೆನ್ ಮೇಲೆ ದೈಹಿಕ ಹಲ್ಲೆ ನಡೆಸಿದ ಪ್ರಯತ್ನವಾಗಿ ಸರ್ದಾರ್‌ಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ, ಅವರ ಈ ರೀತಿಯ ಅಪಾಯಕಾರಿ ಆಟ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದ “G’ ಗುಂಪಿನ ಲೀಗ್ ಪಂದ್ಯದಲ್ಲೂ ಮುಂದುವರಿದಿದ್ದರಿಂದ ಹಳದಿ ಕಾರ್ಡ್ ನೀಡಿದ್ದಲ್ಲದೇ ಮತ್ತೊಮ್ಮೆ ಎಚ್ಚರಿಸಲಾಗಿತ್ತು. ಟೂರ್ನಿಯಲ್ಲಿ ಸರ್ದಾರ್ ಎರಡನೇ ಬಾರಿಗೆ ವರಟಾಟ ಪ್ರದರ್ಶಿಸಿದ್ದರಿಂದ ತೀರ್ಪುಗಾರರು ಎರಡು ಪಂದ್ಯದಿಂದ ಅವರನ್ನು ಅಮಾನುಗೊಳಿಸಿದ ನಿರ್ಧಾರ ಪ್ರಕಟಿಸಿದ್ದರು.
ಆದರೆ, ಭಾರತ ತಂಡದ ವ್ಯವಸ್ಥಾಪಕರು ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ತೀರ್ಪುಗಾರರು ಕೊನೆಗೆ ಶಿಕ್ಷೆ ಪ್ರಮಾಣವನ್ನು ಒಂದು ಪಂದ್ಯಕ್ಕೆ ಇಳಿಸಿದರು. ಒಂದು ವೇಳೆ, ಎರಡು ಪಂದ್ಯಗಳ ಅಮಾನತಿನ ಶಿಕ್ಷೆಯೇ ಮುಂದುವರಿದಿದ್ದರೆ, ಬಹುಷಃ ಸರ್ದಾರ್ ಸಿಂಗ್, ಫೈನಲ್ ಪಂದ್ಯದಿಂದ ಅಥವಾ ಕಂಚಿನ ಪದಕಕ್ಕಾಗಿನ ಸಮರದಿಂದಲೂ ಹೊರಗುಳಿಯಬೇಕಾಗುತ್ತಿತ್ತು.
ಸರ್ದಾರ್ ಉದ್ದೇಶಪೂರ್ವಕವಾಗೇನೂ ಸ್ಟಿಕ್ ಕೌಶಲ ಪ್ರದರ್ಶಿಸಿರಲಿಲ್ಲ. ಅವರಿಗೆ ವಿಧಿಸಲಾಗಿರುವ ಒಂದು ಪಂದ್ಯದ ನಿಷೇಧದ ಶಿಕ್ಷೆಯಿಂದ ನಮ್ಮದೇನೂ ಅಭ್ಯಂತರವಿಲ್ಲ ಎಂದು ಭಾರತ ತಂಡದ ಕೋಚ್ ಎಂ.ಕೆ. ಕೌಶಿಕ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ನ್ಯೂಜಿಲೆಂಡ್ ವಿರುದ್ಧದ ನಾಲ್ಕರ ಘಟ್ಟದಲ್ಲಿ ಗೆದ್ದು ಫೈನಲ್‌ಗೆ ತಲುವು ಆತ್ಮವಿಶ್ವಾಸದಲ್ಲಿ ಭಾರತೀಯ ಆಟಗಾರರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 5-2 ಗೋಲುಗಳಿಂದ ಜಯಗಳಿಸುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿರುವ ಭಾರತ, ಇದೇ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಲೆಕ್ಕಾಚಾರದಲ್ಲಿದೆ.  ನ್ಯೂಜಿಲೆಂಡ್ ಪಡೆ ಹೆಚ್ಚು ಅನುಭವದಿಂದ ಕೂಡಿದೆ. ತಂಡದಲ್ಲಿನ ಒಟ್ಟು 16 ಆಟಗಾರರ ಪೈಕಿ 7 ಮಂದಿ ಆಟಗಾರರು 150 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಹಾಗಾಗಿ, ಭಾರತಕ್ಕೆ ನ್ಯೂಜಿಲೆಂಡ್ ಕಠಿಣ ಸವಾಲು ಒಡ್ಡುವುದರಲ್ಲಿ ಅನುಮಾನವಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.