ಕ್ರೀಡೆ

ಸೆಮೀಸ್‌ಗೆ ಸಿಂಧು, ಕಶ್ಯಪ್

Published On :

ಗ್ಲಾಸ್ಗೋ: ಭಾರತದ ಪ್ರತಿಭಾನ್ವಿತ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಪರುಪಳ್ಳಿ ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪುವುದರೊಂದಿಗೆ ಪದಕದ ಆಸೆ ಹೆಚ್ಚಿಸಿಕೊಂಡಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಹುಡುಗಿ ಸಿಂಧು, 21-10, 21-9 ಅಂಕಗಳಿಂದ ನ್ಯೂಜಿಲೆಂಡ್‌ನ ಅನ್ನಾ ರ್ಯಾಂಕಿನ್ ವಿರುದ್ಧ ಜಯಗಳಿಸಿದರು. ವಿಶ್ವದ 11ನೇ ಶ್ರೇಯಾಂಕಿತೆ ಸಿಂಧು ಎರಡೂ ಗೇಮ್‌ಗಳಲ್ಲಿ ಉತ್ತಮ ಆಟ ಸಂಘಟಿಸುವ ಮೂಲಕ ಕೇವಲ 24 ನಿಮಿಷಗಳಲ್ಲಿಯೇ ಪಂದ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ವಿಶ್ವ ಚಾಂಪಿಯನ್‌ಶಿಪ್ ಕಂಚು ಪದಕ ವಿಜೇತೆ ಸಿಂಧು, ನಾಲ್ಕರಘಟ್ಟದ ಮುಖಾಬಲದಲ್ಲಿ ಕೆನಡಾದ ಮಿಚೆಲಿ ಲೀ ಅವರನ್ನು ಎದುರಿಸಲಿದ್ದಾರೆ. ಇಂದೇ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಸೆಣಸಿನಲ್ಲಿ ಪಿ. ಕಶ್ಯಪ್ 21-13, 21-14 ಅಂಕಗಳಿಂದ ಡಾರೆನ್ ಲಿಯೂ ಅವರನ್ನು ಪರಾಭವಗೊಳಿಸಿದರು. 22ನೇ ಶ್ರೇಯಾಂಕಿತ ಆಟಗಾರ ಕಶ್ಯಪ್ 38 ನಿಮಿಷಗಳ ಆಟದಲ್ಲಿ ಅಂತಿಮ ವಿಜಯೋತ್ಸವ ಆಚರಿಸಿದರು.  ಕಶ್ಯಪ್‌ಗೆ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ರಾಜೀವ್ ಓಸೆಫ್ ಸವಾಲು ಎದುರಾಗಲಿದೆ.
ಈಗಾಗಲೇ ಸಿಂಧು ಮತ್ತು ಕಶ್ಯಪ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೋಲುಂಡಿದ್ದು, ಸಿಂಗಲ್ಸ್‌ಗಳಲ್ಲಿ ಮಾತ್ರ ಪದಕ ಗೆದ್ದುಕೊಳ್ಳುವ ಉತ್ತಮ ಅವಕಾಶ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.