ಕ್ರೀಡೆ

ಶರತ್-ಆಂಥೋಣಿ ಬೆಳ್ಳಿಗೆ ತೃಪ್ತಿ

Published On :

ಗ್ಲಾಸ್ಗೋ: ಭಾರತದ ಅಚಂತ ಶರತ್ ಕಮಲ್ ಮತ್ತು ಆಂಥೋಣಿ ಅಮಲ್‌ರಾಜ್ ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್ ಸ್ಪರ್ಧೆಯ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಶನಿವಾರ ನಡೆದ ಚಿನ್ನದ ಪದಕಕ್ಕಾಗಿನ ಬೇಟೆಯಲ್ಲಿ ಶರತ್ ಕಮಲ್ ಮತ್ತು ಅಂಥೋಣಿ ಜೋಡಿ 11-8, 7-11, 9-11, 5-11 ಅಂಕಗಳಿಂದ ಸಿಂಗಾಪುರದ ನಿಂಗ್ ಗಾವೊ ಮತ್ತು ಹೂ ಲೀ ಅವರ ಎದುರು ಸೋಲನುಭವಿಸಿ ಎರಡನೇ ಸ್ಥಾನಕ್ಕೆ ಕುಸಿಯಿತು. ಭಾರತದ ಜೋಡಿ ಮೊದಲ ಗೇಮ್ ಗೆದ್ದು ಶುಭಾರಂಭ ಮಾಡಿತಾದರೂ, ಮುಂದಿನ ಮೂರೂ ಗೇಮ್‌ಗಳಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ಚಿನ್ನದ ಪದಕ ಗೆಲ್ಲುವ ಆಸೆ ಕೈಬಿಡಬೇಕಾಯಿತು.
ಸಿಂಗಲ್ಸ್‌ನಲ್ಲಿ ಶರತ್‌ಗೆ ನಿರಾಶೆ
ಆದರೆ, ಸಿಂಗಲ್ಸ್ ವಿಭಾಗದಲ್ಲಿ ಮಾತ್ರ ಶರತ್ ಕಮಲ್ ಫೈನಲ್ ತಲುಪಲು ವಿಫಲರಾಗಿದ್ದಾರೆ. ಇಂದೇ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಗಾಪುರದ ಜೆ. ಝಾನ್ 11-6, 11-6, 11-6, 11-8 ಅಂಕಗಳಿಂದ ಭಾರತೀಯ ಆಟಗಾರನಿಗೆ ಸೋಲುಣಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.