ಕ್ರೀಡೆ

ಶರತ್-ಆಂಥೋಣಿ ಬೆಳ್ಳಿಗೆ ತೃಪ್ತಿ

Published On :

ಗ್ಲಾಸ್ಗೋ: ಭಾರತದ ಅಚಂತ ಶರತ್ ಕಮಲ್ ಮತ್ತು ಆಂಥೋಣಿ ಅಮಲ್‌ರಾಜ್ ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್ ಸ್ಪರ್ಧೆಯ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಶನಿವಾರ ನಡೆದ ಚಿನ್ನದ ಪದಕಕ್ಕಾಗಿನ ಬೇಟೆಯಲ್ಲಿ ಶರತ್ ಕಮಲ್ ಮತ್ತು ಅಂಥೋಣಿ ಜೋಡಿ 11-8, 7-11, 9-11, 5-11 ಅಂಕಗಳಿಂದ ಸಿಂಗಾಪುರದ ನಿಂಗ್ ಗಾವೊ ಮತ್ತು ಹೂ ಲೀ ಅವರ ಎದುರು ಸೋಲನುಭವಿಸಿ ಎರಡನೇ ಸ್ಥಾನಕ್ಕೆ ಕುಸಿಯಿತು. ಮೊದಲ ಗೇಮ್ ಗೆದ್ದು ಶುಭಾರಂಭ ಮಾಡಿದರೂ, ಮುಂದಿನ ಮೂರೂ ಗೇಮ್‌ಗಳಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ಚಿನ್ನದ ಪದಕ ಗೆಲ್ಲುವ ಆಸೆ ಕೈಬಿಡಬೇಕಾಯಿತು. ಈ ಇಬ್ಬರೂ ಸಾಧಕರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಲಾ 30 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.
ಸಿಂಗಲ್ಸ್‌ನಲ್ಲಿ ಶರತ್‌ಗೆ ನಿರಾಶೆ
ಆದರೆ, ಸಿಂಗಲ್ಸ್‌ನಲ್ಲಿ ಮಾತ್ರ ಶರತ್ ಕಮಲ್ ನಿರಾಶೆ ಅನುಭವಿಸಿದ್ದಾರೆ. ಕಂಚಿನ ಪದಕ್ಕಾಗಿ ನಡೆದ ಪಂದ್ಯದಲ್ಲಿ ಶರತ್, ಇಂಗ್ಲೆಂಡ್‌ನ ಲಿಯಮ್ ಪಿಚ್‌ಫೋರ್ಡ್ ವಿರುದ್ಧ ಸೋತರು.  ---
ಸಿಂಧುಗೆ ಕಂಚಿನ ಬಿಂದುಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಗರಿ ಮೂಡಿದೆ. ನಂಬಿಕಸ್ತ ಆಟಗಾರ್ತಿ ಪಿ.ವಿ. ಸಿಂಧು, ಶನಿವಾರ ಮಹಿಳೆಯರ ಸಿಂಗಲ್ಸ್‌ನಲ್ಲಿ ನಡೆದ ಕಂಚಿನ ಪದಕ್ಕಾಗಿನ ಪೈಪೋಟಿಯಲ್ಲಿ ಮಲೇಷಿಯಾದ ಜಿಂಗ್ ಯೀ ಟೀ ಅವರನುಢಿ 23-21, 21-9 ಅಂಕಗಳಿಂದ ಪರಾಭವಗೊಳಿಸಿ ಈ ಸಾಧನೆ ಮಾಡಿದರು.
  ಮೊದಲ ಗೇಮ್‌ನಲ್ಲಿ ಸಿಂಧುಗೆ ಕಠಿಣ ಸವಾಲು ಎದುರಾಯಿತು. ಆದರೆ, ಎದುರಾಳಿಯ ಸವಾಲುಗಳನ್ನು ಆತ್ಮವಿಶ್ವಾಸದಿಂದಲೇ ಹತ್ತಿಕ್ಕುವ ಮೂಲಕ ತಮ್ಮ ಪ್ರಭುತ್ವ ಸ್ಥಾಪಿಸಿದರು.
  ಮೊದಲ ಗೇಮ್ ಗೆದ್ದು ಶುಭಾರಂಭ ಮಾಡುವ ಮೂಲಕ ಸ್ಫೂರ್ತಿ ತುಂಬಿಕೊಂಡ ಭಾರತೀಯ ಶಟ್ಲರ್, ಎರಡನೇ ಗೇಮ್‌ನ್ನು ಸರಳವಾಗಿ ಗೆದ್ದುಕೊಂಡು ಪದಕದ ಮೇಲೆ ತಮ್ಮ ಮೊಹರು ಒತ್ತಿದರು.
  ಮತ್ತೊಂದೆಡೆ ಮಲೇಷಿಯಾ ಆಟಗಾರ್ತಿ ಮೈಕೊಡವಿ ಮೇಲೇಳಲು ಪ್ರಯತ್ನಿಸಿದರಾದರೂ, ಸಿಂಧು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.