ಸ್ಕ್ವಾಶ್ನಲ್ಲಿ ಸ್ವರ್ಣ ಸ್ಮಾಶ್
ಗ್ಲಾಸ್ಗೋ: ಭಾರತದ ಸ್ಕ್ವಾಷ್ ತಾರೆಗಳಾದ ದೀಪಿಕಾ ಪಳ್ಳಿಕಲ್ ಹಾಗೂ ಜೋಷ್ನಾ ಚಿನ್ನಪ್ಪ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಕ್ರೀಡಾಕೂಟದ 10ನೇ ದಿನವಾದ ಶನಿವಾರ ನಡೆದ ವನಿತೆಯರ ಡಬಲ್ಸ್ ವಿಭಾಗದಲ್ಲಿ ಜೋಷ್ನಾ ಚಿನ್ನಪ್ಪ ಹಾಗೂ ದೀಪಿಕಾ ಪಳ್ಳಿಕಲ್, ತಮ್ಮ ಎದುರಾಳಿ ಇಂಗ್ಲೆಂಡ್ನ ಜೆನ್ನಿ ಡನ್ಕಾಲ್ಫ್ ಹಾಗೂ ಲೌರಾ ಮಸ್ಸಾರೊ ವಿರುದ್ಧ 11-6, 11-8 ನೇರ ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಆರಂಭದಿಂದಲೂ ಆಂಗ್ಲ ಜೋಡಿ ವಿರುದ್ಧ ಪ್ರಾಬಲ್ಯ ಮೇರೆದ ಭಾರತೀಯ ಜೋಡಿ, ಯಾವುದೇ ಹಂತದಲ್ಲೂ ನಿಯಂತ್ರಣ ಕಳೆದುಕೊಳ್ಳಲಿಲ್ಲ. ಆರಂಭದಿಂದಲೂ ಸ್ಥಿರ ಪ್ರದರ್ಶನ ತೋರಿದ ಜೋಷ್ನಾ ಹಾಗೂ ದೀಪಿಕಾ ನೇರ ಸೆಟ್ಗಳ ಅಂತರದಲ್ಲಿ ಸುಲಭ ಗೆಲವು ದಾಖಲಿಸಿದರು.
ಈ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಸ್ಕ್ವಾಷ್ನಲ್ಲಿ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

