ಕೊಡವ ಹಾಕಿ ಲೀಗ್ ಲಾಂಛನ
ಗೋಣಿಕೊಪ್ಪಲು: ಅಮ್ಮತ್ತಿಯ ಫ್ಲೈಯಿಂಗ್ ಕಲರ್ಸ್ ನಡೆಸಲಿರುವ ಕೊಡವ ಚಾಂಪಿಯನ್ಸ್ ಹಾಕಿ ಲೀಗ್ ಪಂದ್ಯಾಟದ ಲಾಂಛನವನ್ನು ಅಮ್ಮತ್ತಿ ಕೊಡವ ಸಮಾಜದಲ್ಲಿ ಬಿಡುಗಡೆಗೊಳಿಸಲಾಯಿತು.
ರಾಜ್ಯ ಹಾಕಿ ಅಕಾಡೆಮಿ ಉಪಾಧ್ಯಕ್ಷ ಡಾ. ಅಂಜಪರವಂಡ ಸುಬ್ಬಯ್ಯ, ಕಾಪ್ಸ್ ಶಾಲೆಯ ಕಾರ್ಯದರ್ಶಿ ಮುಂಡ್ಯೋಳಂಡ ನಂಜುಂಡ, ಹಾಕಿ ಕೊಡಗು ಅಧ್ಯಕ್ಷ ಪೈಕೇರ ಕಾಳಯ್ಯ, ಮಾಜಿ ಕಾರ್ಯದರ್ಶಿ ಬಲ್ಲಚಂಡ ಪಾರ್ಥ ಚಂಗಪ್ಪ ಲಾಂಛನ ಬಿಡುಗಡೆಗೊಳಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ರಾಜ್ಯ ಹಾಕಿ ಅಕಾಡೆಮಿ ಉಪಾಧ್ಯಕ್ಷ ಡಾ. ಅಂಜಪರವಂಡ ಸುಬ್ಬಯ್ಯ, ಗ್ರಾಮೀಣ ಪ್ರತಿಭೆಗಳು ರಾಷ್ಟ್ರ ಮಟ್ಟದ ಆಟಗಾರರಷ್ಟೇ ಪ್ರಬುದ್ಧತೆ ಹೊಂದಿದ್ದು, ಅಂತಹ ಆಟಗಾರರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಅಭಿಲಾಷೆ ಇದೆ. ಅಂತಹ ಆಟಗಾರರಿಗೆ ಸೂಕ್ತ ಸ್ಪಂದನೆ ನೀಡಿ ಆಟದ ಜೊತೆ ವೃತ್ತಿಯೂ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಕಾಪ್ಸ್ ಶಾಲೆಯ ಕಾರ್ಯದರ್ಶಿ ಮುಂಡ್ಯೋಳಂಡ ನಂಜುಂಡ ಮಾತನಾಡಿ, ಸಂಘಟಕರು ಕ್ರೀಡಾ ಉದ್ಧಾರಕ್ಕಾಗಿ ಮೇಲ್ಮಟ್ಟದ ಕ್ರೀಡಾಕೂಟ ಆಯೋಜಿಸುತ್ತಿರುವುದು ಕ್ರೀಡೆಗೆ ಪೂರಕವಾಗಿದೆ ಎಂದರು.
ಡಿಂಪಾ- ಕೋಕಾ ಎಂಬ ಕಾರ್ಟೂನ್ ಬಿಡುಗಡೆ, ಹಾಕಿ ಉತ್ಸವದ ಲಾಂಛನ, ಬ್ರೌಷರ್ ಬಿಡುಗಡೆ ಮಾಡಲಾಯಿತು. ಹಾಕಿ ಕೊಡಗು ಅಧ್ಯಕ್ಷ ಪೈಕೇರ ಕಾಳಯ್ಯ, ಮಾಜಿ ಕಾರ್ಯದರ್ಶಿ ಬಲ್ಲಚಂಡ ಪಾರ್ಥ ಚಂಗಪ್ಪ ಇದ್ದರು.
ಫ್ಲೈಯಿಂಗ್ ಕಲರ್ಸ್ ಸಂಸ್ಥೆಯ ಕುಟ್ಟಂಡ ಸುದಿನ್, ಬೋಪಣ್ಣ ಭಾಗವಹಿಸಿದ್ದರು. ಚಾಂಪಿಯನ್ಸ್ ಲೀಗ್ನಲ್ಲಿ ಪಾಲ್ಗೊಳ್ಳುವ ತಂಡಗಳ ವ್ಯವಸ್ಥಾಪಕರು, ಕುಟುಂಬ ಸದಸ್ಯರು ಹಾಗೂ ಕ್ರೀಡಾ ಪ್ರೇಮಿಗಳು ಇದ್ದರು.
ಡಿ.3ರಿಂದ ಪಂದ್ಯಾವಳಿ: ಡಿ.3ರಿಂದ 14ರವರೆಗೆ ಅಮ್ಮತ್ತಿಯ ಶಾಲೆ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಕೊಡವ ಹಾಕಿ ನಮ್ಮೆಯ ಪ್ರಿ ಕ್ವಾರ್ಟರ್ ಪ್ರವೇಶ ಪಡೆದಿರುವ ಕಲಿಯಂಡ, ಕೂತಂಡ, ಅಂಜಪರವಂಡ, ಕುಲ್ಲೇಟೀರ, ಚೇಂದಿರ, ಕರ್ತಮಾಡ, ಕರಿನೆರವಂಡ, ಅಜ್ಜೇಟೀರ, ಚೇಂದಂಡ, ಕೋಳೇರ, ಪಳಂಗಂಡ, ಮಂಡೇಪಂಡ, ಕುಟ್ಟಂಡ, ಅರೆಯಡ, ಇಟ್ಟೀರ ಹಾಗೂ ಬಾಳೆಯಡ ತಂಡಗಳು ಸೆಣೆಸಾಟ ನಡೆಸಲಿದೆ ಎಂದು ಪ್ರಕಟಿಸಲಾಯಿತು.
ಐಪಿಎಲ್ ಮಾದರಿ
ತಾತಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಅಂತಿಮ 16ರ ಘಟ್ಟಕ್ಕೆ ತಲುಪಿದ ತಂಡಗಳ ಮಧ್ಯೆ ಪಂದ್ಯಾವಳಿ ನಡೆಯಲಿದ್ದು, ಈ ಬಾರಿ ಐಪಿಎಲ್ ಮಾದರಿಯಲ್ಲಿ 6 ಕ್ರೀಡಾಳುಗಳನ್ನು ಬಿಡ್ ಮೂಲಕ ಖರೀದಿಸಲಾಗುವುದು. ಆಯ್ಕೆಯಾದ 16 ತಂಡಕ್ಕೆ ತಲಾ ರು. 1 ಲಕ್ಷ ನಗದನ್ನು ಸಂಘಟಕರು ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

