ವಿಜೇಂದರ್, ಮಂದೀಪ್ ಬೆಳ್ಳಿಗೆ ತೃಪ್ತಿ
ಗ್ಲಾಸ್ಗೋ: ಭಾರತದ ಬಾಕ್ಸರ್ಗಳಿಂದ ಒಂದೆರೆಡು ಚಿನ್ನದ ಪದಕಗಳು ದಕ್ಕಬಹುದೆಂಬುದು ಎಲ್ಲರ ಆಸೆಯಾಗಿತ್ತು. ಆದರೆ, ಈ ಆಸೆ ಹುಸಿಗೊಂಡಿದೆ. ಚಿನ್ನದ ಬೇಟೆಗಾಗಿ ಕಣದಲ್ಲಿದ್ದ ನಾಲ್ವರೂ ಬಾಕ್ಸರ್ಗಳು ಸೋಲನುಭವಿಸಿ ಬೆಳ್ಳಿ ಪದಕ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಪದಕಗಳು ದಕ್ಕಿರುವ ಖುಷಿ ಒಂದೆಡೆ ಇದ್ದರೂ ಸಹ ಚಿನ್ನದ ಪದಕ ಗೆದ್ದುಕೊಳ್ಳಲಾಗಲಿಲ್ಲವಲ್ಲ ಎಂಬ ಕೊರಗೂ ಮತ್ತೊಂದೆಡೆ ಇದೆ.
ಶನಿವಾರ ತಡರಾತ್ರಿ ನಡೆದ ಪುರುಷರ 74 ಕೆ.ಜಿ. ವಿಭಾಗದ ಮಿಡಲ್ವೇಟ್ ಫೈನಲ್ನಲ್ಲಿ ವಿಜೇಂದರ್ ಸಿಂಗ್ ಸೋಲನುಭವಿಸಿದರು. 2008ರ ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ 0-3 ಅಂಕಗಳ ಅಂತರದಲ್ಲಿ ಇಂಗ್ಲೆಂಡ್ನ ಆಂಥೋನಿ ಫಾವ್ಲರ್ ಎದುರು ಶರಣಾದರು.
ಇನ್ನು ಪುರುಷರ 69 ಕೆ.ಜಿ. ವಿಭಾಗದಲ್ಲಿ ಮಂದೀಪ್ ಜಾಂಗ್ರಾ ಕೂಡ ಫೈನಲ್ ಸೆಣಸಿನಲ್ಲಿ ಸೋಲನುಭವಿಸಿ ಬೆಳ್ಳಿ ಪದಕ ಗಳಿಸಲಷ್ಟೇ ತೃಪ್ತರಾದರು. ಇಂಗ್ಲೆಂಡ್ನ ಸ್ಕಾಟ್ ಫಿಜ್ಗೆರಾಲ್ಡ್ 3-0 ಅಂಕಗಳಿಂದ ಮಂದೀಪ್ರನ್ನು ಪರಾಭವಗೊಳಿಸಿ ಚಿನ್ನದ ಪದಕ ಗೆದ್ದುಕೊಂಡರು.
ಇದಕ್ಕೂ ಮುನ್ನ ಮಹಿಳೆಯರ 57-60 ಕೆ.ಜಿ. ಲೈಟ್ವೇಟ್ ವಿಭಾಗದಲ್ಲಿ ಲೇಶರಾಮ್ ಸರಿತಾ ದೇವಿ ಹಾಗೂ ಆಕೆಯ ಕಿರಿಯ ಸಹೋದರ ಲೇಶರಾಮ್ ದೇವೇಂದ್ರೊ ಸಿಂಗ್ ಪುರುಷರ 46-49 ಕೆ.ಜಿ. ಲೈಟ್ವೇಟ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕಗಳನ್ನು ಸಂಪಾದಿಸಿಕೊಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

