ಕ್ರೀಡೆ

ಅರ್ಪಿಂದರ್‌ಗೆ ಕಂಚು

ಅರ್ಪಿಂದರ್‌ಗೆ ಕಂಚು
Published On :

ಗ್ಲಾಸ್ಗೋ: ತವರಿನ ಭರವಸೆಯ ಕ್ರೀಡಾಪಟು ಅರ್ಪಿಂದರ್ ಸಿಂಗ್ 20ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೂರನೇ ಪದಕ ಗೆದ್ದುಕೊಟ್ಟಿದ್ದಾರೆ.
ಶನಿವಾರ ತಡರಾತ್ರಿ ನಡೆದ ಪುರುಷರ ಟ್ರಿಬಲ್ ಜಿಗಿತದಲ್ಲಿ ಅರ್ಪಿಂದರ್ ಸಿಂಗ್ ಕಂಚಿನ ಪದಕ ಜಯಿಸಿದರು. ಹ್ಯಾಂಪ್‌ಡನ್ ಪಾರ್ಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅರ್ಪಿಂದರ್ ಸಿಂಗ್ ಒಟ್ಟು 16.63 ಮೀಟರ್ ದೂರ ಜಿಗಿಯುವ ಮೂಲಕ ಮೂರನೇ ಸ್ಥಾನದ ಗೌರವದೊಂದಿಗೆ ಈ ಪದಕ ಸಂಪಾದಿಸಿದರು.
ಕಳೆದ ಜೂನ್‌ನಲ್ಲಿ 17.17 ಮೀ. ದೂರ ಜಿಗಿದು ಅತ್ಯುತ್ತಮ ಸಾಮರ್ಥ್ಯ ತೋರಿದ್ದ ಅವರು ಇಲ್ಲಿ ಆ ಸಾಧನೆ ಮಾಡದಿದ್ದರೂ ಕೂಡ ಗಮನ ಸಳೆಯುವ ಪ್ರದರ್ಶನವನ್ನೇ ನೀಡಿದರು. ಅರ್ಪಿಂದರ್ ಸಿಂಗ್, ತಮ್ಮ ಮೊದಲ ಜಿಗಿತದಲ್ಲಿಯೇ 16.63 ಮೀ. ದೂರ ಜಿಗಿದರು.
ಆದರೆ, ನಂತರದ ಪ್ರಯತ್ನಗಳಲ್ಲಿ ಅವರು ಇದನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲೇ ಇಲ್ಲ. 21ರ ಭಾರತೀಯ ಅಥ್ಲೀಟ್, 16.46ಮೀ., 16.31 ಮೀ. ಮತ್ತು 16.09 ಮೀ. ದೂರ ಜಿಗಿಯಲಷ್ಟೇ ಶಕ್ತರಾದರು. ದಕ್ಷಿಣ ಆಫ್ರಿಕಾದ ಖೋಟ್ಸೋ ಮೊಕೊಯೆನಾ 17.20 ಮೀ. ದೂರ ಜಿಗಿದು ಚಿನ್ನದ ಪದಕ ಗೆದ್ದುಕೊಂಡರೆ, 2010ರ ದೆಹಲಿ ಕೂಟದ ಚಾಂಪಿಯನ್ ನೈಜೀರಿಯಾದ ಟೋಸಿನ್ ಓಕೆ 16.84 ಮೀ. ದೂರದ ಸಾಧನೆಯೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಈ ಮುನ್ನ ಅಥ್ಲೆಟಿಕ್ಸ್‌ನಲ್ಲಿ ಪುರುಷರ ಡಿಸ್ಕಸ್‌ನಲ್ಲಿ ವಿಕಾಸ್ ಗೌಡ ಚಿನ್ನದ ಪದಕ ಹಾಗೂ ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಸೀಮಾ ಪೂನಿಯಾ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದರು. ಈಗ ಅರ್ಪಿಂದರ್ ಅಥ್ಲೆಟಿಕ್ಸ್‌ನಲ್ಲಿ ಮೂರನೇ ಪದಕ ಸಂಪಾದಿಸಿಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.