ಕ್ರೀಡೆ

ಗ್ಲಾಸ್ಗೋದಲ್ಲೂ ಬೆಳ್ಳಿಗೇ ಸಮಾಧಾನ

ಗ್ಲಾಸ್ಗೋದಲ್ಲೂ ಬೆಳ್ಳಿಗೇ ಸಮಾಧಾನ
Published On :

ಬಲಾಢ್ಯ ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಭಾರತ ಹಾಕಿ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಪಂದ್ಯದಲ್ಲಿ ಒಂದೇ ಒಂದು ಗೋಲು ದಾಖಲಿಸುವಲ್ಲಿ ವೈಫಲ್ಯ ಕಂಡ ಭಾರತ, ಹಾಲಿ ಚಾಂಪಿಯನ್ನರ ವಿರುದ್ಧ 4-0 ಗೋಲುಗಳ ಅಂತರದಿಂದ ಕೈಚೆಲ್ಲಿತು.
ಇದರೊಂದಿಗೆ ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸತತ 5ನೇ ಬಾರಿಗೆ ಚಿನ್ನದ ಪದಕ ಗೆದ್ದುಕೊಂಡಿತು. ಡ್ರ್ಯಾಗ್ ಫ್ಲಿಕ್ಕರ್ ಕ್ರಿಸ್ ಸಿರೆಲ್ಲೋ (13, 29 ಹಾಗೂ 48ನೇ ನಿಮಿಷ) ಅವರು ತಮಗೆ ದೊರಕಿದ ಪೆನಾಲ್ಟಿ ಕರ್ನಾರ್ ಅವಕಾಶಗಳಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಎಡ್ಡೀ ಓಕೆಂಡನ್ (51ನೇ ನಿಮಿಷ) ಒಂದು ಗೋಲು ದಾಖಲಿಸಿದರು. ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ದುರ್ಬಲ ತಂಡವಾಗಿ ಅಂಗಣಕ್ಕಿಳಿದ ಭಾರತ ಕಳೆದುಕೊಳ್ಳಲು ಏನೂ ಇರಲಿಲ್ಲ. ಕಾರಣ ಲೀಗ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 4-2 ಗೋಲುಗಳ ಅಂತರದಿಂದ ಗೆಲವು ಸಾಧಿಸಿತ್ತು. ಆದರೆ, ಭಾರತ ತಂಡ ಫೈನಲ್ ಪಂದ್ಯದಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿತು. ಕೆಲ ಬಾರಿ ಭಾರತ ತಂಡ ಗೋಲು ಗಳಿಸುವ ಅವಕಾಶವನ್ನು ಗಿಟ್ಟಿಸಿತ್ತು. ಆದರೆ, ಆಸ್ಟ್ರೇಲಿಯಾದ ಬಲಿಷ್ಠ ರಕ್ಷಣಾ ವಿಭಾಗ ಇದಕ್ಕೆ ಅವಕಾಶ ನೀಡಲಿಲ್ಲ. ಮೊದಲೇ ನಿರೀಕ್ಷೆ ಮಾಡಿದಂತೆ ಪಂದ್ಯದ 13ನೇ ನಿಮಿಷದಲ್ಲೇ ಆಸ್ಟ್ರೇಲಿಯಾ, ತನಗೆ ದೊರಕಿದ ಮೊದಲ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ದಾಖಲಿಸುವ ಮೂಲಕ ಮುನ್ನಡೆ ಪಡೆದುಕೊಂಡಿತು.

ಪದಕ ಪಟ್ಟಿ
ಇಂಗ್ಲೆಂಡ್    58    58    57    173
ಆಸ್ಟ್ರೇಲಿಯಾ    48    42    46    136
ಕೆನಡಾ    32    16    34    82
ಸ್ಕಾಟ್ಲೆಂಡ್    19    15    19    53
ಭಾರತ    15    30    19    64

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.