ಕ್ರೀಡೆ

ಆಸ್ಟ್ರೇಲಿಯನ್ ಲಾಂಛನದ ಕೆಳಗೆ ನಂ.408 ಧರಿಸಿ ಹ್ಯೂಸ್‌ಗೆ ಶ್ರದ್ದಾಂಜಲಿ

ಆಸ್ಟ್ರೇಲಿಯನ್ ಲಾಂಛನದ ಕೆಳಗೆ ನಂ.408 ಧರಿಸಿ ಹ್ಯೂಸ್‌ಗೆ ಶ್ರದ್ದಾಂಜಲಿ
ಫಿಲಿಪ್ ಹ್ಯೂಸ್‌ಗೆ ಶ್ರದ್ಧಾಂಜಲಿ
Published On :

ಸಿಡ್ನಿ:  ಮಂಗಳವಾರ ಆರಂಭವಾಗಲಿರುವ ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರು ತಮ್ಮ ಟೀ ಶರ್ಟ್‌ನಲ್ಲಿ ಆಸ್ಟ್ರೇಲಿಯನ್ ಲಾಂಛನದ ಕೆಳಗೆ ನಂ.408ನ್ನು ಧರಿಸಲಿದ್ದಾರೆ. ಈ ಮೂಲಕ ಆಸ್ಟ್ರೇಲಿಯನ್ ಕ್ರಿಕೆಟಿಗರು ಇತ್ತೀಚೆಗೆ ಬೌನ್ಸರ್‌ಗೆ ಬಲಿಯಾದ ಫಿಲಿಪ್ ಹ್ಯೂಸ್‌ಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಕಣಕ್ಕಿಳಿಯಲಿದೆ. ಆಸಿಸ್ ಆಟಗಾರರ ಶರ್ಟ್‌ಗಳಲ್ಲಿ 408 ಎಂಬ ಸಂಖ್ಯೆಯನ್ನು ಎಂಬ್ರಾಯಿಡರಿ ಮಾಡಲಾಗಿದ್ದು, ಇದು ಹ್ಯೂಸ್‌ಗೆ ತಾವು ಸಲ್ಲಿಸುವ ಶ್ರದ್ಧಾಂಜಲಿ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ.

ಟೆಸ್ಟ್ ಲೆವೆಲ್‌ನಲ್ಲಿ ದೇಶವನ್ನು ಪ್ರತಿನಿಧೀಕರಿಸಿದ 408ನೇ ಆಟಗಾರನಾಗಿದ್ದಾನೆ ಫಿಲಿಪ್ ಹ್ಯೂಸ್. ಆದ್ದರಿಂದ 406 ಎಂಬ ಸಂಖ್ಯೆಯನ್ನು ಎಲ್ಲರೂ ಧರಿಸುವ ಮೂಲಕ ಹ್ಯೂಸ್ ನೆನಪನ್ನು ತಮ್ಮ ಹೃದಯದಲ್ಲಿ ಹೊತ್ತು ಈ ಪಂದ್ಯವನ್ನು ಆಡಲಿದ್ದಾರೆ ಎಂದು ಆಸಿಸ್ ಕ್ರಿಕೆಟ್ ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.