

ಮಧ್ಯಪ್ರದೇಶ: ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಅಲ್‌ರೌಂಡರ್ ರೋಹಿತ್ ತಲ್ವಾರ್ (49) ಅವರು ಶನಿವಾರ ರಾತ್ರಿ ಕಾನ್ಪುರದಲ್ಲಿ ನಿಧನ ಹೊಂದಿದ್ದಾರೆ.
ರೋಹಿತ್ ತಲ್ವಾರ್ ಪ್ರಸ್ತುತ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.
1982 ರಿಂದ 1990ರ ಅಂಚಿನಲ್ಲಿ 26 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ತಲ್ವಾರ್ 32.09ರ ಸರಾಸರಿಯಲ್ಲಿ 1316 ರನ್‌ಗಳನ್ನು ಗಳಿಸಿದ್ದಾರೆ. ಗರಿಷ್ಠ ಮೊತ್ತ 199 ರನ್. ಬಲಗೈ ಸ್ಪಿನ್ನರ್ ಆಗಿದ್ದ ರೋಹಿತ್ ತಲ್ವಾರ್ 7 ವಿಕೆಟ್‌ಗಳನ್ನು ಗಳಿಸಿದ್ದಾರೆ. ನಿವೃತ್ತಿ ಹೊಂದಿದ ನಂತರ ಉತ್ತರ ಪ್ರದೇಶದ ಜ್ಯೂನಿಯರ್ ಕೋಚ್ ಆಗಿ ಕಾರ್ಯನಿರ್ವಹಿಸಿದರು.
ತಲ್ವಾರ್‌ಗೆ ಗೌರವ: ರೋಹಿತ್ ತಲ್ವಾರ್‌ರ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಅಂಗವಾಗಿ ಇಂದಿನಿಂದ ಇಂಧೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ತಂಡದ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಆಡುವ ಮೂಲಕ ಗೌರವ ಸಲ್ಲಿಸಿದರು.