ಕ್ರಿಕೆಟಿಗರು ಪತ್ನಿಯನ್ನು ಕರೆದುಕೊಂಡು ಬರಲಿ, ಗರ್ಲ್‌ಫ್ರೆಂಡ್ ಬೇಡ: ಬಿಸಿಸಿಐ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟಿಗರು ಆಸ್ಟ್ರೇಲಿಯಾದಲ್ಲಿ ತಮ್ಮ ಪತ್ನಿಯೊಂದಿಗೆ ಇರಬಹುದು...
ವಿರಾಟ್ ಮತ್ತು ಅನುಷ್ಕಾ_ಧೋನಿ ಮತ್ತು ಸಾಕ್ಷಿ
ವಿರಾಟ್ ಮತ್ತು ಅನುಷ್ಕಾ_ಧೋನಿ ಮತ್ತು ಸಾಕ್ಷಿ

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟಿಗರು ಆಸ್ಟ್ರೇಲಿಯಾದಲ್ಲಿ ತಮ್ಮ ಪತ್ನಿಯೊಂದಿಗೆ  ಇರಬಹುದು ಎಂದು ಬಿಸಿಸಿಐ ಹೇಳಿದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸತತ ಎರಡನೇ ಬಾರಿ ಟೀಂ ಇಂಡಿಯಾ ಸೋಲು ಅನುಭವಿಸಿದ್ದು, ಇತರ ದೇಶಗಳಿಗೆ ಪ್ರವಾಸ ಕೈಗೊಳ್ಳುವಾಗ ಕ್ರಿಕೆಟಿಗರು ತಮ್ಮ ಪತ್ನಿಯನ್ನು ಜತೆಯಲ್ಲಿ ಕರೆದೊಯ್ದರೆ ಅದರಲ್ಲಿ ತಪ್ಪೇನಿಲ್ಲ ಎಂದು ಬಿಸಿಸಿಐ ಹೇಳಿದೆ.

ಈ ಹಿಂದೆ ವಿದೇಶಿ ಪ್ರವಾಸದಲ್ಲಿರುವಾಗ ಕ್ರಿಕೆಟಿಗರು ಅವರ ಗರ್ಲ್‌ಫ್ರೆಂಡ್‌ನ್ನು ಜತೆಗೆ ಕರೆದೊಯ್ಯುವುದನ್ನು ನಿಷೇಧಿಸಿತ್ತು. ಮಾತ್ರವಲ್ಲದೆ ಜತೆಗೆ ಪತ್ನಿಯರು ತಂಗುವಂತಿಲ್ಲ ಎಂದು ಹೇಳಿತ್ತು.

ಆದರೆ ಬ್ರಿಸ್ಬೇನ್ ಟೆಸ್ಟ್ ನಲ್ಲಿ ಭಾರತ ಸೋಲನುಭವಿಸಿದ ನಂತರ ಬಿಸಿಸಿಐ ಮದುವೆಯಾದ ಕ್ರಿಕೆಟಿಗರು ಮಾತ್ರ ತಮ್ಮ ಪತ್ನಿಯನ್ನು ಜತೆಗೆ ಕರೆದೊಯ್ಯಬಹುದು ಎಂದು ಹೇಳಿದೆ.

ಅದೇ ವೇಳೆ ಯಾವುದೇ ಕಾರಣಕ್ಕೂ ಕ್ರಿಕೆಟಿಗರು ತಮ್ಮ ಪ್ರೇಯಸಿಯರನ್ನು ಜತೆಗೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ಖಡಾಖಂಡಿತವಾಗಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com