ಬ್ಯಾಟಿಂಗ್ಗಿಂತ ಪ್ರೇಮ ಪತ್ರ ಬರೆಯುವುದು ತ್ರಾಸು
ಚೆನ್ನೈ: ಮೊಬೈಲ್ಗಳಿಲ್ಲದ ಕಾಲದಲ್ಲಿ ತನ್ನ ಪತ್ನಿ ಅಂಜಲಿಗೆ ಪತ್ರ ಬರೆದ ನೆನಪನ್ನು ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೆಲಕು ಹಾಕಿದ್ದಾರೆ.
ಕೈಬರಹದ ಬಗೆಗಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿನ್, ಚೆಂಡನ್ನು ನಾನು ಹೊಡೆಯುವುದು ಚಿಕ್ಕ ವಯಸ್ಸಿನಿಂದಲೂ ಕರಗತವಾಗಿತ್ತು. ಆದರೆ ಅಂಜಲಿಗೆ ಪತ್ರವನ್ನು ಬರೆದಾಗ ನಾನು ಸರಿಯಾಗಿ ಬರೆದಿದ್ದೇನೆ ಎಂದು ಪದೇ ಪದೇ ಪರಿಶೀಲಿಸುತ್ತಿದ್ದೆ ಎಂದು ತಿಳಿಸಿದ್ದಾರೆ.
ಆದಿನಗಳಲ್ಲಿ ಮೊಬೈಲ್ಗಳಿರಲಿಲ್ಲ. ಬೇರೆಯವರನ್ನು ಸಂಪರ್ಕಿಸಲು ಲ್ಯಾಂಡ್ಲೈನ್ ಅಥವಾ ಪತ್ರವನ್ನು ಬರೆಯಬೇಕಿತ್ತು. ಹಾಗಾಗಿ ನಾನು ಪತ್ರ ಬರೆಯಲು ಆರಂಭಿಸಿದೆ. ನನ್ನ ಪೋಷಕರಿಗೆ ಮೊದಲು ಪತ್ರ ಬರೆಯಲಾರಂಭಿಸಿದೆ ನಂತರ ಪತ್ನಿ ಅಂಜಲಿಗೆ ಪತ್ರ ಬರೆದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಸಚಿನ್ ತೆಡೂಲ್ಕರ್ ಅವರು ತನ್ನ ತಂದೆ ತಾಯಿ ಜತೆ ಕೂತು ಪೆನ್ ಹಿಡಿದು ಬರೆಯುವುದನ್ನು ಕಲೆತ ಸಂಗತಿಯನ್ನು ನೆನೆದರು. ಕುಟುಂಬದಿಂದ ದೂರ ಉಳಿದಾಗ ನಾನು ತಂದೆ ತಾಯಿ ಹಾಗೂ ಪತ್ನಿ ಅಂಜಲಿಗೆ ಪತ್ರ ಬರೆಯಲು ಆರಂಭಿಸಿದೆ. ಆದರೆ ನನ್ನ ಪತ್ನಿಯ ಕೈ ಬರಹ ಅದ್ಭುತವಾಗಿತ್ತು. ಅಕೆಯ ಕೈ ಬರಹವನ್ನು ಯಾರೇ ನೋಡಿದರೂ ಮೆಚ್ಚಿಕೊಳ್ಳುವಂತಿತ್ತು.
ಇನ್ನು ಭಾರತ ತಂಡದ ಸಹ ಆಟಗಾರರಲ್ಲಿ ಅತ್ಯುತ್ತಮ ಕೈಬರಹ ಹೊಂದಿದವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿನ್, ಲೆಗ್ ಸ್ಪಿನ್ನರ್ ಅನಿಲ್ ಕುಬ್ಳೆ ಕೈಬರಹ ಸ್ಪಷ್ಟವಾಗಿತ್ತು, ಇನ್ನು ಸುಬ್ರೊತೊ ಬ್ಯಾನರ್ಜಿ ಕೌಶಲ್ಯಯುತವಾಗಿ ಬರೆಯುತ್ತಿದ್ದರು ಎಂದರು ಸಚಿನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

