ಕ್ರೀಡೆ

ಫೈನಲ್‌ಗೆ ಜೋಕೊವಿಚ್

Published On :

ಲಂಡನ್: ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ತನ್ನ ಹೋರಾಟ ನಿಲ್ಲಿಸದೇ ಉತ್ತಮ ಪ್ರದರ್ಶನ ನೀಡಿದ ಸರ್ಬಿಯಾದ ನೊವಾಕ್ ಜೋಕೊವಿಚ್ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಜೋಕೊವಿಚ್ ತಮ್ಮ ಎದುರಾಳಿ ಬಲ್ಗೇರಿಯಾದ ಗ್ರಿಗೋರ್ ಡಿಮಿತ್ರೊವ್ ವಿರುದ್ಧ 6-4, 3-6, 7-6(7-2), 7-6 (9-7) ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.  ಆರಂಭಿಕ ಎರಡು ಸೆಟ್‌ಗಳನ್ನು ತಲಾ ಒಂದರಂತೆ ಉಭಯ ಆಟಗಾರರು ಸುಲಭವಾಗಿ ತಮ್ಮದಾಗಿಸಿಕೊಂಡರು. ಆದರೆ ನಂತರದ ಎರಡು ಸೆಟ್‌ಗಳಲ್ಲಿ ಈ ಇಬ್ಬರು ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾದರು. ಈ ಎರಡೂ ಸೆಟ್‌ಗಳಲ್ಲೂ ಡಿಮಿತ್ರೊವ್ ಜೋಕೊವಿಚ್‌ಗೆ ಉತ್ತಮ ಪೈಪೋಟಿ ನೀಡಿದರೂ, ಜೋಕೊ ತಮ್ಮ ನಿಯಂತ್ರಣ ಕಳೆದುಕೊಳ್ಳಲಿಲ್ಲ. ಹಾಗಾಗಿ ಪಂದ್ಯದಲ್ಲಿ ಜೋಕೊವಿಚ್ ಮೇಲುಗೈ ಸಾಧಿಸಿದರು.
ಉಪಾಂತ್ಯದಲ್ಲಿ ಹೊರ ಬಿದ್ದ ಪೇಸ್ ಜೋಡಿ: ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್ ಹಾಗೂ ಜತೆಗಾರ ಚೆಕ್ ಗಣರಾಜ್ಯದ ರಾಡೆಕ್ ಸ್ಟಿಪಾನೆಕ್ ಜೋಡಿಯು ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪೇಸ್ ಜೋಡಿಯು 6-7(5-7), 3-6, 4-6 ಸೆಟ್‌ಗಳ ಅಂತರದಲ್ಲಿ ಕೆನಡಾದ ಪೊಸ್ಪಿಸಿಲ್ ಹಾಗೂ ಅಮೆರಿಕಾದ ಜಾಕ್ ಸೊಕ್ ಜೋಡಿ ವಿರುದ್ಧ ಪರಾಭವಗೊಂಡಿದೆ.   ಆರಂಭದಲ್ಲಿ ಎದುರಾಳಿ ಜೋಡಿಗೆ ಉತ್ತಮ ಹೋರಾಟ ನೀಡಿದ ಪೇಸ್ ಜೋಡಿ ನಂತರದ ಸೆಟ್‌ಗಳಲ್ಲಿ ನಿಯಂತ್ರಣ ಸಾಧಿಸಲು ವಿಫಲವಾಯಿತು.
ಆರಂಭದಲ್ಲಿ 6-7(5-7) ಅಂತರದ ಹಿನ್ನಡೆ ಅನುಭವಿಸಿದ ಪೇಸ್ ಜೋಡಿ ನಂತರದ ಸೆಟ್‌ಗಳಲ್ಲಿ ಕ್ರಮವಾಗಿ 3-6, 4-6 ಅಂತರದಿಂದ ಸೋಲೋಪ್ಪಿಕೊಂಡಿತು.
ಇದಕ್ಕೂ ಮುನ್ನ ಗುರುವಾರ ತಡರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೇಸ್ ಜೋಡಿಯು, ಡೇನಿಯಲ್ ನೆಸ್ಟರ್ ಹಾಗೂ ಜಿಮೊಂಜಿಕ್ ಜೋಡಿ ವಿರುದ್ಧ 3-6, 7-6(7-5), 6-3, 6-4 ಸೆಟ್‌ಗಳ ಅಂತರದಲ್ಲಿ ಮಣಿಸಿ ಉಪಾಂತ್ಯಕ್ಕೆ ಪ್ರವೇಶಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.