ಮೊದಲ ದಿನ ಮುರಳಿ ಲೀಲೆ

ನಾಟಿಂಗ್ಹ್ಯಾಮ್: ಇಂಗ್ಲೆಂಡ್ ಪ್ರವಾಸದಲ್ಲಿ ತನ್ನ ಸೋಲಿನ ಕಹಿ ನೆನಪನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿರುವ ಭಾರತಕ್ಕೆ ಆರಂಭಿಕ ಮುರಳಿ ವಿಜಯ್ (ಅಜೇಯ 122) ಆಧಾರವಾಗಿ ನಿಂತಿದ್ದು, ಆತಿಥೇಯರ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗಿದ್ದಾರೆ.
ಬುಧವಾರ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಂತರ ದಿನದಾಟ ಮುಕ್ತಾಯದ ವೇಳೆಗೆ 4 ವಿಕೆಟ್ ನಷ್ಟಕ್ಕೆ 259 ರನ್ ಕಲೆ ಹಾಕುವ ಮೂಲಕ ಬೃಹತ್ ಇನಿಂಗ್ಸ್ ಕಟ್ಟುವತ್ತ ಹೆಜ್ಜೆ ಹಾಕಿದೆ. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ (12) ಬೇಗನೆ ಪೆವಿಲಿಯನ್ ಸೇರಿಕೊಂಡು, ತಮ್ಮ ಮೇಲಿಟ್ಟಿದ ನಿರೀಕ್ಷೆಗಳನ್ನು ಹುಸಿಗೊಳಿಸಿದರು. ಆದರೆ ಮತ್ತೊಬ್ಬ ಆರಂಭಿಕ ಮುರಳಿ ವಿಜಯ್, ಚೇತೇಶ್ವರ ಪೂಜಾರಜತೆಗೂಡಿ ತಂಡಕ್ಕೆ 73 ರನ್ ಜತೆಯಾಟ ನೀಡಿದರು. ಈ ವೇಳೆ 38 ರನ್ ಗಳಿಸಿದ್ದ ಪೂಜಾರ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೊಹ್ಲಿ ಕೇವಲ 1 ರನ್ ಸಂಪಾದನೆಗೆ ತಮ್ಮ ಆಟಕ್ಕೆ ತೆರೆ ಎಳೆದಿದ್ದು, ಭಾರತಕ್ಕೆ ಆಘಾತ ನೀಡಿತು.
ನಂತರ ರಹಾನೆ ಜತೆಗೂಡಿದ ಮುರಳಿ ವಿಜಯ್ 4ನೇ ವಿಕೆಟ್ಗೆ 71 ರನ್ ದಾಖಲಿಸಿದರು. ರಹಾನೆ 32 ರನ್ಗಳಿಸಿ ಮಹತ್ವದ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ವಿಜಯ್ ಜತೆಗೂಡಿದ ನಾಯಕ ಮಹೇಂದ್ರ ಸಿಂಗ್ ಧೋನಿ ಮುರಿಯದ 5ನೇ ವಿಕೆಟ್ಗೆ 81 ರನ್ ದಾಖಲಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.
ವಿಜಯ್ 17 ಬೌಂಡರಿಗಳೊಂದಿಗೆ ಅಜೇಯ 92 ರನ್ ದಾಖಲಿಸಿದರೆ, ನಾಯಕ ಧೋನಿ 5 ಬೌಂಡರಿಗಳೊಂದಿಗೆ ಅಜೇಯ 50 ರನ್ ದಾಖಲಿಸಿದರು. ಇಂಗ್ಲೆಂಡ್ ಪರ ಆ್ಯಂಡರ್ಸನ್ 2 ಹಾಗೂ ಬ್ರಾಡ್ 1 ವಿಕೆಟ್ ಕಬಳಿಸಿದರು.
ಬಿನ್ನಿ ಪದಾರ್ಪಣೆ: ಈ ಪಂದ್ಯದಲ್ಲಿ ಭಾರತ ತಂಡದ ಪರ ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಈ ಮೂಲಕ ಬಿನ್ನಿ 281ನೇ ಅಂತಾರಾಷ್ಟ್ರೀಯ ಆಟಗಾರನಾಗಿದ್ದಾರೆ. ಅಲ್ಲದೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಆಡಿದ ಅಪ್ಪ ಮಗನ ಪಟ್ಟಿಯಲ್ಲಿ ರೋಜರ್ ಬಿನ್ನಿ ಹಾಗೂ ಸ್ಟುವರ್ಟ್ ಬಿನ್ನಿ, 10ನೇ ಜೋಡಿಯಾಗಿ ದ್ದಾರೆ. ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ಧೋನಿ, ಬಿನ್ನಿಗೆ ಭಾರತ ತಂಡದ ಕ್ಯಾಪ್ ನೀಡಿ ತಂಡದಲ್ಲಿ ಸ್ಥಾನ ನೀಡಿದರು.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 4 ವಿಕೆಟ್ಗೆ 259 (90 ಓವರ್) ಮುರಳಿ ವಿಜಯ್ ಬ್ಯಾಟಿಂಗ್ 122, ಶಿಖರ್ ಧವನ್ ಸಿ ಪ್ರಯರ್ ಬಿ ಆ್ಯಂಡರ್ಸನ್ 12, ಚೇತೇಶ್ವರ ಪೂಜಾರ ಸಿ ಬೆಲ್ ಬಿ ಆ್ಯಂಡರ್ಸನ್ 38, ವಿರಾಟ್ ಕೊಹ್ಲಿ ಸಿ ಬೆಲ್ ಬಿ ಬ್ರಾಡ್ 1, ಅಜಿಂಕ್ಯ ರಹಾನೆ ಸಿ ಕುಕ್ ಬಿ ಪ್ಲಂಕೆಟ್ 32, ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ 50.
ಇತರೆ: (ಲೆಗ್ ಬೈ 4) ಒಟ್ಟು 4
ವಿಕೆಟ್ ಪತನ: 1-33, 2-106, 3-107, 4-178
ಬೌಲಿಂಗ್ ವಿವರ: ಆ್ಯಂಡರ್ಸನ್ 21-6-70-2, ಬ್ರಾಡ್ 19-8-26-1, ಸ್ಟೋಕ್ಸ್ 19-4-47-0, ಪ್ಲಂಕೆಟ್ 21-4-56-1, ಮೋಯಿನ್ 9-0-50-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


