ಇಂಗ್ಲೆಂಡ್ ತಂಡಕ್ಕೆ ಭುವಿ- ಶಮಿ ಕಾಡಾಟ

ನಾಟಿಂಗ್‌ಹ್ಯಾಮ್: ಉತ್ತಮ ಲಯದಲ್ಲಿ ಸಾಗುತ್ತಿದ್ದ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ದಿಢೀರ್ ಕುಸಿತ ಕಂಡರೂ, ಅಂತಿಮ ವಿಕೆಟ್‌ಗೆ ಭುವನೇಶ್ವರ್ ಕುಮಾರ್ (ಅಜೇಯ 46) ಹಾಗೂ ಮೊಹಮದ್ ಶಮಿ (ಅಜೇಯ 39) ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೌರವ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಪಂದ್ಯದ ಎರಡನೇ ದಿನವಾದ ಗುರುವಾರ ಆಟ ಮುಂದುವರಿಸಿದ ಭಾರತ, ಚಹಾ ವಿರಾಮಕ್ಕೆ 153 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 453 ರನ್ ಕಲೆ ಹಾಕಿದೆ.
ಮೊದಲ ದಿನದಾಟದಲ್ಲಿ ಅಜೇಯರಾಗುಳಿದಿದ್ದ ಮುರಳಿ ವಿಜಯ್ ಹಾಗೂ ಮಹೇಂದ್ರ ಸಿಂಗ್ ಧೋನಿ, ದಿನದಾಟ ಮುಂದುವಿರಿಸದರು. ಈ ಜೋಡಿ 5ನೇ ವಿಕೆಟ್‌ಗೆ 126 ರನ್‌ಗಳ ಜತೆಯಾಟ ನೀಡಿ ತಂಡಕ್ಕೆ ಆಧಾರವಾಯಿತು. ಈ ವೇಳೆ 146 ರನ್ ದಾಖಲಿದ್ದ ವಿಜಯ್, ಆ್ಯಂಡರ್ಸನ್ ಎಲ್‌ಬಿ ಬಲೆಗೆ ಬಿದ್ದರು.
ದಿಢೀರ್ ಕುಸಿತ: ಊಟದ ವಿರಾಮನ ನಂತರ ಆಟ ಮುಂದುವರಿಸಿದ ಭಾರತ ತಂಡ ಕೇವಲ ಮೂರು ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಒಂದೇ ಓವರ್‌ನಲ್ಲಿ ಜಡೇಜಾ (25) ಕ್ಯಾಚ್ ನೀಡಿದರೆ, ಧೋನಿ (82) ರನೌಟ್‌ಗೆ ಬಲಿಯಾದರು. ನಂತರ ಬಂದ ಸ್ಟುವರ್ಟ್ ಬಿನ್ನಿ ಹಾಗೂ ಇಶಾಂತ್ ಶರ್ಮಾ 1 ರನ್ ಸಂಪಾದನೆಗೆ ಮರಳಿದರು.ಜೀವ ತುಂಬಿದ ಜೋಡಿ: ಭಾರತ ತಂಡ 346 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಅಂತಿಮ ವಿಕೆಟ್‌ಗೆ ಜತೆಯಾದ ಭುವನೇಶ್ವರ್ ಕುಮಾರ್ ಹಾಗೂ ಮೊಹಮದ್ ಶಮಿ ಸೂಕ್ಷ್ಮವಾಗಿ ಬ್ಯಾಟಿಂಗ್ ನಡೆಸಿ ಬರೋಬ್ಬರಿ 87 ರನ್ ಜತೆಯಾಟ ನೀಡುವ ಮೂಲಕ ಭಾರತ ತಂಡದ ಮೊತ್ತವನ್ನು 400ರ ಗಡಿ ದಾಟುವಂತೆ ಮಾಡಿದರು.
ಭುವನೇಶ್ವರ ಕುಮಾರ್ ಅವರಿಗೆ ಇದು ವೈಯಕ್ತಿಕ ಗರೀಷ್ಟ ಮೊತ್ತವಾಗಿದೆ.
ಸ್ಕೋರ್ ವಿವರ (2ನೇ ದಿನ ಚಹಾ ವಿರಾಮದ ವೇಳೆಗೆ)
ಭಾರತ ಮೊದಲ ಇನಿಂಗ್ಸ್ 433/9
ಮುರಳಿ ವಿಜಯ್ ಎಲ್‌ಬಿಡಬ್ಲ್ಯೂ ಬಿ ಆ್ಯಂಡರ್ಸನ್ 146, ಮಹೇಂದ್ರ ಸಿಂಗ್ ಧೋನಿ ರನೌಟ್ (ಆ್ಯಂಡರ್ಸನ್) 82, ರವೀಂದ್ರ ಜಡೆಜಾ ಸಿ ಪ್ರಯರ್ ಬಿ ಸ್ಟೋಕ್ಸ್ 25, ಸ್ಟುವರ್ಟ್ ಬಿನ್ನಿ ಸಿ ರೂಟ್ ಬಿ ಸ್ಟೋಕ್ಸ್ 1, ಭುವನೇಶ್ವರ್ ಕುಮಾರ್ ಬ್ಯಾಟಿಂಗ್ 46, ಇಶಾಂತ್ ಶರ್ಮಾ ಬಿ ಬ್ರಾಡ್ 1, ಮೊಹಮದ್ ಶಮಿ ಬ್ಯಾಟಿಂಗ್ 39
ಇತರೆ: (ಬೈ 1, ಲೆಗ್‌ಬೈ 8. ವೈಡ್ 1) ಒಟ್ಟು 10
ಬೌಲಿಂಗ್ ವಿವರ:
ಜೇಮ್ಸ್ ಆ್ಯಂಡರ್ಸನ್ 35-10-109-3, ಸ್ಟುವರ್ಟ್ ಬ್ರಾಡ್ 32-13-52-2, ಬೆನ್ ಸ್ಟೋಕ್ಸ್ 32-6-79-2, ಲಿಯಾಮ್ ಪ್ಲಂಕೆಟ್ 34-8-82-1, ಮೋಯಿನ್ ಅಲಿ 17-0-93-0, ಜೋ ರೂಟ್ 1-0-6-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


