ಆಫ್ರಿಕಾ ವಶಕ್ಕೆ ಸರಣಿ
ಹ್ಯಾಂಬಂಟೋಟಾ: ಆರಂಭಿಕ ಖಿಂಟಾನ್ ಡಿ ಕಾಕ್ (128) ಹಾಗೂ ನಾಯಕ ಎಬಿ ಡಿವಿಲಿಯರ್ಸ್ (108) ಅವರ ಅಮೋಘ ಶತಕದ ನೆರವಿನಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನು ಗೆದ್ದುಕೊಂಡಿದೆ.ಶನಿವಾರ ಇಲ್ಲಿನ ಮಹಿಂದ ರಾಜಪಕ್ಷೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 82 ರನ್ಗಳ ಅರ್ಹ ಗೆಲವು ದಾಖಲಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯನು 2-1 ಗೋಲುಗಳ ಅಂತರದಲ್ಲಿ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ದಕ್ಷಿಣ ಆಫ್ರಿಕಾ ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 339 ರನ್ ದಾಖಲಿಸಿತು. ಈ ಬೃಹತ್ ಮೊತ್ತವನು ಬೆನಟ್ಟಿದ ಶ್ರೀಲಂಕಾ ತಂಡ 44.3 ಓವರ್ಗಳಲ್ಲಿ 257 ರನ್ಗಳಿಗೆ ಆಲೌಟ್ ಆಯಿತು.
ಕಾಡಿದ ಕಾಕ್: ಶ್ರೀಲಂಕಾ ಬೌಲರ್ಗಳನು ಕಾಡಿದ ಖಿಂಟಾನ್ ಡಿ ಕಾಕ್, 127 ಎಸೆತಗಳನು ಎದುರಿಸಿ 12 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 128 ರನ್ ದಾಖಲಿಸಿದರು. ಈ ಮೂಲಕ ಏಕದಿನದಲ್ಲಿ ವೇಗವಾಗಿ 5ನೇ ಶತಕ ದಾಖಲಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
ಆಮ್ಲಾ (48) ಜತೆಗೆ ಆರಂಭಿಕ ವಿಕೆಟ್ಗೆ 118 ರನ್ ಜತೆಯಾಟ ನೀಡಿದ ಕಾಕ್, ನಂತರ 3ನೇ ವಿಕೆಟ್ಗೆ ಎಬಿ ಡಿವಿಲಿಯರ್ಸ್ ಜತೆಗೆ 116 ರನ್ಗಳ ಮತ್ತೊಂದು ಶತಕದ ಜತೆಯಾಟ ನೀಡಿ ತಂಡ ಬೃಹತ್ ಮೊತ್ತದತ್ತ ಸಾಗುವಂತೆ ಮಾಡಿದರು. ಇನು ಡಿವಿಲಿಯರ್ಸ್ 71 ಎಸೆತಗಳಲ್ಲಿ 11 ಬೌಂಡರಿ 4 ಸಿಕ್ಸರ್ ಸೇರಿದಂತೆ 108 ರನ್ ದಾಖಲಿಸಿದರು.
ಈ ಮೊತ್ತವನು ಬೆನಟ್ಟಿದ ಲಂಕಾ ಪರ ಆ್ಯಂಜಲೊ ಮ್ಯಾಥ್ಯೂಸ್(58) ಅರ್ಧಶತಕದ ಹೊರತಾಗಿ ಯಾವುದೇ ಆಟಗಾರ ಉತ್ತಮ ಪ್ರತಿರೋಧ ತೋರಲಿಲ್ಲ. ಹಾಗಾಗಿ ಸೋಲನುಭವಿಸಬೇಕಾಯಿತು.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 339ಕ್ಕೆ5
ಖಿಂಟಾನ್ ಡಿ ಕಾಕ್ 128, ಡಿವಿಲಿಯರ್ಸ್ 108, ಹೆರಾಥ್ 48ಕ್ಕೆ2, ಮೆಂಡಿಸ್ 48ಕ್ಕೆ2
ಶ್ರೀಲಂಕಾ 50 ಓವರ್ಗಳಲ್ಲಿ 257
ಮ್ಯಾಥ್ಯೂಸ್ 58, ಕುಶಾಲ ಪೆರೇರಾ 37, ಮೆಕ್ಲಾರೆನ್ 37ಕ್ಕೆ3, ಡುಮಿನಿ 43ಕ್ಕೆ2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

