ಕ್ರೀಡೆ

ಭಾರತದ ಆಸೆಗೆ ರೂಟ್-ಜೇಮ್ಸ್ ಭಂಗ

ಭಾರತದ ಆಸೆಗೆ ರೂಟ್-ಜೇಮ್ಸ್ ಭಂಗ
Published On :

ನ್ಯಾಟಿಂಗ್‌ಹ್ಯಾಮ್: ಟೆಸ್ಟ್ ಕ್ರಿಕೆಟ್ ಇತಿಹಾಸದ ಪಂದ್ಯವೊಂದರಲ್ಲಿ ಇದೇ ಮೊದಲ ಬಾರಿಗೆ ಎರಡು ಕೊನೆಯ ವಿಕೆಟ್ ಜೋಡಿಗಳು ಶತಕ ದಾಖಲಿಸಿವೆ. ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಭುವನೇಶ್ವರ ಕುಮಾರ್ ಮತ್ತು ಶಮಿ ಅಹ್ಮದ್ ಶತಕದ ಜತೆಯಾಟ ಪ್ರದರ್ಶಿಸಿದರೆ, ಇಂಗ್ಲೆಂಡ್ ಪರ ಜೋ ರೂಟ್ ಮತ್ತು ಜೇಮ್ಸ್ ಆ್ಯಂಡರ್ಸನ್ ಸಹ ಶತಕದ ಜತೆಯಾಟ ಪೂರೈಸಿದರು.
ಮೊದಲ ಟೆಸ್ಟ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್ ಬಾಕಿ ಉಳಿಸಿಕೊಂಡು 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್, ಭೋಜನ ವಿರಾಮದ ನಂತರ 5ನೇ ಓವರ್‌ನಲ್ಲಿ ತನ ಕೊನೆಯ ವಿಕೆಟ್ ಕಳೆದುಕೊಳ್ಳುವ ಮೂಲಕ ಒಟ್ಟು 496 ರನ್ ಕಲೆ ಹಾಕುವುದರೊಂದಿಗೆ 39 ರನ್‌ಗಳ ಮುನಡೆ ಸಾಧಿಸಿತು. ದಿನದಾಟ ಆರಂಭಿಸಿದ್ದಾಗ ಇಂಗ್ಲೆಂಡ್ ಇನೂ 105 ರನ್‌ಗಳ ಹಿನಡೆ ಅನುಭವಿಸಿತ್ತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಅರ್ಧ ಶತಕ ದಾಖಲಿಸಿದ ಆ್ಯಂಡರ್ಸನ್ (81), ಭುವನೇಶ್ವರ ಕುಮಾರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸುವ ಮುನ ಜೋ ರೂಟ್ ಅವರೊಂದಿಗೆ ಮೂರಂಕಿ ತಲುಪಿದರು. ಇದು ಭುವನೇಶ್ವರ ಅವರಿಗೆ 5ನೇ ವಿಕೆಟ್ ಆಗಿತ್ತು. ಆದರೆ, ಅವರು ವಿಕೆಟ್ ಪಡೆದಿದ್ದು, ತುಂಬಾ ವಿಳಂಬವಾಗಿತ್ತು. ಶುಕ್ರವಾರ ಸಂಜೆ ಅವರು ಇಂಗ್ಲೆಂಡ್‌ನ 7ನೇ ಮತ್ತು 8ನೇ ವಿಕೆಟ್ ಪಡೆದಿದ್ದರು. ಆದರೆ, ಜೋ ರೂಟ್ (154) ಮಾತ್ರ ಅಜೇಯರಾಗಿ ಉಳಿದರು.
ಭುವನೇಶ್ವರ ಬೌಲಿಂಗ್‌ನಲ್ಲಿ ಜೋ ರೂಟ್ ಅವರು ಒಂದು ರನ್ ಗಳಿಸುವ ಮೂಲಕ ದಿನ ಆಟ ಆರಂಭಿಸಿದ್ದು, ಭೋಜನವಿರಾಮದವರೆಗೂ ಭಾರತದ ಬೌಲರ್‌ಗಳನು ರೂಟ್ ಮತ್ತು ಆ್ಯಂಡರ್ಸನ್ ಕಾಡಿದರು. ರೂಟ್ 90 ರನ್ ಗಳಿಸಿದ್ದಾಗ ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಎರಡನೇ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿದ್ದರು. ಆದರೆ, ಜೀವದಾನ ಪಡೆಯುವಲ್ಲಿ ಯಶಸ್ವಿಯಾದರು. ನಂತರದ ಓವರ್‌ನಲ್ಲೇ ಮೊಹ್ಮದ್ ಶಮಿ ಬೌಲಿಂಗ್‌ನಲ್ಲಿ ಎಕ್ಸ್‌ಟ್ರಾ ಕವರ್ ಒಂದು ಮತ್ತು ಕವರ್ ಪಾಯಿಂಟ್‌ನಲ್ಲಿ ಒಂದು ಸೇರಿದಂತೆ ಎರಡು ಬೌಂಡರಿ ದಾಖಲಿಸುವ ಮೂಲಕ ಶತಕ ಪೂರೈಸಿದರು.
ಹೀಗಾಗಿ ಇಂಗ್ಲೆಂಡ್‌ನ 10ನೇ ವಿಕೆಟ್ ಜತೆಯಾಟವನು ಮುರಿಯಲು ಭಾರತ ತಿಣುಕಾಡಬೇಕಾಯಿತು. ಇಂಗ್ಲೆಂಡ್ ಮೊತ್ತ 378 ಆದಾಗ 92 ರನ್ ಗಳಿಸಿದ್ದ ರೂಟ್ ವಿಕೆಟ್ ಪಡೆಯಲು ಸೂಕ್ತ ಸಮಯವಾಗಿತ್ತು. ಆದರೆ, ನಾನ್ ಸ್ಟ್ರೈಕ್ ಎಂಡ್‌ನಲ್ಲಿ ಮೊಹ್ಮದ್ ಶಮಿ ಎಸೆದ ಎಸೆತ ಸ್ವಲ್ಪದರಲ್ಲೇ ಸ್ಟಂಪ್‌ನಿಂದ ದೂರ ಬಿದ್ದಿತು. ಆಗ ರೂಟ್ ಮತ್ತೊಮ್ಮೆ ಜೀವದಾನ ಪಡೆದರು.

ರೂಟ್-ಜೇಮ್ಸ್ ವಿಶ್ವದಾಖಲೆ
-ವಿಶ್ವ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10ನೇ ವಿಕೆಟ್‌ಗೆ ಅತಿ ಹೆಚ್ಚು ರನ್ ಜತೆಯಾಟ ನೀಡಿದ ಜೋ ರೂಟ್ ಹಾಗೂ ಜೇಮ್ಸ್ ಆ್ಯಂಡರ್‌ಸನ್ (198).
-ಈ ಹಿಂದೆ 2013ರಲ್ಲಿ ಇದೇ ಅಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾದ ಫಿಲ್ ಹ್ಯೂಸ್ ಹಾಗೂ ಆ್ಯಶ್ಟನ್ ಆ್ಯಗರ್ 10ನೇ ವಿಕೆಟ್‌ಗೆ 163 ರನ್ ದಾಖಲಿಸಿದ್ದರು.
-ಟೆಸ್ಟ್ ಇಂತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯವೊಂದರ ಎರಡು ಇನಿಂಗ್ಸ್‌ನಲ್ಲಿ 10ನೇ ವಿಕೆಟ್‌ಗೆ ಶತಕದ ಜತೆಯಾಟ ದಾಖಲಾಗಿದೆ. (ಭಾರತದ ಪರ ಶಮಿ ಹಾಗೂ ಭುವಿ 111 ಹಾಗೂ ರೂಟ್ ಹಾಗೂ ಜೇಮ್ಸ್ 198)
- ಇಂಗ್ಲೆಂಡ್ ಪರ 11ನೇ ಕ್ರಮಾಂಕದಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದ ಆ್ಯಂಡರ್‌ಸನ್.

ಸ್ಕೋರ್ ವಿವರ: ಭಾರತ ಮೊದಲ ಇನಿಂಗ್ಸ್ 457
ಇಂಗ್ಲೆಂಡ್ ಮೊದಲ ಇನಿಂಗ್ಸ್ 496    (ಶುಕ್ರವಾರದಿಂದ ಮುಂದುವರಿದಿದೆ)
ಜೋ ರೂಟ್ ಅಜೇಯ 154
ಜೇಮ್ಸ್ ಆ್ಯಂಡರ್ಸನ್ 81, ಗ್ಯಾರಿ ಬ್ಯಾಲನ್ಸ್     71, ರಾಬ್ಸನ್ 59.
ಬೌಲಿಂಗ್: ಭುವನೇಶ್ವರ ಕುಮಾರ್ 30.5-8-82-5,ಮೊಹ್ಮದ್ ಶಮಿ 29-3-128-2, ಇಶಾಂತ್ ಶರ್ಮಾ 38-3-150-3, ರವೀಂದ್ರ ಜಡೇಜಾ 35-5-80-0, ಸ್ಟುವರ್ಟ್ ಬಿನಿ 10-0-37-0, ಮುರಳಿ ವಿಜಯ್ 2-0-8-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.