ಟೆಸ್ಟ್ ನೀರಸ ಡ್ರಾ

ನಾಟಿಂಗ್‌ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.
ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಪಂದ್ಯದಲ್ಲಿ ಭಾನುವಾರ ಐದನೇ ಹಾಗೂ ಅಂತಿಮ ದಿನದಾಟಕ್ಕೆ ತೆರೆಬಿದ್ದಾಗ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 390 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆದರೆ ಇನೂಢಿ 15 ಮ್ಯಾಂಡೇಟರಿ ಓವರುಗಳಿದ್ದರೂ ಉಭಯ ನಾಯಕರು ಡ್ರಾಗೆ ಸಮ್ಮತಿ ಸೂಚಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ಭಾರತ 39 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಉಪಾಂತ್ಯ ದಿನದ ಮೊತ್ತ 3 ವಿಕೆಟ್‌ಗೆ 167 ರನ್‌ಗಳೊಂದಿಗೆ ಭಾರತ ಇಂದು ಅಂತಿಮ ದಿನದಾಟ ಮುಂದುವರಿಸಿತು. ತಂಡದ ಪರ ಎಂಟನೇ ಕ್ರಮಾಂಕದ ಆಟಗಾರ ಸ್ಟುವರ್ಟ್ ಬಿನ್ನಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದರು. ಎರಡನೇ ಇನಿಂಗ್ಸ್‌ನಲ್ಲೂ ಸಹ ಅರ್ಧಶತಕ ಬಾರಿಸಿದ ಭುವನೇಶ್ವರ ಕುಮಾರ್ ಸತತ ಎರಡನೇ ಅರ್ಧಶತಕದ ಮೂಲಕ ಗಮನ ಸೆಳೆದರು.
ಬಿನ್ನಿ ದಾಖಲೆ: ಕರ್ನಾಟಕ ಮೂಲದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ 61 ವರ್ಷಗಳ ನಂತರ ಭಾರತದ ಪರ ಉಪಖಂಡದ ಹೊರಗೆ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮುನ್ನ 1947ರಲ್ಲಿ ದತ್ತು ಫಾಡ್ಕರ್ ಎಸ್‌ಸಿಜಿ ಮೈದಾನದಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಬಿನ್ನಿ, 114 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 78 ರನ್‌ಗಳಿಸಿದಾಗ ಮೊಯೀನ್ ಅಲಿಗೆ ಎಲ್‌ಬಿ ಬಲೆಗೆ ಬಿದ್ದು ಚೊಚ್ಚಲ ಶಕಕದಿಂದ ವಂಚಿತರಾದರು.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 457
ಇಂಗ್ಲೆಂಡ್ ಮೊದಲ ಇನಿಂಗ್ಸ್ 496
ಭಾರತ ಎರಡನೇ ಇನಿಂಗ್ಸ್ 123 ಓವರುಗಳಲ್ಲಿ 9 ವಿಕೆಟ್‌ಗೆ 391 ಡಿಕ್ಲೇರ್
(ನಿನ್ನೆಯ ಮೊತ್ತ 3ಕ್ಕೆ167ರಿಂದ ಮುಂದುವರಿದಿದೆ)
ಕೊಹ್ಲಿ ಎಲ್‌ಬಿ ಬಿ ಬ್ರಾಡ್ 8, ಅಜಿಂಕ್ಯ ರಹಾನೆ ಸಿ ಪ್ರಯರ್ ಬಿ ಬ್ರಾಡ್ 24, ಧೋನಿ ಬಿ ಪ್ಲಂಕೆಟ್ 11, ಜಡೇಜಾ ಸಿ ಪ್ರಯರ್ ಬಿ ಆ್ಯಂಡರ್‌ಸನ್ 31, ಸ್ಟುವರ್ಟ್ ಬಿನ್ನಿ ಎಲ್‌ಬಿ ಬಿ ಅಲಿ 78, ಭುವನೇಶ್ವರಕುಮಾರ್ ಅಜೇಯ 63, ಇಶಾಂತ್ ಶರ್ಮಾ ಸಿ ಪ್ರಯರ್ ಬಿ ಕುಕ್ 13, ಮೊಹಮ್ಮದ್ ಶಮಿ ಅಜೇಯ 4. ಇತರೆ: (ಬೈ-9, ಲೆಗ್‌ಬೈ-7, ನೋಬಾಲ್-7) 23.
ವಿಕೆಟ್ ಪತನ: 1-49, 2-140, 3-140, 4-168, 5-173, 6-184, 7-249, 8-340, 9-387.
ಬೌಲಿಂಗ್ ವಿವರ: ಆ್ಯಂಡರ್‌ಸನ್ 21-8-47-1, ಬ್ರಾಡ್ 21-7-50-2, ಪ್ಲಂಕೆಟ್ 20-1-85-2, ಮೊಯೀನ್ 28-4-105-3, ಸ್ಟೋಕ್ಸ್ 18-3-60-0, ರೂಟ್ 12-4-22-0, ಕುಕ್ 2-0-6-1, ಬ್ಯಾಲೆನ್ಸ್ 1-1-0-0.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


