ಭಾರತಕ್ಕೆ ಐತಿಹಾಸಿಕ ಜಯ
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಬೆಗಾಲಿಡುತ್ತಿ ಭಾರತ ಬಾಸ್ಕೆಟ್ಬಾಲ್ ತಂಡ ಚೀನಾದಲ್ಲಿ ನಡೆಯುತ್ತಿರುವ 5ನೇ ಎಫ್ಐಬಿಎ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಆತಿಥೇಯರ ವಿರುದ್ಧ ಐತಿಹಾಸಿಕ ಗೆಲವು ದಾಖಲಿಸಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಕೋಚ್ ಸ್ಕಾಟ್ ಫ್ಲೆಮ್ಮಿಂಗ್ ಅವರ ನೇತೃತ್ವದಲ್ಲಿ ಭಾರತ ಆಟಗಾರರು, ವಿಶ್ವದ 12ನೇ ರ್ಯಾಂಕಿಂಗ್ನ ಚೀನಾ ತಂಡವನ್ನು 65-58 (24-11, 9-20, 15-19, 17-8) ಅಂಕಗಳ ಅಂತರದಲ್ಲಿ ಮಣಿಸಿದ್ದಾರೆ.
ಚೀನಾ ಎಲ್ಲರ ಫೇವರಿಟ್ ತಂಡವಾಗಿತ್ತು. ಆದರೆ, ಪಂದ್ಯದ ಅಂತಿಮ ಕ್ಷಣಗಳಲ್ಲಿ ಭಾರತೀಯ ಆಟಗಾರರ ಪ್ರದರ್ಶನ ಅಸಾಧ್ಯವಾಗಿದ್ದ ಗೆಲವನ್ನು ತಮ್ಮದಾಗಿಸಿಕೊಂಡು ಎಲ್ಲರನ್ನು ಅಚ್ಚರಿಗೆ ಒಳಪಡಿಸಿದರು. ಈ ಮೂಲಕ 78 ವರ್ಷಗಳ ಭಾರತೀಯ ಬಾಸ್ಕೆಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಚೀನಾ ವಿರುದ್ಧ ಗೆಲವು ದಾಖಲಿಸಿದೆ.
ಭಾರತ ತಂಡದ ಪರ ಅಮ್ಜೋತ್ ಸಿಂಗ್, ಪ್ರಥಮ್ ಸಿಂಗ್ ತಲಾ 13 ಅಂಕಗಳನ್ನು ಗಳಿಸಿದರು. ನಾಯಕ ವಿಷೇಶ್ ಬ್ರಿಗುವಂಶಿ 12 ಅಂಕಗಳನ್ನು ಗಳಿಸಿ ತಂಡದ ಗೆಲವಿನ ರೂವಾರಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

