ಕ್ರೀಡೆ

ಈಜು: ಉಪಾಂತ್ಯ ಸುತ್ತಿಗೆ ಸಂದೀಪ್ ಅರ್ಹತೆ

Published On :

ಗ್ಲಾಸ್ಗೋ: ಕಾಮನ್‌ವೆಲ್ತ್ ಕ್ರೀಡಾಕೂಟದ 2ನೇ ದಿನದಲ್ಲಿ ಸಂದೀಪ್ ಸೆಜ್ವಲ್ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಕ್ರೀಡಾಕೂಟದಲ್ಲಿ ಈಜಿನಲ್ಲಿ ಉಪಾಂತ್ಯ ಸುತ್ತಿಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಪಟುವಾಗಿದ್ದಾರೆ. 1:02.97 ನಿಮಿಷದಲ್ಲಿ ಗುರಿ ತಲುಪುವ ಮೂಲಕ 12ನೇ ಸ್ಥಾನ ಪಡೆದ ಸೆಜ್ವಲ್ ಅರ್ಹತೆ ಪಡೆದಿದ್ದಾರೆ.
ಆಸ್ಟ್ರೇಲಿಯಾ ವಿಶ್ವದಾಖಲೆ
ಗ್ಲಾಸ್ಗೋ: ಆಸ್ಟ್ರೇಲಿಯಾದ ಮಹಿಳೆಯರ ತಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 4್ಗ100 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಈ ದೂರವನ್ನು ಅವರು 3:30:98 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಈ ಸಾಧನೆ ಮಾಡಿ, ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದಕ್ಕು ಮುನ್ನವೇ ಹೀಟ್ಸ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ಮುರಿಯಲಾಗಿತ್ತು. ಇಂಗ್ಲೆಂಡ್ ಓಟಗಾರ್ತಿಯರು ಬೆಳ್ಳಿ ಹಾಗೂ ಕೆನಡಾ ಪ್ರತಿಭೆಗಳು ಕಂಚಿನ ಪದಕಕ್ಕೆ ಸಮಾಧಾನಗೊಂಡರು.
ಜೋಷ್ನಾಗೆ ನಿರಾಸೆ
ಗ್ಲಾಸ್ಗೋ: ಭಾರತದ ಸ್ಕ್ವಾಷ್ ತಾರೆ ಜೋಷ್ನಾ ಚಿನ್ನಪ್ಪ ಕಾಮನ್‌ವೆಲ್ತ್ ಕ್ರೀಡಾಕೂಟದ 16ರ ಘಟ್ಟದಲ್ಲಿ ನಿರಾಸೆ ಅನುಭವಿಸಿದ್ದಾರೆ.  ಶುಕ್ರವಾರ ನಡೆದ ಪಂದ್ಯದಲ್ಲಿ ಜೋಷ್ನಾ ತಮ್ಮ ಎದುರಾಳಿ ವಿಶ್ವದ 4ನೇ ಆಟಗಾರ್ತಿ ನ್ಯೂಜಿಲೆಂಡ್‌ನ ಜೊಲ್ಲೆ ಕಿಂಗ್ ವಿರುದ್ಧ ಪರಾಭವಗೊಂಡಿದ್ದಾರೆ. ಆರಂಭದಿಂದಲೇ ಕಿಂಗ್ ವಿರುದ್ಧ ನಿಯಂತ್ರಣ ಸಾಧಿಸುವಲ್ಲಿ ವಿಫಲರಾದ ಜೋಷ್ನಾ 3-11, 8-11, 11-8, 5-11 ಅಂತರದಲ್ಲಿ ಮುಖಭಂಗ ಅನುಭವಿಸಿದರು.
ಸೈಕ್ಲಿಂಗ್‌ನಲ್ಲಿ ಪಲ್ಟಿ
ಗ್ಲಾಸ್ಗೋ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಸೈಕ್ಲಿಸ್ಟ್‌ಗಳು ತಮ್ಮ ನೀರಸ ಪ್ರದರ್ಶನ ಮುಂದುವರಿಸಿದ್ದು, ಭಾರತದ ಪುರುಷರು ವೈಯಕ್ತಿಕ 4000 ಮೀ. ಮತ್ತು ಮಹಿಳೆಯರು ವೈಯಕ್ತಿಕ 3000 ಮೀ. ರೇಸ್‌ನಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಲು ವಿಫಲರಾಗಿದ್ದಾರೆ. ಪುರುಷರ ವಿಭಾಗದಲ್ಲಿ ಮಂಜೀತ್ ಸಿಂಗ್, ಸೋಂಬೀರ್ ಮತ್ತು ಅಮಿತ್ ಕುಮಾರ್ ಕ್ರಮವಾಗಿ 16, 17 ಹಾಗೂ 18ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ಮಹಿಳೆಯರ ವಿಭಾಗದಲ್ಲಿ ಸುನಿತ ಯಾಗ್ಲೆಮ್ 17ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. ಈ ಮೂಲಕ ಸೈಕ್ಲಿಂಗ್‌ನಲ್ಲಿ ಭಾರತದ ನಿರೀಕ್ಷೆ ಹುಸಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.