ಕ್ರೀಡೆ

ಪೀಲೆ ಪುತ್ರ ಎಡಿನೊಗೆ 33 ವರ್ಷ ಜೈಲು

Published On :

ಬ್ರಾಸಿಲ್ಲಾ: ಬ್ರೆಜಿಲ್ ಫುಟ್ಬಾಲ್ ದಂತಕತೆ ಪೀಲೆ ಅವರ ಪುತ್ರ ಹಾಗೂ ಮಾಜಿ ಫುಟ್ಬಾಲ್ ಆಟಗಾರನಾಗಿರುವ ಎಡಿನೊ, ಡ್ರಗ್ಸ್ ಜಾಲದಲ್ಲಿ ಕೈ ಜೋಡಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರಿಗೆ 33 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಪೀಲೆ ಅವರ ಓಲ್ಡ್ ಕ್ಲಬ್ ಸ್ಯಾಂಟೊಸ್‌ನಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿದ್ದ ಎಡಿನೊ, ನಂತರ ತಮ್ಮ ತಂದೆಯವರ ಹೆಸರನ್ನು ಬಳಸಿಕೊಂಡು ಡ್ರಗ್ಸ್ ಜಾಲವನ್ನು ನಡೆಸುತ್ತಿದ್ದ ಎಂಬುದು ತಿಳಿದು ಬಂದಿದೆ. 43 ವರ್ಷದ ಎಡಿನೊ ಅವರ ಜತೆಗೆ ಡ್ರಗ್ಸ್ ಜಾಲದ ಮತ್ತೊಬ್ಬ ದೊರೆ ರೊನಾಲ್ಡೊ ಡೌರ್ಟ್ ಸೇರಿದಂತೆ ಇನ್ನು ಮೂವರಿಗೆ ಶಿಕ್ಷೆ ವಿಧಿಸಲಾಗಿದೆ. ಈ ಜಾಲಾ ಸ್ಯಾಂಟೊಸ್ ಮೂಲದ್ದಾಗಿದ್ದು, ಎಡಿನೊ ಗೋಲ್‌ಕೀಪಿಂಗ್ ಕೋಚ್ ಆಗಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಎಡಿನೊ ಶಸ್ತ್ರಾಸ್ತ್ರ ಹಾಗೂ ಹಣಕಾಸಿನ ವಿಷಯದಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾಗಿ ತಿಳಿದು ವರದಿಯಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಡೌರ್ಟ್ ಹಾಗೂ ಎಡಿನೊ ನಡುವಣ ದೂರವಾಣಿ ಸಂಭಾಷಣೆಯನ್ನು ಆಲಿಸಿದೆ. ಅದರಲ್ಲಿ ಈ ಇಬ್ಬರು ಹೊಸದಾಗಿ ವ್ಯವಹಾರ ಆರಂಭಿಸುವ ಬಗ್ಗೆ ಚರ್ಚಿಸಲಾಗಿತ್ತು. ಅಲ್ಲದೆ ಹೆಚ್ಚಿನ ಹಣ ನೀಡಿದರೆ, ತಮ್ಮ ತಂದೆಯ ಹೆಸರನ್ನು ಬಳಸಿ ವ್ಯವಹಾರಕ್ಕೆ ಸುಗಮ ಹಾದಿ ಮಾಡಿಕೊಡುವುದಾಗಿ ಎಡಿನೊ ತಿಳಿಸಿದ್ದು ಖಚಿತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.