ಭಾರತಕ್ಕೆ ಎರಡನೇ ಪೆಟ್ಟು
ದಿ ಹೇಗ್ (ಹಾಲೆಂಡ್): ಸಾಂಘಿಕ ಪ್ರದರ್ಶನ ನೀಡುವಲ್ಲಿ ಮತ್ತೆ ವಿಫಲವಾಗಿ, ಕೆಲವು ಉತ್ತಮ ಅವಕಾಶಗಳನ್ನು ಕೈಚೆಲ್ಲಿದ ಪರಿಣಾಮ ಭಾರತದ ಆಟಗಾರರಿಗೆ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಸತತ ಎರಡನೇ ಸೋಲು ಎದುರಾಗಿದೆ.
ಭಾನುವಾರ ನಡೆದ ಎ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ, 1-2 ಗೋಲುಗಳ ಅಂತರದಲ್ಲಿ ಇಂಗ್ಲೆಂಡ್ ಎದುರು ಸೋಲನುಭವಿಸಿತು. ವಿಜೇತ ಇಂಗ್ಲೆಂಡ್ ಪರ, ಮಾರ್ಕ್ ಗ್ಲೆಗೋರ್ನ್ ಮತ್ತು ಸೈಮನ್ ಮಾಂಟೆಲ್ ತಲಾ ಒಂದೊಂದು ಗೋಲು ದಾಖಲಿಸಿ ತಮ್ಮ ತಂಡದ ಜಯಭೇರಿಗೆ ಕಾರಣರಾದರು. ಭಾರತ ತಂಡದ ಪರ ಧರ್ಮ್ವೀರ್ ಸಿಂಗ್ ಏಕಮಾತ್ರ ಗೋಲು ಗಳಿಸಿದ್ದು, ತಂಡಕ್ಕೆ ಲಾಭ ತಂದುಕೊಡಲಿಲ್ಲ.
ಇದೇ ಸಾಲಿನಲ್ಲಿ ನವ ದೆಹಲಿಯಲ್ಲಿ ನಡೆದ ವಿಶ್ವ ಲೀಗ್ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧವೇ 0-2 ಗೋಲುಗಳಿಂದ ಸೋಲುಂಡಿದ್ದ ಭಾರತ ತಂಡ ಇಲ್ಲಿಯೂ ಕೂಡ ಸೋಲಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂ ಎದುರು 3-2 ಗೋಲುಗಳಿಂದ ಆಘಾತ ಅನುಭವಿಸಿದ್ದ ಭಾರತ, ಈಗ ಸತತ ಎರಡನೇ ಸೋಲಿನೊಂದಿಗೆ ಸಂಕಷ್ಟಕ್ಕೆ ಸಿಲುಕಿದೆ.
ಇಂಗ್ಲೆಂಡ್ ತಂಡ ತನಗೆ ದೊರೆತ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶದಲ್ಲೇ ಫಲ ಕಂಡಿತು. ಈ ಅವಕಾಶವನ್ನು ಕೈಗೆತ್ತಿಕೊಂಡ ಮಾರ್ಕ್ ಗ್ಲೆಗೋರ್ನ್, ಭಾರತದ ಗೋಲ್ಕೀಪರ್ ಶ್ರೀಜೇಶ್ ಅವರನ್ನು ವಂಚಿಸಿ ಚೆಂಡನ್ನು ಗುರಿಯೆಡೆಗೆ ಸೇರಿಸಿದರು. ಗೋಲು ತಡೆಯುವಲ್ಲಿ ಶ್ರೀಜೇಶ್ ಉತ್ತಮ ನಿರ್ವಹಣೆ ತೋರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

