ಕೆಕೆಆರ್ ಸನ್ಮಾನದಲ್ಲಿ ನೂಕು ನುಗ್ಗಲು

ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್‌ನ 7ನೇ ಆವೃತ್ತಿಯಲ್ಲಿ ಚಾಂಮಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಸನ್ಮಾನಕ್ಕೆ ಮಂಗಳವಾರ ಈಡನ್ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಹಿಂಸೆಗೆ ತಿರುಗಿತು.
ಈ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ಘಟನೆಯಲ್ಲಿ 7 ಜನರು ಗಾಯಗೊಂಡಿದ್ದಾರೆ. ಸನ್ಮಾನ ಸಮಾರಂಭಕ್ಕೆ ಆಗಮಿಸಿದ್ದ ಅಪಾರ ಅಭಿಮಾನಿಗಳು ಈಡನ್ ಗಾರ್ಡನ್ ಪ್ರವೇಶಿಸಲು ಯತ್ನಿಸಿದಾಗ, ಪೊಲೀಸರು ತಡೆದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಕಾರ್ಯಕ್ರಮ ವಿಳಂಬವಾದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಒಳಗೆ ಮತ್ತು ಹೊರಗೂ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಬೇಕಾಯಿತು. ಗಲಾಟೆಯಲ್ಲಿ ಮಹಿಳೆಯರು, ಮಕ್ಕಳು ಗಾಯಗೊಂಡಿದ್ದಾರೆ.
ತಡವಾಗಿ ಬಂದ ಶಾರುಖ್: ಏತನ್ಮಧ್ಯೆ, ಕೋಲ್ಕತಾ ತಂಡದ ಮಾಲೀಕ ಶಾರುಖ್ ಖಾನ್ ತೆರಳುತ್ತಿದ್ದ ವಿಮಾನ ತಡವಾಗಿ ಆಗಮಿಸಿದ್ದರಿಂದ, ಅವರು ಕ್ರೀಡಾಂಗಣ ತಲುಪುವುದು ವಿಳಂಬವಾಯಿತು. ತಡವಾಗಿದ್ದಕ್ಕೆ ಶಾರುಖ್ ಅವರು ಟ್ವೀಟರ್‌ನಲ್ಲಿ ಕ್ಷೆಮೆಯಾಚಿಸಿದ್ದಾರೆ.
ಅದ್ಧೂರಿ ಸನ್ಮಾನ: ಪಶ್ಚಿಮ ಬಂಗಳಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೆಕೆಆರ್ ಮಾಲೀಕರಾದ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಅವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ತಂಡವನ್ನು ಅದ್ಧೂರಿಯಾಗಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಭಿಮಾನಿಗಳತ್ತ ಕೈಬೀಸಿದ ಶಾರುಕ್, ತಂಡದ ಆಟಗಾರರತ್ತ ಮುತ್ತಿನ ಮಳೆಗರಿದರು. ಅಲ್ಲದೆ, ಲಾಠಿ ಜಾರ್ಜ್‌ನಂತಹ ಪ್ರಕರಣ ನಡೆದರೂ ತಂಡದ ಘೋಷ ವಾಕ್ಯವನ್ನು ಶಾರುಕ್ ಕೂಗುತ್ತಾ ಸನ್ಮಾನ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದರು.
ಹಾಡಿ ಉಷಾ ಉತ್ತಪ್ಪ: ಭಾರತದ ಪಾಪ್ ಸಿಂಗರ್ ಎಂದೇ ಖ್ಯಾತರಾಗಿರುವ ಉಷಾ ಉತ್ತಪ್ಪ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನಪ್ರೀಯವಾಗಿದ್ದ ಪ್ರಧಾನಮಂತ್ರಿ ನರೇದ್ರ ಮೋದಿ ಘೋಷ ವಾಕ್ಯ 'ಅಬ್ ಕೀ ಬಾರ್' ಅನುಕರುಣೆ ಮಾಡಿ ಹಾಡಿದ 'ಅಬ್ ಕೀ ಬಾರ್ ಕೆಕೆಆರ್, ಬಾರ್ ಬಾರ್ ಕೆಕೆಆರ್, ಬಾರ್ ಬಾರ್ ಚೆಕ್ಕಾ ಮಾರ್' ಎಂಬ ಗೀತೆಯನ್ನು ಅವರು ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


