ಕ್ರೀಡೆ

ವಿಶ್ವ ಹಾಕಿ: 2 ಪ್ರಶಸ್ತಿ ಕನಸಲ್ಲಿ 3 ತಂಡಗಳು

Published On :

ದಿ ಹೇಗ್: ಎರಡು ಪ್ರಶಸ್ತಿ ಕನಸಲ್ಲಿ ಮೂರು ತಂಡಗಳು. ಇದು ಹಾಲೆಂಡ್‌ನಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್ ಪಂದ್ಯಾವಳಿಯ ಕತೆ. ಕಾರಣ, ಪಂದ್ಯಾವಳಿಯಲ್ಲಿ ಮೂರು ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ, ಅರ್ಜೆಂಟೀನಾ ಹಾಗೂ ನೆದರ್ಲೆಂಡ್‌ನ ಪುರುಷರ ಮತ್ತು ಮಹಿಳೆಯರ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಹೀಗಾಗಿ ಆ ಎಲ್ಲ ತಂಡಗಳು ಎರಡು ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿವೆ.
2012ರ ಒಲಿಂಪಿಕ್ಸ್ ಕ್ರೀಡಾಕೂಟದ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೋಲನುಭವಿಸಿದ್ದ ಹಾಲೆಂಡ್ ತಂಡ, ಈ ಪಂದ್ಯದಲ್ಲಿ ಚಿನ್ನದ ಮೇಲೆ ಕಣ್ಣಿಟ್ಟಿದೆ. ಇನ್ನು ಅದೇ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಹಾಲೆಂಡ್ ವನಿತೆಯರ ತಂಡ ಈಗ ಮತ್ತೆ ಪ್ರಶಸ್ತಿಯತ್ತ ಗುರಿ ಇಟ್ಟಿದೆ.ಈ ಹಿಂದೆ 1998ರಲ್ಲಿ ಪುರುಷರ ಮಹಿಳೆಯರ ವಿಶ್ವಕಪ್ ಹಾಕಿಯನ್ನು ಹಾಲೆಂಡ್‌ನಲ್ಲೇ ಜಂಟಿಯಾಗಿ ಆಯೋಜಿಸಿದ್ದಾಗ, ಆತಿಥೇಯ ಪುರುಷರ ತಂಡ, ಫೈನಲ್‌ನಲ್ಲಿ ಸ್ಪೇನ್ ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದಿತ್ತು. ಆದರೆ, ವನಿತೆಯರ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು.
ಈಗ ಮತ್ತೆ ಆ ಭಾಗ್ಯ ಹಾಲೆಂಡ್‌ಗೆ ಒದಗಿಬಂದಿದೆ. ಈಗ ಉಭಯ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ಎರಡು ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹಾಲೆಂಡ್ ಎದುರು ನೋಡುತ್ತಿದೆ.ಇನ್ನು ಆಸ್ಟ್ರೇಲಿಯಾದ ಪುರುಷ ಮತ್ತು ಮಹಿಳೆಯರ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ಅದೂ ಎರಡು ಪ್ರಶಸ್ತಿಗಳ ಕನಸು ಕಾಣುತ್ತಿದೆ. ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳಲು ವಿಶೇಷ ಕಾರ್ಯತಂತ್ರ ರೂಪಿಸುತ್ತಿರುವ ಮತ್ತೊಂದು ತಂಡ ಅರ್ಜೆಂಟೀನಾ. ಅರ್ಜೆಂಟೀನಾದ ಪುರುಷ ಮತ್ತು ವನಿತೆಯರ ತಂಡ ಸಹ ಸೆಮೀಸ್‌ನಲ್ಲಿ ಸೆಣಸಲು ಸಿದ್ಧವಾಗಿವೆ. ಅರ್ಜೆಂಟೀನಾ ತಂಡ ಮಹಿಳೆಯರು ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ 3ನೇ ಪ್ರಶಸ್ತಿಗಾಗಿ ಎದುರು ನೋಡುತ್ತಿದ್ದರೆ, ಪುರುಷರ ತಂಡ ಇದೇ ಮೊದಲ ಬಾರಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದೆ.                                                       ಸೆಮೀಸ್ ಸೆಣಸಾಟ:            ಪುರುಷರು: ಆಸ್ಟ್ರೇಲಿಯಾ ಢ/ಡ ಅರ್ಜೆಂಟೀನಾ- ಹಾಲೆಂಡ್ ಢ/ಡ ಇಂಗ್ಲೆಂಡ್
ವನಿತೆಯರು: ಹಾಲೆಂಡ್ ಢ/ಡ ಅರ್ಜೆಂಟೀನಾ- ಅಮೆರಿಕ ಢ/ಡ ಆಸ್ಟ್ರೇಲಿಯಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.