ಕ್ರೀಡೆ

ಕಳೆದ ಎರಡು ಮುಖಾಮುಖಿ

Published On :

ಬ್ರೆಜಿಲ್ ಮತ್ತು ಕ್ರೊವೇಷಿಯಾ ಈಗ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿವೆ. 2005ರಲ್ಲಿ ನಡೆದ ಸ್ನೇಹ ಸರಣಿಯ ಪಂದ್ಯದಲ್ಲಿ ಉಭಯ ತಂಡಗಳು 1-1 ಗೋಲಿನಿಂದ ಡ್ರಾ ಫಲಿತಾಂಶ ಪಡೆದಿದ್ದವು. ನಂತರ ಬರ್ಲಿನ್ ನಲ್ಲಿ ನಡೆದ 2006 ಫಿಫಾ ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಎರಡನೇ ಬಾರಿಗೆ ಎದುರಾದಾಗ ಬ್ರೆಜಿಲ್ ತಂಡ 1-0 ಗೋಲಿನಿಂದ ಜಯಗಳಿಸಿತ್ತು.
ಆತಿಥೇಯ ಬ್ರೆಜಿಲ್ ತಂಡ ತನ್ನ ಕಳೆದ 8 ಆರಂಭಿಕ ಪಂದ್ಯಗಳಲ್ಲಿ ಒಂದರಲ್ಲೂ ಸೋಲನುಭವಿಸಿಲ್ಲ. ದಾಖಲೆಯ 5 ಬಾರಿ ಜಯಗಳಿಸುವುದರ ಜೊತೆಗೆ, ಉಳಿದ 3 ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಪಡೆದಿತ್ತು. 1934ರಿಂದ ಈವರೆಗೆ ಆತಿಥೇಯ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿಯೇ ಇಲ್ಲ.
ಈಗ ಬ್ರೆಜಿಲ್ ಪಡೆ, ನಾಲ್ಕನೇ ಬಾರಿಗೆ ವಿಶ್ವಕಪ್‌ನಲ್ಲಿ ಮೊದಲ ಪಂದ್ಯದಲ್ಲೇ ಸೆಣಸುತ್ತಿದೆ. ಹಿಂದೆ ಮೂರು ಬಾರಿ ಆಡಿದ್ದಾಗ 2ರಲ್ಲಿ ಗೆಲವು ಮತ್ತು 1ರಲ್ಲಿ ಡ್ರಾ ಸಾಧಿಸಿತ್ತು. ಮತ್ತೊಂದೆಡೆ ಕ್ರೊವೇಷಿಯಾ ಮಾತ್ರ ವಿಶ್ವಕಪ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆಲುವೇ ಕಾಣದೇ ನಿರ್ಗಮಿಸಿದೆ.
ಈ ಮಧ್ಯೆ ಬ್ರೆಜಿಲ್‌ನ ಲೂಯಿಜ್ ಫೆಲಿಪ್ ಸ್ಕೊಲಾರಿ ಅವರು ಕ್ರೊವೇಷಿಯಾ ವಿರುದ್ಧದ ಪಂದ್ಯದ ಮೂಲಕ ಅತಿ ಹೆಚ್ಚು ಪಂದ್ಯಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವಿಗಳ ಸಾಲಿನಲ್ಲಿ ಜಂಟಿ 10ನೇ ಸ್ಥಾನದಲ್ಲಿ ನಿಲ್ಲಲಿದ್ದಾರೆ. ಗುಂಪು ಸುತ್ತಿನ ಪಂದ್ಯಗಳು ಮುಗಿಯುತ್ತಿದ್ದಂತೆ ಸ್ಕೊಲಾರಿ ಅವರು ಸಾರ್ವಕಾಲಿಕ ರ್ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೇರಲಿದ್ದಾರೆ.

ಪಂದ್ಯ ಆರಂಭ: ಇಂದು ಮಧ್ಯರಾತ್ರಿ 1.30 ಗಂಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.