ಭಾರತಕ್ಕೆ ಕೊರಿಯಾ ಸವಾಲು
ದಿ ಹೇಗ್ (ಹಾಲೆಂಡ್): ಭಾರತ ತಂಡದ ಆಟಗಾರರು ವಿಶ್ವಕಪ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಶನಿವಾರ ನಡೆಯಲಿರುವ ಒಂಬತ್ತನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ಎಂಟನೇ ಸ್ಥಾನ ಪಡೆದಿದ್ದ ಭಾರತ, ಈ ಬಾರಿ ಆ ಪ್ರದರ್ಶನ ಉತ್ತಮಪಡಿಸಿಕೊಳ್ಳಲಾಗದೇ ದಯನೀಯ ವೈಫಲ್ಯ ಅನುಭವಿಸಿತು.
2013ರ ಏಷ್ಯಾ ಕಪ್ ಫೈನಲ್ನಲ್ಲಿ ಇದೇ ದಕ್ಷಿಣ ಕೊರಿಯಾ ವಿರುದ್ಧ 3-4 ಗೋಲುಗಳಿಂದ ಸೋಲನುಭವಿಸಿದ್ದ ಭಾರತ ತಂಡದ ಆಟಗಾರರು ಇಲ್ಲಿ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಇಂಚಾನ್ ಏಷ್ಯನ್ ಗೇಮ್ಸ್ ಆರಂಭವಾಗಲು ಇನ್ನು ಮೂರು ತಿಂಗಳು ಉಳಿದಿದ್ದು, ವಿಶ್ವಕಪ್ನಲ್ಲಿನ ಕಳಪೆ ಪ್ರದರ್ಶನದಿಂದ ಹೊರಬರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಪಖಂಡಗಳ ಚಾಂಪಿಯನ್ ದಕ್ಷಿಣ ಕೊರಿಯಾ ವಿರುದ್ಧ ತಮ್ಮ ಅತ್ಯುತ್ತಮ ಹೋರಾಟ ಸಂಘಟಿಸುವ ಮೂಲಕ ಭಾರತ ತಂಡದ ಆಟಗಾರರು ಗೆಲವಿನ ನಗೆಬೀರಬೇಕಾಗಿದೆ.
ವಿದೇಶಿ ಕೋಚ್ ಟೆರ್ರಿ ವಾಲ್ಶ್ ಗರಡಿಯಲ್ಲಿ ಪಳಗಿರುವ ಭಾರತದ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಹಿಂದಿನ ಪ್ರದರ್ಶನಗಳ ಬಗ್ಗೆ ಯೋಚಿಸದೇ ಏಷ್ಯಾದ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಉತ್ತಮ ಆಟ ಪ್ರದರ್ಶಿಸಿ ಗೆಲವಿಗಾಗಿ ಪ್ರಯತ್ನಿಸಬೇಕೆಂದು ಟೆರ್ರಿ ವಾಲ್ಶ್ ತಮ್ಮ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಮುಖ್ಯವಾಗಿ ಆಟಗಾರರು ತಮ್ಮ ಮೇಲೆ ತಾವು ನಂಬಿಕೆ ಇಟ್ಟು ಹೋರಾಟ ನಡೆಸಬೇಕೆಂದು ಅವರು ಸರ್ದಾರ್ ಸಿಂಗ್ ನೇತೃತ್ವದ ಭಾರತೀಯ ತಂಡಕ್ಕೆ ಸೂಚಿಸಿದ್ದಾರೆ.
ಏಷ್ಯನ್ ಗೇಮ್ಸ್ನಲ್ಲಿ ಈ ಎರಡೂ ತಂಡಗಳೇ ಮಗದೊಮ್ಮೆ ಮುಖಾಮುಖಿಯಾಗಲಿರುವ ಕಾರಣ ಇಲ್ಲಿನ ಪ್ರದರ್ಶನ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ. 2016ರ ರಿಯೊ ಡಿ ಜನೈರೋ ಒಲಿಂಪಿಕ್ಸ್ಗೆ ಅರ್ಹತಾ ಟೂರ್ನಿ ಎನಿಸಿರುವ ಏಷ್ಯನ್ ಗೇಮ್ಸ್ ಭಾರತದ ಪಾಲಿಗೆ ಮಹತ್ವದ ಕದನವಾಗಿದೆ.
ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಈ ಪೈಪೋಟಿಯಿಂದ ಏಷ್ಯನ್ ತಂಡಗಳ ರ್ಯಾಂಕಿಂಗ್ ಕೂಡ ನಿರ್ಧಾರವಾಗಲಿದೆ. ಮಲೇಷಿಯಾ ತಂಡ ಪುರುಷರ ವಿಭಾಗದಲ್ಲಿ ಪಾಲ್ಗೊಂಡಿರುವ ಏಷ್ಯಾದ ಮೂರನೇ ತಂಡವಾಗಿದೆ.
ಭಾರತದ ಆಟಗಾರರು ತಮ್ಮ ಕಳೆದ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ವಿರುದ್ಧ 0-4 ಗೋಲುಗಳಿಂದ ಸೋಲನುಭವಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

