ಹಾಲೆಂಡ್ ವನಿತೆಯರು ಫೈನಲ್ಗೆ
ದಿ ಹೇಗ್ (ಹಾಲೆಂಡ್): ಒಲಿಂಪಿಕ್ಸ್ ಚಾಂಪಿಯನ್ ಹಾಲೆಂಡ್ ವನಿತೆಯರ ಹಾಕಿ ತಂಡ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದು, ಚಾಂಪಿಯನ್ ಪಟ್ಟ ಧರಿಸುವ ತನ್ನ ಆಸೆಯನ್ನು ಜೀವಂತಾಗಿರಿಸಿಕೊಂಡಿದೆ.
ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 4-0 ಗೋಲುಗಳ ಅಂತರದಿಂದ ವಿಜಯ ಸಾಧಿಸಿದ ಹಾಲೆಂಡ್ ವನಿತೆಯರು, ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಈಗ ಫೈನಲ್ ಪಂದ್ಯದಲ್ಲಿ ಎರಡು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದ್ದಾರೆ. ಮಹಿಳೆಯರ ಫೈನಲ್ ಪಂದ್ಯ ಶನಿವಾರ ನಡೆಯಲಿದೆ.
ಅರ್ಜೆಟೀನಾ ವನಿತೆಯರ ತಂಡ ಈ ಹಿಂದೆ ಎರಡು ವಿಶ್ವಕಪ್ ಗೆದ್ದುಕೊಂಡಿದೆ. ಆದರೆ, ತವರಿನ ಅಂಗಣದಲ್ಲಿ ತನ್ನ ನೈಜ ವೇಗದ ಪ್ರದರ್ಶನ ನೀಡುವಲ್ಲಿ ಕೊಂಚ ತಡವರಿಸುತ್ತಿದೆ.
ಗಾಯಗೊಂಡಿದ್ದರೂ, ಪಂದ್ಯದಲ್ಲಿ ಆಡಿದ ಅರ್ಜೆಂಟೀನಾದ ಲೂಸಿಯಾನ ಅಯಮೇರ್ ಅವರು ಸೆಮಿಫೈನಲ್ನಲ್ಲಿ ಅಂಗಣಕ್ಕಿಳಿದಿದ್ದರು.ಪಂದ್ಯದ 10ನೇ ನಿಮಿಷದಲ್ಲಿ ಕ್ಸಾನ್ ಡೆ ವಾರ್ಡ್ ಅವರು ಗೋಲು ದಾಖಲಿಸುವ ಮೂಲಕ ಹಾಲೆಂಡ್ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತು. ನಂತರ 16ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿಯಲ್ಲಿ ಅರ್ತಜೆ ಪೌಮೆನ್ ಹಾಗೂ 22ನೇ ನಿಮಿಷದಲ್ಲಿ ಕಿಮ್ ಲ್ಯಾಮ್ಮರ್ಸ್ ಅವರು ಗೋಲು ದಾಖಲಿಸುವ ಮೂಲಕ 3-0 ಅಂತರದಿಂದ ಮುನ್ನಡೆ ಕಂಡುಕೊಂಡಿತು.
ಕೊನೆಯ ಕ್ಷಣದಲ್ಲಿ ಲ್ಯಾಮರ್ಸ್ ಗಳಿಸಿದ ಗೋಲಿನೊಂದಿಗೆ ಪಂದ್ಯದಲ್ಲಿ ಹಾಲೆಂಡ್ ವನಿತೆಯರು ಪಾರಮ್ಯ ಮೆರೆದರು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಕೆಲ್ಲೀ ವೈಟ್, ಜಾರ್ಜಿಯಾ ಪಾರ್ಕರ್ ಹಾಗೂ ಜೋಡಿಸ್ ಸ್ಮಿತ್ ಕೆನ್ನಿ ಅವರು ಅಮೆರಿಕ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಗೋಲು ದಾಖಲಿಸಿದರು. ಹೀಗಾಗಿ ಅಮೆರಿಕ ವಿರುದ್ಧ ಆಸ್ಟ್ರೇಲಿಯಾ 3-1 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

